×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಲೆಕ್ಕಪರಿಶೋಧಕರ( ಐಸಿಎಐ ) ದಿನಾಚರಣೆ ಪ್ರಯುಕ್ತ ರಕ್ತದಾನ ಶಿಬಿರ

ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್, ಆಫ್ ಇಂಡಿಯಾ (ಐಸಿಎಐ) ಉಡುಪಿ ಶಾಖೆ (ಎಸ್‌ಐಆರ್‌ಸಿ) ವತಿಯಿಂದಲೆಕ್ಕಪರಿಶೋಧಕರ( ಐಸಿಎಐ ) ದಿನಾಚರಣೆ ಪ್ರಯುಕ್ತ ರಕ್ತದಾನ ಶಿಬಿರ ಡಾ| ದೀಪ್ ಮಡೈಕರ್ ಮಾತನಾಡಿ, 1 ಯುನಿಟ್ ರಕ್ತದಿಂದ 3-4 ಮಂದಿಯ ಜೀವ ಉಳಿಸಲು ಸಾಧ್ಯವಿದೆ. ಅಪಘಾತ ಸಂಭವಿಸಿದಾಗ, ಹೆರಿಗೆ ಸಂದರ್ಭ ರಕ್ತಸ್ರಾವದಿಂದ ರಕ್ತದ ಕೊರತೆ ಎದುರಿಸುತ್ತಿರುವವರಿಗೆ ನಮ್ಮಿಂದ ಕೊಡಲ್ಪಡುವ ರಕ್ತ ಸಹಾಯಕವಾಗಲಿದೆ. ವೈದ್ಯರ ದಿನಾಚರಣೆಯಂದು ರಕ್ತದಾನ ದಂತಹ ಪುಣ್ಯ ಕಾರ್ಯ ಮಾಡಿರುವುದು ಸಂತಸದ ಸಂಗತಿ ಎಂದರು. ಸಂಸ್ಥೆಯ ಅಧ್ಯಕ್ಷೆ ಅರ್ಚನಾ ಆರ್ ಮಯ್ಯ ಸ್ವಾಗತಿಸಿ, ಸಂಸ್ಥೆಯು ಸಾಮಾಜಿಕ, ಪರಿಸರ ಪಾಲನಾ ಕಾರ್ಯಕ್ರಮಗಳು, ಸಮಾಜಮುಖಿ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದ್ದು, ಈ ಬಾರಿ 25ನೇ ವರ್ಷಾಚರಣೆ ಅಂಗವಾಗಿ ಬೆಳ್ಳಿಹಬ್ಬ ಆಚರಿಸಲಾಗುತ್ತಿದೆ. ಸಂಸ್ಥೆವತಿಯಿಂದ ಈ ಬಾರಿ 50ಕ್ಕೂ ಹೆಚ್ಚು ಮಂದಿ ರಕ್ತ ನೀಡುವ ಗುರಿ ಹೊಂದಿದ್ದೇವೆ ಎಂದು ಪ್ರಾಸ್ತಾವಿಕ ಮಾತನಾಡಿದರು. ಸಂಸ್ಥೆಯ ಉಪಾಧ್ಯಕ್ಷ ಎಂ. ರಾಘವೇಂದ್ರ ಮೊಗೆರಾಯ, ಸಮಿತಿ ಸದಸ್ಯೆ ಮಾಧುರಿ ಪ್ರಭು ಬಿ.ಜಿ., ಮಾಜಿ ಶಾಖಾಧ್ಯಕ್ಷರು, ಚಾರ್ಟರ್ಡ್ ಅಕೌಂಟೆಂಟ್ಸ್ ಸಿಎ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕೋಶಾಧಿಕಾರಿ ಕೆ ಲಕ್ಷ್ಮೀಶ,ರಾವ್ ಪರಿಚಯ ಮಾಡಿದರು. ಕಾರ್ಯದರ್ಶಿ ಅಶ್ವತ್ ಜೆ. ಶೆಟ್ಟಿ ನಿರೂಪಿಸಿ ವಂದಿಸಿದರು.

Leave a Reply

Your email address will not be published. Required fields are marked *