×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಕೃಷ್ಣಾನುಗ್ರಹ ಅರ್ಹ ಸಂಸ್ಥೆ ಹಾಗೂ ದತ್ತು ಸ್ವೀಕಾರ ಕೇಂದ್ರ ಸಂತೆಕಟ್ಟೆ ಉಡುಪಿ ಇಲ್ಲಿನ ಸೋಲಾರ್ ವಿದ್ಯುದೀಕರಣ ಉದ್ಘಾಟನಾ ಸಮಾರಂಭ

ಮಣಿಪಾಲ್ ಎನರ್ಜಿ ಇನ್ಕ್ರಾಟೆಕ್ ಲಿಮಿಟೆಡ್ ಹಾಗೂ ಲಯನ್ಸ್ ಕ್ಲಬ್ ಮಣಿಪಾಲ ಇದರ ಸಾಮಾಜಿಕ ಹೊಣೆಗಾರಿಕೆ ಯೋಜನೆಯಡಿ ಸಂತೆಕಟ್ಟೆಯ ಕೃಷ್ಣಾನುಗ್ರಹ ಆಶ್ರಮಕ್ಕೆ ಸಂಪೂರ್ಣ ವಾದಂತಹ ಸೌರ ಫಲಕವನ್ನು ಅಳವಡಿಸಲಾಯಿತು. ಈ ಸಮಾರಂಭವನ್ನು ಶ್ರೀ ಸೋದೆ ವಾದಿರಾಜ ಮಠದ ಶ್ರೀ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದಂಗಳವರು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಮಣಿಪಾಲ್ ಎನರ್ಜಿ ಇನ್ಕ್ರಾಟೆಕ್ ಲಿಮಿಟೆಡ್ ಇದರ ಆಡಳಿತ ನಿರ್ದೇಶಕರಾದ ಶ್ರೀಯುತ ಸಾಗರ್ ಮುಖ್ಯೋಪಾಧ್ಯಾಯ್ ರವರು ನೀಡಿದಂತಹ ಸೇವೆಯನ್ನು ಶ್ರೀಗಳು ಶ್ಲಾಘಿಸಿ ಶ್ರೀ ಕೃಷ್ಣ ಪರಮಾತ್ಮನ ಅನುಗ್ರಹ ಸಂಸ್ಥೆಗೆ ಸದಾ ಇರಲಿ ಎಂದು ಹಾರೈಸುವುದರ ಜೊತೆಗೆ ಕೃಷ್ಣಾನುಗ್ರಹ ಆಶ್ರಮದಲ್ಲಿ ಆಶ್ರಯ ಪಡೆದ ಎಲ್ಲ ಮಕ್ಕಳು ಮತ್ತು ಸಿಬ್ಬಂದಿ ವರ್ಗದವರಿಗೆ ಹರಿಸಿ ಆಶೀರ್ವದಿಸಿದರು ಈ ಸಮಾರಂಭದಲ್ಲಿ ಮಕ್ಕಳ ಕಲ್ಯಾಣ ಸಮಿತಿಯ ಮಾಜಿ ಅಧ್ಯಕ್ಷರಾದ ಶ್ರೀಯುತ ಬಿ. ಕೆ ನಾರಾಯಣ್ , ಕೃಷ್ಣಾನುಗ್ರಹ ಸಂಸ್ಥೆಗೆ ಅನೇಕ ರೀತಿಯಲ್ಲಿ ಸೇವೆ ಸಲ್ಲಿಸಿದಂತಹ ಮಣಿಪಾಲ್ ಲಯನ್ಸ್ ಚಾರಿಟೇಬಲ್ ಫೌಂಡೇಶನ್ ನ ಡಾ. ಎಚ್ ಗಣೇಶ್ ಪೈ , ಲ. ರಮೇಶ್ ಕಿಣಿ, ಲಯನ್ಸ್ ಜಿಲ್ಲಾ ಗವರ್ನರ್ ಲ. ಹನೀಫ್ ಮಹಮ್ಮದ್ , ಜಿಲ್ಲಾ ಲಯನ್ಸ್ ಅಸಿಸ್ಟೆಂಟ್ ಗವರ್ನರ್ ಶ್ರೀಮತಿ ಸ್ವಪ್ನ ಸುರೇಶ್, ಲಯನ್ಸ್ ಕ್ಲಬ್ ಮಣಿಪಾಲ್ ಇದರ ಅಧ್ಯಕ್ಷ ರಾದ ಡಾ. ಶಕೀಲಾ ಹಾಗೂ ಸಂಸ್ಥೆಯ ಅಧ್ಯಕ್ಷರಾದ ಡಾ. ಉಮೇಶ್ ಪ್ರಭು, ಸಿಬ್ಬಂದಿ ವರ್ಗದವರು ಮತ್ತು ಮಕ್ಕಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *