×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಕಾಪು:ಸ್ಟಾಪ್ ವೋಟ್ ಚೋರಿ ಸ್ಟಿಕರ್ ಅಭಿಯಾನಕ್ಕೆ ವಿನಯ್ ಕುಮಾರ್ ಸೊರಕೆ ಚಾಲನೆ

ಅಖಿಲ ಭಾರತ ಕಾಂಗ್ರೆಸ್ ಸಮಿತಿ ಹಾಗೂ ರಾಷ್ಟ್ರೀಯ ಯುವ ಕಾಂಗ್ರೆಸ್ ಸಮಿತಿಯ ಸೂಚನೆಯ ಮೇರೆಗೆ ರಾಷ್ಟ್ರವ್ಯಾಪಿಯಾಗಿ ನಡೆಯುತ್ತಿರುವ “ಸ್ಟಾಪ್ ವೋಟ್ ಜೂರಿ” ಸ್ಟೀಕರ್‌ ಅಭಿಯಾನಕ್ಕೆ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಕಾಪು ರಾಜೀವ ಭವನದಲ್ಲಿ ಚಾಲನೆ ನೀಡಿದ್ದಾರೆ.ಬಳಿಕ ಮಾತನಾಡಿದ ಅವರು ಕೇಂದ್ರ ಸರ್ಕಾರ ಸಂವಿಧಾನದ ಎಲ್ಲಾ ಅಸ್ತ್ರಗಳನ್ನು ಶಿಥಿಲಗೊಳಿಸುವ ಕೆಲಸ ಮಾಡುತ್ತಿದೆ. ಚುನಾವಣಾ ಆಯೋಗವನ್ನು ಕಪಿ ಮುಷ್ಠಿಯಲ್ಲಿ ಹಿಡಿದುಕೊಂಡು ಚುನಾವಣೆಯನ್ನು ಅಕ್ರಮವಾಗಿ ಗೆಲ್ಲುವ ಕೆಲಸವನ್ನು ಮಾಡುತ್ತಿದೆ, ಬಾಬಾ ಸಾಹೇಬ್ ಅಂಬೇಡ್ಕರ್ ರವರ ಸಂವಿಧಾನ ಪ್ರತಿಯೋಬ್ಬರಿಗೂ ಮತದಾನ ಮಾಡುವ ಹಕ್ಕನ್ನು ನೀಡಿದೆ, ಕೆಲವೊಂದು ರಾಷ್ಟ್ರಗಳಲ್ಲಿ ಕೆಲವರಿಗೆ ಮಾತ್ರ ಮತದಾನದ ಹಕ್ಕಿದ್ದರೆ, ನಮ್ಮ ದೇಶದಲ್ಲಿ ರಾಷ್ಟ್ರಪತಿಗೂ ಒಂದೇ ಮತ ಚಲಾಯಿಸುವ ಹಕ್ಕು ಕಟ್ಟ ಕಡೆಯ ಬಡವನಿಗೂ ಒಂದೇ ಮತವನ್ನು ಚಲಾಯಿಸುವ ಹಕ್ಕು ಇದೆ, ಆದರೆ ನಮ್ಮ ಓಟಿನ ಹಕ್ಕನ್ನು ಮೋದಿ ನೇತ್ರತ್ವದ ಕೇಂದ್ರ ಸರ್ಕಾರ ಚುನಾವಣಾ ಆಯೋಗವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದೆ, ಸೋಲಾಪುರದ ಸಭೆಯೊಂದರಲ್ಲಿ ಅಮಿತ್‌ ಷಾ ಕಳ್ಳ ಓಟುಗಳನ್ನು ಸೇರಿಸಿ
ಎಂಬುದಾಗಿ ಕರೆಯನ್ನು ಕೊಟ್ಟಿದ್ದು ಆ ಹಿನ್ನಲೆಯಲ್ಲಿ ಪಾರ್ಲಿಮೆಂಟಿನ ಚುನಾವಣೆಗೂ ಎಂ ಎಲ್ ಎ ಚುನಾವಣೆಗೂ 41ಲಕ್ಷ ಮತಗಳ ವ್ಯತ್ಯಾಸ ಕಂಡು ಬಂದಿದೆ, ಇಂಥಹ ಹಲವಾರು ಸಮೀಕ್ಷೆಗಳ ಬಗ್ಗೆ ನಮ್ಮ ನಾಯಕ ರಾಹುಲ್‌ ಗಾಂಧಿ ಸಂಶೋಧನೆ ನಡೆಸಿದ್ದಾರೆ ಎಂಬ ಕಾರಣಕ್ಕೆ ಚುನಾವಣಾ ಆಯೋಗ ಅವರ ಮೇಲೆಯೇ ಗಧಾ ಪ್ರಹಾರ ನಡೆಸಿದೆ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಡೆಯುತ್ತಿರುವ ಅನ್ಯಾಯದ ವಿರುದ್ಧ ಮತದಾರರನ್ನು ಎಚ್ಚರಿಸುವ ಸಲುವಾಗಿ ರಾಜ್ಯ ಯುವ ಕಾಂಗ್ರೆಸ್ ನೇತ್ರತ್ವದಲ್ಲಿ ನಡೆಯುತ್ತಿರುವ ಸ್ಟಿಕರ್ ಅಭಿಯಾನಕ್ಕೆ ಚಾಲನೆ ನೀಡಲಾಗಿದ್ದು, ನಮ್ಮ ಸಂವಿಧಾನದ ಬದ್ಧ ಹಕ್ಕನ್ನು ಉಳಿಸಿಕೊಳ್ಳುವಂತೆ ಸೊರಕೆ ಕರೆ ನೀಡಿದ್ದಾರೆ.ಈ ಸಂದರ್ಭ ಕಾಪು ಬ್ಲಾಕ್ ಕಾಂಗ್ರೆಸ್ ದಕ್ಷಿಣ ಇದರ ಅಧ್ಯಕ್ಷರಾದ ವೈ ಸುಕುಮಾರ್, ಕಾಪು ಕಾಂಗ್ರೆಸ್ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಮೊಹಮ್ಮದ್ ನಿಯಾಜ್, ಪ್ರಮುಖರಾದ ಗಣೇಶ್ ಕೋಟ್ಯಾನ್, ಶೇಖರ್ ಹೆಜಮಾಡಿ, ಸುಕುಮಾರ್, ನವೀನ್ ಎನ್. ಶೆಟ್ಟಿ, ಸನಾವರ್ ಶೇಕ್ ,ಪ್ರಭಾಕರ್ ಆಚಾರ್ಯ, ಮೆಲ್ವಿನ್ ಡಿಸೋಜ, ದೇವರಾಜ್ ಕಾಪು, ಉದಯ ಸನೀಲ್, ಸುನೀಲ್ ಬಂಗೇರ, ರೀನಾ ಡಿಸೋಜ ಹೆಜಮಾಡಿ, ಸುಧೀರ್ ಕರ್ಕೇರ, ಅಖಿಲೇಶ್ ಕೋಟ್ಯಾನ್‌, ಯುಸಿ ಶೇಕಬ್ಬ ಮುಂತಾದವರಿದ್ದರು.

Leave a Reply

Your email address will not be published. Required fields are marked *