ಆರ್ಥಿಕವಾಗಿ ಅಭಿವೃದ್ಧಿ ಸಾಧಿಸಲು ಸಹಕಾರಿ ಕ್ಷೇತ್ರವು ಪ್ರತಿಯೊಬ್ಬರಿಗೂ ಸಹಕಾರಿಯಾಗಿದೆ ಬ್ಯಾಂಕ್‍ಗಳಿಗೆ ಬರುವ ಗ್ರಾಹಕರಿಗೆ ಸೇವಾ ಮನೋಭಾವದಿಂದ ಕೆಲಸ ಕಾರ್ಯ ಮಾಡಿಕೊಡಬೇಕು ಸಹಕಾರಿಸಂಘದ ಅಭಿವೃದ್ಧಿಗೆ ಆಡಳಿತ ಮಂಡಳಿಯ ಪ್ರಾಮಾಣಿಕ ಪ್ರಯತ್ನ ಬೇಕು ಎಂದು ಶಾಸಕ ಕಿರಣ್ ಕುಮಾರ್ ಕೊಡ್ಡಿ ತಿಳಿಸಿದರು. ಸಾೖಬ್ರಕಟ್ಟೆಯಲ್ಲಿ ರವಿವಾರ ಜೈ ಗಣೇಶ್ ಕ್ರೆಡಿಟ್ ಸೌಹಾರ್ದ ಹಕಾರಿಯ ನೂತನ ಹವಾನಿಯಂತ್ರಿತ ಕಟ್ಟಡ ಉದ್ಘಾಟನ ಸಮಾರಂಭದಲ್ಲಿ ಅವರು ಮಾತನಾಡಿದರು. ಸಂಘದ ಅಧ್ಯಕ್ಷ ಅಶೋಕ್ ಪ್ರಭು ಸ್ವಾಬ್ರಕಟ್ಟೆ ಅಧ್ಯಕ್ಷತೆ ವಹಿಸಿದ್ದರು. ಜೈಗಣೇಶ್ ಕ್ರೆಡಿಟ್ ಸಹಕಾರಿಕಟ್ಟಡ ಉದ್ಘಾಟನೆ ಅಧ್ಯಕ್ಷ ಸ್ಥಾಪಕಾಧ್ಯಕ್ಷರಿಗೆ ಸಮ್ಮಾನ

ವಿದ್ಯಾರ್ಥಿ ಪ್ರೋತ್ಸಾಹ ನಿಧಿ’ ಯಿಂದ 350ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ರೂ. 8.50 ಲಕ್ಷ ವಿದ್ಯಾರ್ಥಿ ವೇತನ, ಅಶಕ್ತರಿಗೆ ವೈದ್ಯಕೀಯ ನೆರವು, ಸೌಹಾರ್ದ ಸಹಕಾರಿ ಕ್ಷೇತ್ರಕ್ಕೆ ಸಹಕಾರ ಇವೆಲ್ಲವೂ ಮಾದರಿ ಕಾರ್ಯಕ್ರಮಗಳಾಗಿದೆ ಎಂದರು. ಸಂಸ್ಥೆಯ ಅಧ್ಯಕ್ಷ ಅಶೋಕ್ ಪ್ರಭು ಮಾತನಾಡಿ, ನಮ್ಮ ಸಾಮಾಜಿಕ ಕಾರ್ಯಕ್ರಮಗಳಾದ ಅನಾಥಶ್ರಮಗಳಿಗೆ ಶಕ್ತಿತುಂಬುವ ‘ಚೈತನ್ಯ ‘ವಿದ್ಯಾಪೋಷಕ್’ ನಿಧಿಯ ಮೂಲಕ ಗೌರವ ಶಿಕ್ಷಕರ ವೇತನದ ಸಹಾಯದ ಜತೆಗೆ ‘ಮೊಬೈಲ್ ಶವ ಶೈತ್ಯಾಗಾರ ಪೆಟ್ಟಿಗೆ’, ಮೂಕ ಪ್ರಾಣಿಗಳ ಚಿಕಿತ್ಸೆಗಾಗಿ ‘ಲಿಪ್ಪಿಂಗ್ ಡಿವೈಸ್’ ಶೀಘ್ರದಲ್ಲೇ ಲೋಕಾರ್ಪಣೆಗೊಳಿಸಲಿದೆ ಎಂದರು. ಸಂಸ್ಥೆಯ ಯಶಸ್ವಿಗೆ ಶ್ರಮಿಸಿದ ಸ್ಥಾಪಕಾಧ್ಯಕ್ಷಶಿರಿಯಾರ ಪ್ರಭಾಕರ ನಾಯಕ್, ಪ್ರಸ್ತುತ ಅಧ್ಯಕ್ಷ ಅಶೋಕ್ ಪ್ರಭು ಅವರನ್ನು ನಿರ್ದೇಶಕರು, ಸಿಬಂದಿು, ಸದಸ್ಯರು. ಜತೆಯಾಗಿ ಸಮ್ಮಾನಿಸಿದರು. ಸುಧೀಂದ್ರ ಶೆಟ್ಟಿ. ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿರ್ದೇಶಕ ಎಸ್. ಕೆ. ಮಂಜುನಾಥ, ಶಿರಿಯಾರ ವಿ.ಎಸ್.ಎಸ್. ಅಧ್ಯಕ್ಷ ಪ್ರದೀಪ್. ಬಲ್ಲಾಳ್ ವಿವಿಧ ಘಟಕಗಳನ್ನು ಉದ್ಘಾಟಿಸಿದರು. ಉದ್ಯಮಿ ದಿನೇಶ್ . ಹೆಗ್ಡೆ ಮೊಳಹಳ್ಳಿ ಹಿರಿಯರಾದ ರಾಜೀವ ಭಟ್, ಸಂಘದ ಸ್ಥಾಪಕಾಧ್ಯಕ್ಷ ಶಿರಿಯಾರ ಪ್ರಭಾಕರ ನಾಯಕ್, ಉಡುಪಿ ಜಿಲ್ಲಾ ಸೌಹಾರ್ದ ಸಹಕಾರಿ ಒಕ್ಕೂಟದ ಅಧ್ಯಕ್ಷ ಅಂಪಾರು ಜಗನ್ನಾಥ ಶೆಟ್ಟಿ ಯಡ್ತಾಡಿ ಗ್ರಾ.ಪಂ. ಅಧ್ಯಕ್ಷ ಪ್ರಕಾಶ್ ಶೆಟ್ಟಿ ಸಂಘದ ಉಪಾಧ್ಯಕ್ಷ ಎಚ್. ನಾರಾಯಣ ಶೆಣೈ ಗಾವಳಿ, ನಿರ್ದೇಶಕರಾದ ರಾಘವೇಂದ್ರ ಹೆಗ್ಡೆ ವೆಂಕಟೇಶ್ ಪೈ ಸಾಸ್ತಾನ, ಪ್ರಸಾದ್ ಆರ್. ಭಟ್, ಜಗದೀಶ್ ಹೆಗ್ಡೆ ರಾಘವೇಂದ್ರ ಪ್ರಭು, ಪಲ್ಲವಿ ವೈ. ನಾಯಕ್, ಸುನಿತಾ ಹೆಗ್ಡೆ ಉಪಸ್ಥಿತರಿದ್ದರು.

