×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಹಕ್ಕುಪತ್ರ ನೀಡಿ, ಇಲ್ಲದಿದ್ದರೆ ಯಾವುದೇ ತ್ಯಾಗಕ್ಕೂ ಸಿದ್ದ- ಡಾ:ದೇವಿಪ್ರಸಾದ್ ಶೆಟ್ಟಿ ಬೆಳಪು

ಬೆಳಪು ಗ್ರಾಮದಲ್ಲಿ ವಾಸಿಸುತ್ತಿರುವ ಕುಟುಂಬಗಳಿಗೆ ಹಕ್ಕುಪತ್ರ ನೀಡುವಂತೆ, ಕಾಪು ತಹಸೀಲ್ದಾರ್ ರವರಿಗೆ, ಬೆಳಪು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಡಾ:ದೇವಿಪ್ರಸಾದ್ ಶೆಟ್ಟಿಯವರ ನೇತೃತ್ವದಲ್ಲಿ ಮುಸ್ಲಿಂ,ಕ್ರಿಶ್ಚಿಯನ್, ಬಿಲ್ಲವ ವಿಶ್ವಕರ್ಮ ಜಾತಿಯನ್ನು ಒಳಗೊಂಡ ಗ್ರಾಮಸ್ಥರ ಜೊತೆ ಮನವಿ ಸಲ್ಲಿಸಿದರು. ಬೆಳಪು ಗ್ರಾಮದಲ್ಲಿ 40ವರ್ಷಗಳಿಂದ ವಾಸಿಸುತ್ತಿರುವ ಕುಟುಂಬಗಳು ಇನ್ನೂ ಕೂಡ ಹಕ್ಕುಪತ್ರ ವಂಚಿತರಾಗಿದ್ದಾರೆ, ಯಾವುದೇ ಕಾಡು ಇಲ್ಲದಿದ್ದರೂ, ಪಂಚಾಯತ್ ಕಾಡು ಎಂದು ಉಲ್ಲೇಖವಾಗಿರುವುದು ಸಮಸ್ಯೆಯಾಗಿದೆ, ಆದರೆ ಹಲವಾರು ವರ್ಷಗಳಿಂದ ಮನೆಕಟ್ಟಿಕೊಂಡಿರುವ ಕುಟುಂಬಗಳಿಗೆ,ಇದರಿಂದ ತುಂಬಾ ಸಮಸ್ಯೆಯಾಗುತ್ತಿದೆ. ಬೆಳಪು ಗ್ರಾಮದಲ್ಲಿ ಜಾತಿ ಮತ ಬೇಧವಿಲ್ಲದೆ, ಎಲ್ಲರಿಗೂ ಸಮಾನ ನ್ಯಾಯ, ಹಾಗೂ ಹಕ್ಕುಪತ್ರ ರಹಿತ ಕುಟುಂಬಗಳಿಗೆ ಹಕ್ಕುಪತ್ರ ನೀಡಲು ಡಾ: ದೇವಿಪ್ರಸಾದ್ ಶೆಟ್ಟಿಯವರು ನಿರಂತರವಾಗಿ ಪ್ರಯತ್ನಿಸುತ್ತಿದ್ದು, ಇನ್ನೂ ಕೂಡ ಹಕ್ಕುಪತ್ರ ಸಿಗದೆ ಇರುವ ಕಾರಣ, ಗ್ರಾಮಸ್ಥರಿಗೋಸ್ಕರ ಯಾವುದೇ ರೀತಿಯ ತ್ಯಾಗಕ್ಕೂ ಸಿದ್ದ ಎಂದು ಡಾ:ದೇವಿಪ್ರಸಾದ್ ಶೆಟ್ಟಿ ತಿಳಿಸಿದ್ದಾರೆ. ಹಕ್ಕುಪತ್ರ ನೀಡಲು ಈಗಾಗಲೇ ಒಂದು ತಿಂಗಳ ಗಡುವು ನೀಡಲಾಗಿದ್ದು, ನ್ಯಾಯ ಸಿಗದಿದ್ದರೆ, ಗ್ರಾಮಸ್ಥರ ಜೊತೆಗೂಡಿ,ಜಿಲ್ಲಾಧಿಕಾರಿ ಕಚೇರಿ ಎದುರು ಉಪವಾಸ ಸತ್ಯಾಗ್ರಹ, ಧರಣಿ ನಡೆಸುವುದಾಗಿ ಎಚ್ಚರಿಕೆ ನೀಡಿ

Leave a Reply

Your email address will not be published. Required fields are marked *