ವಿಶ್ವದ 4ನೇ ಅತಿದೊಡ್ಡ ಆರ್ಥಿಕ ವ್ಯವಸ್ಥೆ ಹೊಂದಿರುವ ಭಾರತದ ಅರ್ಥ ವ್ಯವಸ್ಥೆಯ ಬೆಳವಣಿಗೆಯಲ್ಲಿ ಲೆಕ್ಕಪರಿಶೋಧಕರ ಪಾತ್ರ ಅತ್ಯಂತ ಪ್ರಮುಖವಾದುದು ಎಂದು ಶಾಸಕ ಯಶ್‌ಪಾಲ್ ಎ. ಸುವರ್ಣ ಹೇಳಿದರು. ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್, ಆಫ್ ಇಂಡಿಯಾ (ಐಸಿಎಐ) ಉಡುಪಿ ಶಾಖೆ (ಎಸ್‌ಐಆರ್‌ಸಿ) ವತಿಯಿಂದ ಐವೈಸಿ ಸಭಾಂಗಣದಲ್ಲಿ ಮಂಗಳವಾರ ನಡೆದ ಲೆಕ್ಕಪರಿಶೋಧಕರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು. ಸದೃಢ ರಾಷ್ಟ್ರ ನಿರ್ಮಾಣಕ್ಕೆ , ಲೆಕ್ಕಪರಿಶೋಧಕರ ಕೊಡುಗೆ ಅನನ್ಯ ಎಂದರು ಈ ಸಂದರ್ಭದಲ್ಲಿ ಲೆಕ್ಕಪರಿಶೋಧಕ ಸೋನಿತ್ ಶೆಟ್ಟಿ, ಮಾಜಿ ಶಾಖಾಧ್ಯಕ್ಷರು, ಚಾರ್ಟರ್ಡ್ ಅಕೌಂಟೆಂಟ್ಸ್, ಲೆಕ್ಕಪರಿಶೋಧನ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸಂಸ್ಥೆಯ ಅಧ್ಯಕ್ಷೆ ಅರ್ಚನಾ ಆರ್. ಮಯ್ಯ ಸ್ವಾಗತಿಸಿದರು. ಉಪಾಧ್ಯಕ್ಷ ಎಂ. ರಾಘವೇಂದ್ರ ಮೊಗೆರಾಯ, ಕೋಶಾಧಿಕಾರಿ ಕೆ. ಲಕ್ಷ್ಮೀಶ ರಾವ್, ಸಮಿತಿ ಸದಸ್ಯೆ ಮಾಧುರಿ ಪ್ರಭು ಬಿ.ಜಿ. ಅತಿಥಿ ಪರಿಚಯ ಮಾಡಿದರು. ಕಾರ್ಯದರ್ಶಿ ಅಶ್ವಥ್ ಜೆ. ಶೆಟ್ಟಿ ನಿರೂಪಿಸಿ ವಂದಿಸಿದರು. ಸಮ್ಮಾನ-ಬಹುಮಾನ ವಿತರಣೆ ಹಿರಿಯ ಲೆಕ್ಕಪರಿಶೋಧಕರಾದ ಅಷ#ಕ್ ಅಹ್ಮದ್, ಕವಿತಾ ಎಂ. ಪೈ ಟಿ. ಅವರನ್ನು ಸಮ್ಮಾನಿಸಲಾಯಿತು. ಶಾಸಕ ಯಶ್‌ಪಾಲ್ ಎ. ಸುವರ್ಣ ಅವರನ್ನು ಗೌರವಿಸಲಾಯಿತು. ಯೋಗ ದಿನಾಚರಣೆ ಸಂದರ್ಭನಡೆಸಿದ ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು

