×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಪ್ರಿಯದರ್ಶಿನಿ ಕ್ರೆಡಿಟ್ ಕೋ-ಆ.ಸೊಸೈಟಿ ಉದ್ಘಾಟಿಸಿದ – ವಿನಯ ಕುಮಾರ್ ಸೊರಕೆ

ಉಡುಪಿ: ನಗರದ ಸೂಪರ್ ಬಜಾರ್‌ನಲ್ಲಿ ನೂತನವಾಗಿ ಕಾರ್ಯಾರಂಭಿಸಲಿರುವ “ಪ್ರಿಯದರ್ಶಿನಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ.” ಇದರ ಉದ್ಘಾಟನೆ ಕಾರ್ಯಕ್ರಮ ಮಥುರ ಗೋಕುಲ ಜಯಕೃಷ್ಣ ಕಲಾಭವನದಲ್ಲಿ ರವಿವಾರ ನಡೆಯಿತು. ಉದ್ಘಾಟಿಸಿ ಮಾತನಾಡಿ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಸಾರ್ವಜನಿಕರ ಸಹಕಾರ ಮತ್ತು ಪರಸ್ಪರ ಬೆಂಬಲದೊಂದಿಗೆ ಸಹಕಾರ ರಂಗ ಯಶಸ್ವಿಯಾಗಿ ಮುನ್ನಡೆಯುತ್ತದೆ ಬಡವರಿಗೆ ಆರ್ಥಿಕ ಸೌಲಭ್ಯ ದೊರಕಿ ಬಡತನ, ಅನಕ್ಷರತೆ ನಿರ್ಮೂಲನೆಗೊಂಡು ಆರ್ಥಿಕವಾಗಿ ಸುದೃಢವಾಗಿ ಬೆಳೆಯಲು ಸಹಕಾರಿಯಾಗ ಬೇಕು ಎಂದರು ಈ ಸಂದರ್ಭದಲ್ಲಿ ಸೊಸೈಟಿಯ ಲೋಗೋ ಅನಾವರಣ ಗೊಳಿಸಿದರು

ಪ್ರಥಮ ನಿರಖು ಠೇವಣಿ, ಪ್ರಥಮ ಉಳಿತಾಯ ಖಾತೆ, ನಿತ್ಯ ಠೇವಣಿ ಬಿಡುಗಡೆಗೊಳಿಸಿದ ಉದ್ಯಮಿ ಪ್ರಸಾದ್‌ರಾಜ್ ಕಾಂಚನ್ ಅವರುಬ್ಯಾಂಕ್‌ಗಳಿಗೆ ಬರುವ ಗ್ರಾಹಕರಿಗೆ ಸೇವಾ ಮನೋಭಾವದಿಂದ ಕೆಲಸ ಕಾರ್ಯ ಮಾಡಿಕೊಡಬೇಕು , ಸಮಾಜದ ಕಟ್ಟ ಕಡೆಯ ವ್ಯಕ್ತಿಗಳಿಗೆ ಹಣಕಾಸು ಸೌಲಭ್ಯ ಒದಗಿಸಿ ಅವರನ್ನು ಆರ್ಥಿಕವಾಗಿ ಬಲಗೊಳ್ಳುವಂತೆ ಮಾಡುವ ಸದುದ್ದೇಶದಿಂದ ಆರಂಭಗೊಂಡ ಸೊಸೈಟಿಯಿಂದ ಅತಿ ಅವಶ್ಯವಿರುವವರಿಗೆ ಸಕಾಲದಲ್ಲಿ ಸಾಲ ದೊರಕುವಂತಾಗಲಿ. ಪ್ರಿಯದರ್ಶಿನಿ ಕ್ರೆಡಿಟ್ ಕೋ-ಆ.ಸೊಸೈಟಿ ಇನ್ನು ಹೆಚ್ಚು ಹೆಚ್ಚು ಶಾಖೆಗಳನ್ನು ಹೊಂದಿ, ಇನ್ನು ಉತ್ತಮ ಮಟ್ಟಕ್ಕೆ ಬೆಳೆಯಲಿ ಎಂದು ಆಶಿಸಿದರು. ದಿನೇಶ್ ಹೆಗ್ಡೆ ಮೊಳಹಳ್ಳಿ ಅವರು ಪ್ರಥಮ ಮಾಸಿಕ ಠೇವಣಿ ಬಿಡುಗಡೆಗೊಳಿಸಿ ಶುಭಾಶಂಶನೆಗೈದರು. ಎಸ್‌ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಡಾ ದೇವಿಪ್ರಸಾದ್‌ ಶೆಟ್ಟಿ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ರಮೇಶ್ ಕಾಂಚನ್, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ದಿನಕರ ಹೇರೂರು ಪ್ರಮುಖರಾದ ಲಾವಣ್ಯಾ ಬಲ್ಲಾಳ್, ಸೊಸೈಟಿ ನಿರ್ದೇಶಕರಾದ ನೀರೆ ಕೃಷ್ಣ ಶೆಟ್ಟಿ, ಪ್ರಭಾಕರ ಶೆಟ್ಟಿ, ಅನಿಲ್ ಪೂಜಾರಿ ಮಾಳ, ಸುರೇಶ್ ಶೆಟ್ಟಿ ಬನ್ನಂಜೆ, ಭರತ್ ಕುಮಾರ್ ಶೆಟ್ಟಿ ಕಾಳಾವರ, ಪ್ರಶಾಂತ್ ಜತ್ತನ್ನ, ಶಾನವಾಜ್ ಕುಕ್ಕಿಕಟ್ಟೆ, ಚಂದ್ರಿಕಾ ಶೆಟ್ಟಿ, ಆದರ್ಶ, ಸುರೇಂದ್ರ ರಾವ್, ಪಿ. ಶ್ರೀನಿವಾಸ ಅಮೀನ್, ಸಂಧ್ಯಾಾ ತಿಲಕ್‌ರಾಜ್, ಜಯರಾಮ ನಾಯ್‌ಕ್, ಗೀತಾ ವಾಗ್ಲೆ ಉಪಸ್ಥಿತರಿದ್ದರು. ಸೊಸೈಟಿ ಅಧ್ಯಕ್ಷ ಕೆ.ಅಣ್ಣಯ್ಯ ಶೇರಿಗಾರ್ ಸ್ವಾಗತಿಸಿ ಪ್ರಸ್ತಾವನೆಗೈದರು. ಉಪಾಧ್ಯಕ್ಷ ಶಿವಾಜಿ ಎಸ್. ಸುವರ್ಣ ವಂದಿಸಿದರು. ಸತೀಶ್ ಕೊಡವೂರು ನಿರೂಪಿಸಿದರು.

Leave a Reply

Your email address will not be published. Required fields are marked *