ಕಾರ್ಕಳ ವಿದ್ಯಾ ಸಂಸ್ಥೆ ಹಲವು ವರ್ಷಗಳಿಂದ ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಕೆಲಸ ಕಾರ್ಯ ಮಾಡುತ್ತಿದೆ. ಶಿಕ್ಷಣ ನಮ್ಮೆಲ್ಲರ ಬದುಕು ರೂಪಿಸಬೇಕು ಮತ್ತು ಆ ಮೂಲಕ ಆ ಶಿಕ್ಷಣ ಸಂಸ್ಥೆ ಕೂಡ ಬೆಳೆಯಬೇಕು. ಹೀಗೆ ಕಾರ್ಕಳದ ಮಕ್ಕಳಿಗೆ ಈ ಸಂಸ್ಥೆಯು ಉತ್ತಮ ಶಿಕ್ಷಣವನ್ನು ನೀಡುತ್ತಿದೆ.ಎಂದು ಶಾಸಕ ಸುನಿಲ್ ಕುಮಾರ್ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದರು ಈ ಸಂಸ್ಥೆಯನ್ನು ಆರಂಭದ ದಿನಗಳಿಂದ ರವರೆಗೆ ಇಷ್ಟು ಎತ್ತರಕ್ಕೆ ಬೆಳೆಸುವುದರಲ್ಲಿ ಕೆಎಸ್ ನಿಸ್ಸಾರ್ ಅಹ್ಮದ್ ಅವರ ಕೊಡುಗೆ ಅಪಾರ, ಅವರು ಎಳೆಯ ಮರೆಯ ಕಾಯಿಯಂತೆ ಕಾರ್ಕಳದಲ್ಲಿ ಹಲವು ಚಟುವಟಿಕೆಗಳಿಗೆ ದೊಡ್ಡ ಪ್ರಮಾಣದಲ್ಲಿ ಸಹಾಯ ನೀಡುತ್ತಾ ಬಂದಿದ್ದಾರೆ. ಕೊರೋನಾ ಸಂದರ್ಭದಲ್ಲಿ ಕಾರ್ಕಳ ಸರಕಾರಿ ಆಸ್ಪತ್ರೆಗೆ ಆಕ್ಸಿಜನ್ ಪ್ಲಾಂಟ್ ನ್ನು ಅವರು ನಿರ್ಮಿಸಿ ಕೊಟ್ಟಿದ್ದಾರೆ. ಈ ಮೂಲಕ ಅವರು ಕಾರ್ಕಳಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ ಎಂದರು.

ನಂತರ ಶ್ರೀಕ್ಷೇತ್ರ ಕೇಮಾರು ಸಾಂದೀಪನಿ ಸಾಧಾನಾಶ್ರಮದ ಶ್ರೀಈಶ ವಿಠಲದಾಸ ಸ್ವಾಮೀಜಿ ಮಾತನಾಡಿ ಶಿಕ್ಷಣವು ಜಾತಿ ಧರ್ಮ ಬೇಧವಿಲ್ಲದೆ ನಮ್ಮೆಲ್ಲರನ್ನು ಒಂದಾಗಿಸ ಬೇಕು. ಆ ಕಾರ್ಯವನ್ನು ಕೆಎಂಇಎಸ್ ಶಿಕ್ಷಣ ಸಂಸ್ಥೆಗಳು ಮಾಡುತ್ತಿರುವುದು ಅಭಿನಂದನೀಯ ಶಿಕ್ಷಣ ಎಂಬುದು ಆತ್ಮಶಕ್ತಿ ತುಂಬಿಸುವ ಕಾರ್ಯ ಮಾಡಬೇಕು. ಪ್ರಮಾಣ ಪತ್ರದಲ್ಲಿ ನಾವು ಪ್ರಥಮ ಬರುವುದಕ್ಕಿಂತ ಜೀವನದಲ್ಲಿ ಪ್ರಥಮ ಬರಬೇಕು. ಅದಕ್ಕೆ ಮನುಷ್ಯರಾಗಿ ಬದುಕುವ ಶಿಕ್ಷಣ ದೊರೆಯಬೇಕು ಎಂದರು. ಈ ಶಾಲೆಯಲ್ಲಿ ಬಡವರಿಗೆ ಉಚಿತ ಶಿಕ್ಷಣ ನೀಡುತ್ತಿರುವುದು ಮಾದರಿ ಕಾರ್ಯವಾಗಿದೆ. ಬಡವರಿಗೆ ನೀಡುವ ವಿದ್ಯೆಯು ದೇವರಿಗೆ ಸಲ್ಲಿಸುವ ನಿಜವಾದ ಸೇವೆಯಾಗಿದೆ. ಆ ಕಾರ್ಯವನ್ನು ಈ ವಿದ್ಯಾಸಂಸ್ಥೆ ಮಾಡುತ್ತಿದೆ. ನಮ್ಮ ಮಠದಿಂದ ಶಾಲೆ ನಿರ್ಮಿಸಲು ಬೇಕಾದ ಜಾಗ ಖರೀದಿಸಲು ದೊಡ್ಡ ಮಟ್ಟದಲ್ಲಿ ನೆರವು ನೀಡಿದವರು ಕೆಎಸ್ ನಿಸ್ಸಾರ್ ಅಹ್ಮದ್ ಹಾಗೂ ಕೆಎಸ್ ಇಮ್ಮಿಯಾಝ್ ಅಹ್ಮದ್ ಅವರ ಹೃದಯ ವೈಶಾಲ್ಯ ಮೆಚ್ಚುವಂತದ್ದು ಎಂದು ಸ್ವಾಮೀಜಿ ತಿಳಿಸಿದರು

ಕೆಎಂಇಎಸ್ ಶಿಕ್ಷಣ ಸಂಸ್ಥೆ ಗಳ ಅಧ್ಯಕ್ಷ ಕೆ. ಎಸ್ ಇಮ್ತಿಯಾಜ್ ಪ್ರಸ್ತಾವಿಕ ವಾಗಿ ಮಾತನಾಡಿ 1984ರಲ್ಲಿ ಸ್ಥಾಪನೆಗೊಂಡ ಈ ವಿದ್ಯಾ ಸಂಸ್ಥೆ ಇದೀಗ ಇಷ್ಟು ಎತ್ತರಕ್ಕೆ ಬೆಳೆಯಲು ಹಲವರ ಶ್ರಮ ಇದೆ. ಆದರೆ ಇದಕ್ಕೆ ಎಲ್ಲ ರೀತಿಯಲ್ಲೂ ಪ್ರೋತ್ಸಾಹ, ಬೆಂಬಲ, ಸಹಕಾರ ನೀಡಿದ ಕೆಎಸ್ ನಿಸ್ಸಾರ್ ಅಹ್ಮದ್ ಈ ಸಂಸ್ಥೆಯ ಬೆನ್ನೆಲುಬು ಆಗಿದ್ದಾರೆ. ಅವರ ಸಹಕಾರ ಇಲ್ಲದಿದ್ದರೆ ಈ ವಿದ್ಯಾಸಂಸ್ಥೆಯನ್ನು ಮುನ್ನಡೆಸಲು ಸಾಧ್ಯವೇ ಇರುತ್ತಿರಲಿಲ್ಲ ಎಂದು ಕೆಎಂಇಎಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಕೆ.ಎಸ್.ಇಮ್ಮಿಯಾಝ್ ಅಹ್ಮದ್ ತಿಳಿಸಿದರು. ಕೆಎಸ್ ನಿಸ್ಸಾರ್ ಅಹ್ಮದ್ ಕೇವಲ ವಿದ್ಯಾ ಸಂಸ್ಥೆಗಳಿಗೆ ಮಾತ್ರವಲ್ಲ ಹಿಂದು, ಮುಸ್ಲಿಮ್, ಕ್ರಿಶ್ಚಿಯನ್ ಎಂಬ ಬೇಧಭಾವ ಇಲ್ಲದೆ ಎಲ್ಲರಿಗೆ ನೆರವು ನೀಡಿದ್ದಾರೆ. ದೈವಸ್ಥಾನಗಳಿಗೆ ಆರ್ಥಿಕ ಸಹಾಯ ಮಾಡಿದ್ದಾರೆ. ಬಡ ಮಕ್ಕಳಿಗೆ ವಿವಾಹ. ಮನೆ ನಿರ್ಮಾಣ, ವಾಹನ ಖರೀದಿ ಮಾಡಿಸಿ ಕೊಟ್ಟಿದ್ದಾರೆ. ಈ ರೀತಿ ಸಮಾಜ ಸೇವೆಯಲ್ಲಿ ನಿರಾತರಾಗಿರುವ ಕೆ. ಎಸ್ ನಿಸಾರ್ ಅಹಮ್ಮದ್ ಅವರಿಗೆ ರಾಷ್ಟ್ರ ಪ್ರಶಸ್ತಿ ನಿಗಬೇಕು. ಅದಕ್ಕೆ ಅರ್ಹ ವ್ಯಕ್ತಿ, ಯಾವುದೇ ಪ್ರಚಾರ ಇಲ್ಲದೆ ಎಲೆಯ ಮರೆಯ ಕಾಯಿಯಂತೆ ತನ್ನ ಸಮಾಜ ಸೇವೆಯನ್ನು ಮಾಡಿಕೊಂಡು ಅವರು ಬರುತ್ತಿದ್ದಾಎಂದು ತಿಳಿಸಿದಶಾಲಾ ಮುಖ್ಯೋಪಾಧ್ಯಾಯಿನಿ ಲೋಲಿಟಾ ಝಿನಾ ಡಿಸಿಟ್ಟ ಸ್ವಾಗತಿಸಿದರು. ಪ್ರಭಾರ ಪ್ರಾಶುಂಪಾಲ್ ಪಾಟ್ಕರ್ ವಂದಿಸಿದರು. ಶಿಕ್ಷಕಿ ನಳಿನಿ ಅಚಾರ್ಯ ಮತ್ತು ಪ್ರಕಾಶ್ ನಾಯಕ್ ಕಾರ್ಯಕ್ರಮ ನಿರೂಪಿದರು

