×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಕರ್ನಾಟಕ ರಕ್ಷಣಾ ವೇದಿಕೆ, ಉಡುಪಿ ವತಿಯಿಂದ ಆಟಿ ಅಮಾವಾಸ್ಯೆ ಕಷಾಯ ವಿತರಣೆ.

ಉಡುಪಿ: ಕರ್ನಾಟಕ ರಕ್ಷಣಾ ವೇದಿಕೆ, ಉಡುಪಿ ಜಿಲ್ಲಾ ಘಟಕದ ವತಿಯಿಂದ, ಜಿಲ್ಲಾಧ್ಯಕ್ಷರಾದ ಪ್ರಭಾಕರ ಪೂಜಾರಿ ಅವರ ನೇತೃತ್ವದಲ್ಲಿ ಆಟಿ ಅಮಾವಾಸ್ಯೆಯ ಪ್ರಯುಕ್ತ ಸಾರ್ವಜನಿಕರಿಗೆ ಆಟಿ ಕಷಾಯ ವಿತರಣಾ ಕಾರ್ಯಕ್ರಮವನ್ನು ಉಡುಪಿ ಸರ್ವಿಸ್ ಬಸ್ ನಿಲ್ದಾಣದ ಬಳಿಯಿರುವ ಕ್ಲಾಕ್ ಟವರ್ ಮುಂಭಾಗದಲ್ಲಿ ಬೆಳಿಗ್ಗೆ 7:00 ಗಂಟೆಯಿಂದ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯವರ ಆಹ್ವಾನದ ಮೇರೆಗೆ ಕಾರ್ಯಕ್ರಮಕ್ಕೆ ಭೇಟಿ ನೀಡಿ, ಆಗಮಿಸಿದ ಸಾರ್ವಜನಿಕರಿಗೆ ಆಟಿ ಕಷಾಯ ವಿತರಿಸಿ, ಇಂತಹ ಉತ್ತಮ ಕಾರ್ಯಕ್ರಮವನ್ನು ಆಯೋಜಿಸಿದ್ದ ಕರ್ನಾಟಕ ರಕ್ಷಣಾ ವೇದಿಕೆಯ ಸದಸ್ಯರಿಗೆ ಅಭಿನಂದನೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಮಾಂಡೋವಿ ಬಿಲ್ಡರ್ಸ್‌ ಮುಖ್ಯಸ್ಥರಾದ ಜೇಸನ್ ಡಯಾಸ್, ಕರ್ನಾಟಕ ರಕ್ಷಣಾ ವೇದಿಕೆ, ಉಡುಪಿ ಜಿಲ್ಲಾ ಘಟಕದ ಉಪಾಧ್ಯಕ್ಷರಾದ ಅನಿಲ್ ಪೂಜಾರಿ ಹಾಗೂ ಸಾಬೂದ್ದೀನ್, ಪ್ರಧಾನ ಸಂಚಾಲಕರಾದ ಕಿರಣ್ ಪಿಂಟೋ, ಜೊತೆ ಕಾರ್ಯದರ್ಶಿಗಳಾದ ಮಜೀದ್, ಜಿಲ್ಲಾ ಮಹಿಳಾ ಸದಸ್ಯರಾದ ಜಯಶ್ರೀ ಸುವರ್ಣ, ಜಿಲ್ಲಾ ಸದಸ್ಯರಾದ ಅಜರುದ್ದೀನ್, ನಾಗಲಕ್ಷ್ಮೀ ಹಾಗೂ ಪೂರ್ಣಿಮಾ ಅವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *