ಉಡುಪಿ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಪಧಾಧಿಕಾರಿಗಳ ಪದಗ್ರಹಣ ಹಾಗೂ ಸೌಹಾರ್ದ ಇಪ್ತಾರ್ ಕೂಟ ಕಾರ್ಯಕ್ರಮ ಉಡುಪಿ ಬ್ರಹ್ಮಗಿರಿಯಲ್ಲಿರುವ ಉಡುಪಿ ಜಿಲ್ಲಾ ಕಾಂಗ್ರೆಸ್ ಕಚೇರಿ ಯಲ್ಲಿ ನಡೆಸಲಾಯಿತು ಕಾರ್ಯಕ್ರಮ ದಲ್ಲಿ ಮೌಲಾನಾ ಇರ್ಷಾದ್ ಸಅದಿ ಯವರು ದುವಾ ನೆರವೇರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕೆ.ಪಿ.ಸಿ.ಸಿ. ಪ್ರಚಾರ ಸಮಿತಿಯ ಅಧ್ಯಕ್ಷರು ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ, ಪುತ್ತೂರಿನಲ್ಲಿ ಶಾಸಕನಾಗಿದ್ದಾಗಿನಿಂದಲೂ ಇಂತಹ ಇಪ್ತಾರ್ ಕೂಟವನ್ನು ನಡೆಸುತ್ತ ಬಂದಿದ್ದೇನೆ. ಇಸ್ಲಾಮ್ ಸಾರುವ ಸಮಾನತೆಯ ಸಂದೇಶ ನನಗೆ ಅಚ್ಚುಮೆಚ್ಚು ಪ್ರವಾದಿ ಮುಹಮ್ಮದ್ ಶಾಂತಿ ಸಮಾನತೆಯನ್ನು ಸಾರಿದರು. ಎಲ್ಲಾ ಧರ್ಮಗಳು ಮಾನವ ಮಾನವನಾಗಿ ಬದುಕುವ ಸಂದೇಶ ಸಾರಿದೆ. ದೇಶಕ್ಕೆ ದೊಡ್ಡ ಕೊಡುಗೆ ಕೊಡಬೇಕಾದರೆ ನಾವು ಪರಸ್ಪರ ಸಹೋದರಂತೆ ಬದುಕಬೇಕು ಎಂದು ಹೇಳಿದರು.ಅಧಿಕಾರ ಹಸ್ತಾಂತರ ಕಾರ್ಯಕ್ರಮ

ಈ ಸಂದರ್ಭದಲ್ಲಿ ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ, ಗಣ್ಯರ ಸಮ್ಮುಖದಲ್ಲಿ ಉಡುಪಿ ಜಿಲ್ಲಾ ಮಾಜಿ ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ಇಸ್ಮಾಯಿಲ್ ಅತ್ರಡಿ ರವರು ಶರ್ಫುದ್ದೀನ್ ಶೇಖ್ ರವರಿಗೆ ಕಾಂಗ್ರೆಸ್ ಧ್ವಜ ವನ್ನು ನೀಡುವ ಮೂಲಕ ಅಧಿಕಾರ ಹಸ್ತಾಂತರ ಕಾರ್ಯಕ್ರಮ ನಡೆಯಿತು ಹರೀಶ್ ಕಿಣಿ ಅಮೃತ್ ಶೆಣೈ, ಶ್ರೀ ಅಶೋಕ್ ಕುಮಾರ್ ಕೊಡವೂರ ವರು ಅಧ್ಯಕ್ಷತೆಯನ್ನು ವಹಿಸಿದ್ದರು. ಅಧ್ಯಕ್ಷರಾದ ಶರ್ಫುದ್ದೀನ್ ಶೇಖ್ ರವರು ಸ್ವಾಗತ ಮತ್ತು ಪ್ರಾಸ್ಥಾವಿಕ ಮಾತುಗಳನ್ನು ಆಡಿದರು ನಾಯಕರಾದ ಪ್ರಸಾದ್ ಕಾಂಚನ್ ಸೌಹಾರ್ದತೆಯ ವಿವರಣೆ ತಿಳಿಸಿದರು,ಮುಖ್ಯ ಅಥಿತಿಯಾದ ಮುಸ್ತಾಕ್ ಹೆನ್ನಾಬೈಲ್ ರವರು ರಂಜಾತ್ ತಿಂಗಳ ಉಪವಾಸದ ವಿಶೇಷತೆಯನ್ನು ತಿಳಿಸಿದರು ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿದ್ದ ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದ ರಾಜ್ಯಾದ್ಯಕ್ಷರಾದ ಜನಾಬ್ ಅಬ್ದುಲ್ ಜಬ್ಬಾರ್ ಮತ್ತು ಪ್ರಧಾನ ಕಾರ್ಯದರ್ಶಿಗಳಾದ ಡಾ.ಯು ಶೇಖ್ ವಹೀದ್ ರವರು ಕಾರಣಾಂತರಗಳಿಂದ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿಕ್ಕೆ ಸಾದ್ಯವಾಗದ ಕಾರಣ ತಮ್ಮ ಶುಭಾಶಯಗಳನ್ನು ತಿಳಿಸಿದ್ದಾರೆ.ಈ ಸಂಧರ್ಭದಲ್ಲಿ ಫಾದರ್ ಮಾರ್ಟಿಸ್ ಮುಶ್ತಾಕ್ ಬೆಳ್ವೆ ನಕ್ವಾ ಯಹಿಯಾ,ಮಹಮ್ಮದ್ ಮೌಲಾ ರಮೇಶ್ ಕಾಂಚನ್, ನವೀನ್ ಚಂದ್ರ ಶೆಟ್ಟಿ ಗೀತಾ ವಾಗ್ಳೆ,ಮತ್ತು ಅನೇಕ ಗಣ್ಯರು ಕಾಂಗ್ರೆಸ್ ಪಕ್ಷದ ನಾಯಕರು ಕಾರ್ಯಕರ್ತರು ಉಪಸ್ಥಿತರಿದ್ದರು .ಡಾ ಯು ಎಂ ಫಾರೂಕ್ ಚಂದ್ರನಗರ ಮತ್ತು ನಾಗೇಶ್ ಉದ್ಯಾವರ ಇವರು ನಿರೂಪನೆ ಮಾಡಿದರು ರಮೀಝ್ ಹುಸೈನ್ ಪಡುಬಿದ್ರಿ.ಹಾಗೂ ಹಮೀದ್ ಯೂಸುಪ್ ಸಹಕರಿಸಿದರು,ಪ್ರಧಾನ ಕಾರ್ಯದರ್ಳಿಗಳಾದ ರೋಶನ್ ರೋಡ್ರಗೀಸ್ ವಂದಿಸಿದರು.


