×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಶ್ರೀಶಂ ಕ್ರೆಡಿಟ್ ಕೋ-ಆಪ್ ಸೊಸೈಟಿ ಉದ್ಘಾಟಿಸಿದ – ಯಶ್‌ಪಾಲ್‌

ಅದಿಉಡುಪಿ : ಎ ಪಿ ಎಂ ಸಿ ಕಟ್ಟಡದಲ್ಲಿ ನೂತನವಾಗಿ ಶ್ರೀಶಂ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಉದ್ಘಾಟನೆ ರವಿವಾರ ಕಚೇರಿ ಆವರಣದಲ್ಲಿ ನಡೆಯಿತು.ಸಭಾ ಕಾರ್ಯಕ್ರಮವನ್ನು ಶಾಸಕ ಯಶ್ ಪಾಲ್ ಎ.ಸುವರ್ಣ ಉದ್ಘಾಟಿಸಿದರು. ಜಿಲ್ಲಾ ಸಹಕಾರಿಯೂನಿಯನ್ ಅಧ್ಯಕ್ಷಬಿ.ಜಯಕರ ಶೆಟ್ಟಿ ಇಂದ್ರಾಳಿ ಕಚೇರಿ ಉದ್ಘಾಟಿಸಿದರು. ಮಾಜಿ ಶಾಸಕ ಕೆ. ರಘುಪತಿ ಭಟ್ ದೀಪ ಪ್ರಜ್ವಲನೆ ಮಾಡಿದರು. ಉದ್ಯಮಿ ಪ್ರಸಾದ್ ರಾಜ್ ಕಾಂಚನ್ ಅವರು ಗಣಕಯಂತ್ರ ಉದ್ಘಾಟಿಸಿದರು ಸಭಾ. ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾಸಕ ಯಶ್‌ಪಾಲ್ ಎ. ಸುವರ್ಣ ಮಾತನಾಡಿ, ಸಹಕಾರಿ ಕ್ಷೆತ್ರವು ದೇಶದ ಅಭಿವೃದ್ಧಿಗೆ ಅತೀ ದೊಡ್ಡ ಕೊಡುಗೆ ನೀಡಿದೆ ಕೇಂದ್ರ ಸರಕಾರವು ಇದಕ್ಕಾಗಿ ಪ್ರತ್ಯೇಕ ಸಚಿವಾಲಯ ಸ್ಥಾಪಿಸುವ ಮೂಲಕ ಜನರ ವಿಶ್ವಾಸ ಗಳಿಸಿದೆ ಎಂದರು.ಗಣಕ ಯಂತ್ರದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಪ್ರಸಾದ್ ರಾಜ್ ಕಾಂಚನ್, ಜಿಲ್ಲೆಯಲ್ಲಿ 750ಕ್ಕೂ ಅಧಿಕ ಸಹಕಾರಿ ಸಂಸ್ಥೆಗಳಿರುವುದು ಉತ್ತಮ ಜಿಲ್ಲೆಯ ಆರ್ಥಿಕ ಅಭಿವೃದ್ಧಿಗೆ ಇಂತಹ ಸೊಸೈಟಿಗಳು ಮುಂದೆ ಬಂದು ಜಿಲ್ಲೆಯನ್ನು ನಂಬರ್ ಒನ್ ಮಾಡಬೇಕು ಎಂದರು.ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಬಿ. ಜಯಕರ ಶೆಟ್ಟಿ ಇಂದ್ರಾಳಿ ಕಚೇರಿ ಉದ್ಘಾಟಿಸಿ, ಜಿಲ್ಲೆಯಲ್ಲಿರುವ ವಿವಿಧ ಸೊಸೈಟಿಗಳಲ್ಲಿ 4 ಸಾವಿರ ಕೋಟಿ ರೂ. ಠೇವಣಿಯಿದೆ ಎಂದರು. ಸೊಸೈಟಿ ಅಧ್ಯಕ್ಷ ಕೆ. ಶಿವಪ್ರಸಾದ್ ಶೆಟ್ಟಿ ಮಜಲುಮನೆ ಅಧ್ಯಕ್ಷತೆ ವಹಿಸಿ, ಪ್ರಸ್ತಾವನೆಗೈದರು.

ಮಾಜಿ ಶಾಸಕ ಕೆ. ರಘುಪತಿ ಭಟ್ ದೀಪ ಪ್ರಜ್ವಲನೆ ಮಾಡಿ ಶುಭಹಾರೈಸಿದರು. ಸಿರಿ ನಗದು ಠೇವಣಿ ಪತ್ರವನ್ನು ಕೊಡವೂರು ಶ್ರೀ ಸಾಯಿ ಬಾಬಾ ಮಂದಿರದ ಧರ್ಮದರ್ಶಿ ಕೆ. ದಿವಾಕರ ಶೆಟ್ಟಿ ತೋಟದಮನೆ ಬಿಡುಗಡೆಗೊಳಿಸಿದರು

.ಎಪಿಎಂಸಿ ಕಾರ್ಯದರ್ಶಿ (ಪ್ರಭಾರ) ಗೋಪಾಲ ಕಾಕನೂರ, ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರಿನ ಉಡುಪಿ ತಾಲೂಕು ಸಮಿತಿ ಸಂಚಾಲಕ ಶಿವಪ್ರಸಾದ್ ಹೆಗ್ಡೆ ಗುರುನಿತ್ಯಾನಂದ ಕೆ.ಕೋ-ಆಪ್. ಸೊಸೈಟಿ ಅಧ್ಯಕ್ಷ ಸುರೇಶ್ ಶೆಟ್ಟಿ ಕೊಡವೂರು ವ್ಯ. ಸೇ.ಸ.ಸಂಘದ ಅಧ್ಯಕ್ಷ ನಾರಾಯಣ ಬಲ್ಲಾಳ್‌, ಪಂದುಬೆಟ್ಟು ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಪಿ. ಕೃಷ್ಣ ಶೆಟ್ಟಿ ಮಲ್ಪೆ ಬಿಲ್ಲವರ ಸಮಾಜ ಸೇವಾ ಸಂಘದ ಅಧ್ಯಕ್ಷ ಗೋಪಾಲ ಸಿ. ಬಂಗೇರ, ನಗರಸಭೆ ಸದಸ್ಯೆ ಸವಿತಾ ಹರೀಶ್‌ ರಾಮ್, ಸೊಸೈಟಿ ಉಪಾ ಧ್ಯಕ್ಷ ಸಂತೋಷ್ ಶೆಟ್ಟಿ ಬೈಲುಮನೆ, ನಿರ್ದೇಶಕರು ಉಪಸ್ಥಿತರಿದ್ದರು. ನಿರ್ದೇಶಕರಾದ ಅಮೃತ್ ಶೆಟ್ಟಿ ಕಂಬಳಕಟ್ಟ ಸ್ವಾಗತಿಸಿ, ಸ್ಥಿತಾ ವಿದ್ಯಾಧರ್ ಶೆಟ್ಟಿ ವಂದಿಸಿದರು. ತೇಜೇಶ್ ಜೆ. ಬಂಗೇರ ನಿರೂಪಿಸಿದರು.

Leave a Reply

Your email address will not be published. Required fields are marked *