×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಬ್ರಹ್ಮಾವರ: ದನದ ಕಳೇಬರ ಪತ್ತೆ ಪ್ರಕರಣ – ಆರು ಮಂದಿಯ ಬಂಧನ ; ಎಸ್ಪಿ ಸುದ್ದಿಗೋಷ್ಟಿ

ಬ್ರಹ್ಮಾವರ: ಕುಂಜಾಲಿನ ಜಂಕ್ಷನ್ ನಲ್ಲಿ ಪತ್ತೆಯಾದ ದನದ ಕಳೇಬರ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿಯನ್ನು ಬಂಧಿಸಿರುವ ಕುರಿತು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುದ್ದಿಗೋಷ್ಟಿ ನಡೆಸಿ ಮಾಹಿತಿ ನೀಡಿದರು. ಬಂಧಿತರನ್ನು .ರಾಮ(49), ಪ್ರಸಾದ್‌(21), ನವೀನ್‌(35), ಕೇಶವ ನಾಯ್ಕ್‌(50) ಸಂದೇಶ(35), ರಾಜೇಶ್ (28) ಎಂದು ಗುರುತಿಸಲಾಗಿದೆ ಎಸ್ಪಿ ನೀಡಿರುವ ಮಾಹಿತಿಯ ಪ್ರಕಾರ, ಆರೋಪಿ ಕೇಶವ ತನ್ನ ಮನೆಯಲ್ಲಿದ್ದ ದನವನ್ನು ರಾಮಣ್ಣನವರಿಗೆ ಮಾಂಸ ಮಾಡಲು ನೀಡಿದ್ದು ಅದರಂತೆ ಆರೋಪಿಗಳು ಮಾಂಸ ಮಾಡಿ ಅದರ ತ್ಯಾಜ್ಯವನ್ನು ಎಸೆಯಲು ಸ್ಕೂಟರ್ ನಲ್ಲಿ ರಾತ್ರಿ ತೆರಳುತ್ತಿದ್ದಾಗ ರಸ್ತೆಗೆ ಬಿದ್ದಿದೆ ಎಂದು ವಿವರಿಸಿದ್ದಾರೆ. ಈಗಾಗಲೇ ಆರು ಮಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಊಹೆಯಾಧರಿತ ಪೋಸ್ಟ್ ಗಳನ್ನು ಮಾಡಿ ಕೋಮು ಸೌಹಾರ್ದ ಕೆಡಿಸುವ ಪ್ರಯತ್ನ ಮಾಡಬಾರದೆಂದು ಎಸ್ಪಿ ಎಚ್ಚರಿಸಿದ್ದು ಅಂತಹ ಕೃತ್ಯಗಳನ್ನು ಮಾಡಿದರೆ ಕ್ರಮಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.

Leave a Reply

Your email address will not be published. Required fields are marked *