×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಮೂಡುಬೆಳ್ಳೆ : ಅಂತಾರಾಷ್ಟ್ರೀಯ ಸಹಕಾರ ವರ್ಷಾಚರಣೆ “ಏಕ್ ಪೇಡ್ ಮಾ ಕೆ ನಾಮ್” ಸಂಕಲ್ಪ

ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ., ಬೆಂಗಳೂರು ಬೆಳ್ಳೆ ವ್ಯವಸಾಯ ಸೇವಾ ಸಹಕಾರಿ ಸಂಘ ನಿ. ಮೂಡುಬೆಳ್ಳೆ ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ನಿ., ಉಡುಪಿ ಸಹಕಾರ ಇಲಾಖೆ, ಉಡುಪಿ ಜಿಲ್ಲೆ ಇವರ ಸಂಯುಕ್ತಾಶ್ರಯದಲ್ಲಿ ಶ್ರೀ ನಾರಾಯಣ ಗುರು ಕನ್ನಡ ಮಾಧ್ಯಮ ಪ್ರೌಢ ಶಾಲೆ ಪಡುಬೆಳ್ಳೆ ಕಾರ್ಯಕ್ರಮ ನಡೆಯಿತು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಸಹಕಾರ ಯೂನಿಯನ್ ಸಿಇಓ ಅನುಷಾ ಅವರು ಸಹಕಾರ ಸಂಘ ಸಂಸ್ಥೆಗಳು ಉತ್ತಮ ಜಗತ್ತನ್ನು ನಿರ್ಮಿಸ ಬಲ್ಲವು ಕಾಡನ್ನು ಕಡಿದು ನಾಡು ಕಟ್ಟುತ್ತಿದ್ದರು. ಆದರೆ ಕಾಲ ಬದಲಾಗಿದೆ ಕಾಡನ್ನು ಬೆಳೆಸಿ ರಕ್ಷಿಸುವುದು ಅನಿವಾರ್ಯವಾಗಿದೆ. ನಮ್ಮ ಪರಿಸರಕ್ಕೆ ಸೂಕ್ತವಾದ ಹಣ್ಣು ಮತ್ತು ಹೂ ಕೊಡುವ ಗಿಡಗಳನ್ನು ಹೆಚ್ಚು‌ ನೆಡಬೇಕು. ಇದರಿಂದ ಪರಿಸರವೂ‌ ಸುಂದರವಾಗಿ ಕಾಣುತ್ತದೆ‌. ಪ್ರಾಣಿ ಪಕ್ಷಿಗಳಿಗೂ‌ ಆಶ್ರಯ ತಾಣವಾಗುತ್ತದೆ. ಎಂದರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ . ಮೂಡುಬೆಳ್ಳೆ ಸಿ ಎ ಬ್ಯಾಂಕ್ ಅಧ್ಯಕ್ಷ ಶಿವಾಜಿ ಸುವರ್ಣ ಅವರು ಮಾತನಾಡಿ ಒಂದು ಮರ ಕಡಿದರೆ ಹತ್ತು ಗಿಡಗಳನ್ನು ನೆಡುವ ಸಂಕಲ್ಪ ಮಾಡಬೇಕು. ಇದರಿಂದ ಅಭಿವೃದ್ಧಿ ಆಗುತ್ತದೆ. ಹಾಗೆ ಪರಿಸರವೂ ಉಳಿಯುತ್ತದೆ ಎಂದು ಹೇಳಿದರು

ಈ ಸಂದರ್ಭದಲ್ಲಿ ಮೈಮುನ ಉಪಾಧ್ಯಕ್ಷರು ಸಿ ಎ ಬ್ಯಾಂಕ್ ಎ ಜಿ ಡಿಸೋಜ ಎ ಕೆ ಆಳ್ವ ರಿತೇಶ್ ಸುವರ್ಣ ರಾಜೇಂದ್ರ ನಾಯಕ್ ಕರುಣಾಕರ ಸನಾರ ಹನೀಫ್ ಮಣಿಪುರ ರಜನಿಷ್  ವಿಶ್ವನಾಥ್ ಸಂಘದ ಕಾರ್ಯದರ್ಶಿಯವರಾದ ಶ್ರೀ ಇಸ್ಮಾಯಿಲ್ ಹಾಗೂ ಸಿಬ್ಬಂದಿಗಳಾದ ಅಬ್ದುಲ್ ರಹಿಮಾನ್ ಮತ್ತು ಸುಮಂಗಳ ಉಪಸ್ಥಿತರಿದ್ದರು     ಸ್ವಾಗತವನ್ನು ಉಷಾ ಮಾಡಿದರು  ಸುರೇಶ್ ನಾಯ್ಕ್ ನಿರೂಪಿಸಿದರು ಅರುಂಧತಿ  ಧನ್ಯವಾದವಿತ್ತರು.

Leave a Reply

Your email address will not be published. Required fields are marked *