ಮುಖ್ಯ ಮಂತ್ರಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಪ್ರಥಮ ಬಾರಿ ಗೆ ಉಡುಪಿ ಜಿಲ್ಲೆಗೆ ಆಗಮಿಸಿದ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ರನ್ನು ಉಡುಪಿ ಜಿಲ್ಲೆಯ ಗಡಿಭಾಗದಲ್ಲಿ ಅದ್ದೂರಿಯಾಗಿ ಸ್ವಾಗತಿಸಿದರು. ಬಳಿಕ ಕರಾವಳಿ ಭಾಗದ ಬ್ಲೂ ಫ್ಲಾಗ್ ಬೀಚ್ ಬಳಿಯ ಕಡಲ್ಕೊರೆತ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪಡುಬಿದ್ರಿ ಬ್ಲೂ ಫ್ಲಾಗ್ ಬೀಚ್ ಬಳಿ ಭಾರಿ ಮಳೆಯಿಂದಾಗಿ ಕಡಲ್ಕೊರೆತ ಉಂಟಾಗಿದ್ದು, ಮುಖ್ಯಮಂತ್ರಿ ಸಿದ್ಧ ರಾಮಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದರು. . ಈ ಸಂದರ್ಭದಲ್ಲಿ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್, ಮೀನುಗಾರಿಕಾ ಸಚಿವರಾದ ಮಂಕಾಳ ವೈದ್ಯ, ಜಿಲ್ಲಾಧಿಕಾರಿಗಳಾದ ವಿದ್ಯಾ ಕುಮಾರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಪ್ರಸನ್ನ ಎಚ್, ಪೋಲಿಸ್ ವರಿಷ್ಠಾಧಿಕಾರಿಗಳಾದ ಹಾಕೆ ಅಕ್ಷಯ್ ಮಚ್ಚಿಂದ್ರ, ಸಹಾಯಕ ಆಯುಕ್ತರಾದ ರಶ್ಮಿ ಅಶೋಕ್ ಕುಮಾರ್ ಕೊಡವೂರು ನವೀನ್ ಚಂದ್ರ ಸುವರ್ಣ ನವೀನ್ ಚಂದ್ರ ಶೆಟ್ಟಿ ಶರ್ಪುದ್ದೀನ್ ಶೇಕ್ ಅಬ್ದುಲ್ ಅಝೀಜ್ ರಮೀಜ್ ಹುಸೇನ್ ಶಿವಾಜಿ ಸುವರ್ಣ ದಿನೇಶ್ ಪಾಲಿಮಾರ್ ಕಿಶೋರ್ ಕುಮಾರ್ ಬಾಲಚಂದ್ರ ಎರ್ಮಲ್ ಅಮೀರ್ ಕಾಪು ಗಣೇಶ್ ಕೋಟ್ಯಾನ್ ದೀಪಕ್ ಎರ್ಮಾಲ್ ಹರೀಶ್ ನಾಯಕ್ ಸುನಿಲ್ ಬಂಗೇರ ಗೀತಾ ವಾಗ್ಲೆ ಪ್ರಭಾಕರ ಆಚಾರ್ಯ ಎಂ ಎಸ್ ಶಾಫಿ ಆಸಿಫ್ ಹನ್ನನ್ ಉಸ್ಮಾನ್ ಕಾಪು ಸತೀಶ್ ದೇಜಡಿ ಉಪಸ್ಥಿತರಿದ್ದರು.


