×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಪಡುಬಿದ್ರಿ ಬಂಟರ ಭವನದಲ್ಲಿ ಬೃಹತ್ ಅಹಾರ ಮತ್ತು ಸ್ವದೇಶಿ ಉತ್ಪನ್ನಗಳ ಮಾರಾಟ ಮೇಳದ ಉದ್ಘಾಟನೆ

ಪಡುಬಿದ್ರಿ ರೋಟರಿ ಕ್ಲಬ್, ಓಂಕಾರ್ ಕಾಸ್ಟೋಮ್ಸ್ ಮತ್ತು ಕಲಾ ಸಂಗಮ, ಸರ್ವ ಕಾಲೇಜು ವಿದ್ಯಾರ್ಥಿ ಶಕ್ತಿ (ರಿ) ಬೆನಕ ಇವೆಂಟ್ಸ್ ಸಹಭಾಗಿತ್ವದಲ್ಲಿ ಮಾರ್ಚ್ 27 ರಿಂದ ಮಾರ್ಚ್ 29 ರ ವರಗೆ ಪಡುಬಿದ್ರಿ ಬಂಟರ ಸಂಘದಲ್ಲಿ 3 ದಿನಗಳ ಕಾಲ ನಡೆಯುವ ಬೃಹತ್ ಅಹಾರ ಮತ್ತು ಸ್ವದೇಶಿ ಉತ್ಪನ್ನಗಳ ಮಾರಟ ಮೇಳದ ಉದ್ಘಾಟನಾ ಸಮಾರಂಭ ಕಾರ್ಯಕ್ರಮವು ಶುಕ್ರವಾರವಾರದಂದು ಪಡುಬಿದ್ರಿ ಬಂಟರ ಭವನದಲ್ಲಿ ನಡೆಯಿತು. ಸಮಾರಂಭದ ಅಧ್ಯಕ್ಷತೆ ಯನ್ನು ರೋಟರಿ ಅಧ್ಯಕ್ಷ .ಸುನಿಲ್ ಕುಮಾರ್ ವಹಿಸಿದ್ದರು.

ಪಡುಬಿದ್ರಿ ಬಂಟರ ಸಂಘದ ಮಾಜಿ ಅಧ್ಯಕ್ಷ ನವೀನ್ ಚಂದ್ರ ಜೆ ಶೆಟ್ಟಿ ಅವರು ಸ್ವದೇಶಿ ಮೇಳವನ್ನು ಉದ್ಘಾಟಿಸಿದರು. ಉದ್ಘಾಟಿಸಿ ಮಾತನಾಡಿದ ಅವರು ಸ್ವದೇಶಿ ಮೇಳವು ಆತ್ಮ ನಿರ್ಭರ ಭಾರತದ ಸ್ಪೂರ್ತಿ ಯನ್ನು ಪ್ರತಿಬಿಂಬಿಸುತ್ತದೆ , ಸ್ಥಳೀಯ ಉತ್ಪನ್ನಗಳ ಬಗ್ಗೆ ಜಾಗ್ರತಿ ಮೂಡಿಸುವುದು ಮತ್ತು ಸ್ಥಳೀಯ ಉತ್ಪಾದಕರಿಗೆ ಮತ್ತು ಕುಶಲ ಕರ್ಮಿಗಳಿಗೆ ವೇದಿಕೆ ರೂಪಿಸಿವಂತಹ ಮೇಳಗಳು ಅತ್ಯಗತ್ಯವಾಗಿದೆ, ಅತ್ಮ ನಿರ್ಭರ ಭಾರತವು ಕೇವಲ ಘೋಷಣೆ ಅಲ್ಲ ಜನರ ಚಳವಳಿ ಯಾಗಿದೆ .ಪ್ರತಿಯೊಬ್ಬ ನಾಗರಿಕನು ಸ್ಥಳೀಯವಾಗಿ ಉತ್ಪಾದಿಸಿದ ಉತ್ಪನ್ನ ಗಳನ್ನು ಬಳಸುವ ಮೂಲಕ ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ಯಾಗ ಬೇಕಾಗಿದೆ..ಅಭಿವೃದ್ಧಿ ಹೊಂದಿದ ಭಾರತದ ಗುರಿಯನ್ನು ಸಾಧಿಸಲು ದೇಶದೊಳಗೆ ಉತ್ಪಾದಿಸಿದ ಸರಕುಗಳನ್ನು ಹಾಗೂ ಆಹಾರ ಪದಾರ್ಥಗಳನ್ನು ಬಳಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ ಎಂದು ಹೇಳಿದರು.

‌ಸಮಾರಂಭದಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ಡಾ| ದೇವಿಪ್ರಸಾದ್ ಶೆಟ್ಟಿ ಬೆಳಪು ಅವರು ಮಾತನಾಡಿ ಇಂದಿನ ಯುವ ಜನತೆ ಅಧುನಿಕ ಬದುಕಿಗೆ ಒಳಗೂಂಡು ಅಹಾರ ಪದ್ದತಿಯನ್ನು ಬದಲಾಯಿಸಿಕೂಳ್ಳುವ ಮೂಲಕ ವಿದೇಶಿಯರ ಸರಕು ಅಹಾರ ವಸ್ತುಗಳನ್ನು ಬಳಸುತಿರುವುದು ಖೇದಕರವಾಗಿದೆ.
ಅರೋಗ್ಯಕ್ಕೆ ಮಾರಕವಾದ ಆಹಾರಕ್ಕೆದಾಸರಾಗಿದ್ದಾರೆ‌‌.ಉತ್ತಮ ಅರೋಗ್ಯಕರ ವಾದ ಸ್ವದೇಶಿ ವಸ್ತುಗಳನ್ನು ಬಳಕೆ ಮಾಡುವುದರ ಜೊತೆಗೆ ಸರಕಾರ ಕೂಡಾ ಸ್ವದೇಶಿ ವಸ್ತುಗಳಿಗೆ ಸರಿಯಾದ ಮಾರುಕಟ್ಟೆ ಯನ್ನು ಒದಗಿಸ ಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ಪಡುಬಿದ್ರಿ ಬಂಟರ ವೇಲ್ ಫೇರ್ ಟ್ರಸ್ಟ್‌ (ರಿ) ಅಧ್ಯಕ್ಷ ಡಾ! ವೃೆ.ಎನ್ ಶೆಟ್ಟಿ , ಪಡುಬಿದ್ರಿ ಕಾಡಿಪಟ್ನ ಮೊಗವೀರ ಮಹಾಸಭಾ (ರಿ.)) ಅಧ್ಯಕ್ಷ ಅಶೋಕ್ ಸಾಲ್ಯಾನ ಬೆನಕ ಇವೆಂಟ್ಸ್ ನ ಅಡಳಿತ ನಿರ್ದೇಶಕರಾದ ಗಣೇಶ್ ಶೆಟ್ಟಿ ಹಾಗೂ ಭಾಸ್ಕರ್ ಪೂಜಾರಿ
ಪಡುಬಿದ್ರಿ ಓಂಕಾರ ಕಾಸ್ಟೋಮ್ಸ್ & ಕಲಾ ಸಂಗಮ ಅಡಳಿತ ನಿರ್ದೇಶಕಿ ಗೀತಾ ಅರುಣ್ , ಪಡುಬಿದ್ರಿ ಗ್ರಾ.ಪಂ ಮಾಜಿ ಉಪಾಧ್ಯಕ್ಷೆ ಯಶೋಧ ಪಡುಬಿದ್ರಿ, ಸರ್ವ ಕಾಲೇಜು ವಿದ್ಯಾರ್ಥಿ ಶಕ್ತಿ (ರಿ) ಕರ್ನಾಟಕ) ರಾಜ್ಯಾಧ್ಯಕ್ಷ ರಚನ್ ಸಾಲ್ಯಾನ್ , ಪಡುಬಿದ್ರಿ ರೋಟರಿ ಕಾರ್ಯದರ್ಶಿ ಪವನ್ ಸಾಲ್ಯಾನ್ ಉಪಸ್ಥಿತರಿದ್ದರು. ರೋಟರಿ ಅಧ್ಯಕ್ಷ ಸುನಿಲ್ ಕುಮಾರ್ ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿದರು.‌‌ ಕಾರ್ಯಕ್ರಮ ನಿರ್ದೇಶಕ ಸಂತೋಷ್ ಪಡುಬಿದ್ರಿ ವಂದಿಸಿದರು,ಸಂತೋಷ್ ನಂಬಿಯಾರ್ ನಿರೂಪಿಸಿದರು.

Leave a Reply

Your email address will not be published. Required fields are marked *