×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಪಡುಬಿದ್ರಿ, ಮೇ 2: ಹೆಜಮಾಡಿ ಶಿವ ಸಾಗರ್ ಕಾಂಪ್ಲೆಕ್ಸ್ ಲೋಕಾರ್ಪಣೆ

ಪಡುಬಿದ್ರಿ, ಮೇ 2: ಹೆಜಮಾಡಿ ಟೋಲ್‌ಗೇಟ್ ಬಳಿ ನೂತನವಾಗಿ ನಿರ್ಮಾಣಗೊಂಡಿರುವ ಶಿವ ಸಾಗರ್ ಕಾಂಪ್ಲೆಕ್ಸ್ ಲೋಕಾರ್ಪಣೆಗೊಳಿಸಲಾಯಿತು. ಶಿವ ಸಾಗರ್ ಕಾಂಪ್ಲೆಕ್ಸ್, ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ಹೆಜಮಾಡಿ ಗಡಿಭಾಗದಲ್ಲಿ ಜನರಿಗೆ ಅತ್ಯವಶ್ಯಕವಾಗಿರುವ ಹೊಟೇಲು ಉದ್ಯಮವನ್ನು ಆರಂಭಿಸುವ ಮೂಲಕ ಪ್ರಭಾಕರ ಪೂಜಾರಿ ಕರಾವಳಿ ಪ್ರವಾಸೋದ್ಯಮ ಮತ್ತು ಹೊಟೇಲ್ ವ್ಯವಹಾರ ಅಭಿವೃದ್ಧಿಗೆ ವಿಶೇಷ ಕೊಡುಗೆ ನೀಡುತ್ತಿದ್ದಾರೆ ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿ, ಧ್ರುವ್ ಲಾಡ್ಡಿಂಗ್ ಮತ್ತು ಬೋರ್ಡಿಂಗ್‌ನ್ನು ಉದ್ಘಾಟಿಸಿದ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಮಾತನಾಡಿ, ಹೊಟೇಲ್ ಉದ್ಯಮದಲ್ಲಿ ಕರಾವಳಿಗರ ಕೊಡುಗೆ ಅಪಾರವಾಗಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಮಾಜಿ ಶಾಸಕ ಗೋಪಾಲ ಪೂಜಾರಿ ಬೈಂದೂರು ಮಾತನಾಡಿ, ಪ್ರಭಾಕರ ಪೂಜಾರಿ ಅವರು ಈಗ ತನ್ನ ಹುಟ್ಟೂರಿನ ಜನತೆಗಾಗಿ ತೆರೆದಿರುವ ಹೊಟೇಲ್ ಮತ್ತಷ್ಟು ಪ್ರಸಿದ್ದಿ ಪಡೆಯಲಿ ಎಂದು ಶುಭಹಾರೈಸಿದರು.ಶಿವಸಾಗರ್ ಕಾಂಪ್ಲೆಕ್ಸ್‌ನ ಆಡಳಿತ ನಿರ್ದೇಶಕ ಪ್ರಭಾಕರ್ ಪೂಜಾರಿ ಕಾವು, ಚಂದ್ರಾವತಿ ಪ್ರಭಾಕರ್ ಪೂಜಾರಿ, ನಾರಾಯಣ ಎಸ್. ಕೋಟ್ಯಾನ್, ಗಿರೀಶ್ ಎಸ್. ಪೂಜಾರಿ, ಸಂದೀಪ್ ಪೂಜಾರಿ, ರಿತೇಶ್ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *