×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಭಾರತ್ ಜೋಡು ಸಮಾಪನ ಕಾರ್ಯಕ್ರಮದ ಪ್ರಯುಕ್ತ ಕಾಪುವಿನಲ್ಲಿ ವಿನಯ್ ಕುಮಾರ್ ಸೊರಕೆ ನೇತೃತ್ವದಲ್ಲಿ ಧ್ವಜಾರೋಹಣ ಕಾರ್ಯಕ್ರಮ

ಭಾರತ ರಾಷ್ಟ್ರೀಯ ಕಾಂಗ್ರೆಸ್ ನ ನಾಯಕರಾದ ಶ್ರೀಯುತ ರಾಹುಲ್ ಗಾಂಧಿಯವರು 7 /9/ 2022ರಂದು ಕನ್ಯಾಕುಮಾರಿಯಿಂದ ಪ್ರಾರಂಭಿಸಿದ “ಭಾರತ ಜೋಡೋ” ಯಾತ್ರೆಯು 3970 ಕಿ,ಮಿ,ಗಳು, 12 ರಾಜ್ಯಗಳು, 2 ಕೇಂದ್ರಾಡಳಿತ ಪ್ರದೇಶಗಳನ್ನು ಕ್ರಮಿಸಿ 2023 ಜನವರಿ 30 ರಂದು ಶ್ರೀನಗರದಲ್ಲಿ ಸಮಾಪನಗೊಳ್ಳುತ್ತಿದ್ದು, ಈ ಯಾತ್ರೆಯ ಸಮಾರೋಪದ ಭಾಗವಾಗಿ ಶ್ರೀ ರಾಹುಲ್ ಗಾಂಧಿ ಯವರು ಜನವರಿ 30ರಂದು ಬೆಳಿಗ್ಗೆ 10:00 ಗಂಟೆಗೆ ಶ್ರೀನಗರದಲ್ಲಿರುವ ಜಮ್ಮು ಮತ್ತು ಕಾಶ್ಮೀರ ಪಿಸಿಸಿ ಪ್ರಧಾನ ಕಚೇರಿಯಲ್ಲಿ ರಾಷ್ಟ್ರ ಧ್ವಜಾರೋಹಣ ಮಾಡಲಿದ್ದು, ಈ ಹಿನ್ನೆಲೆಯಲ್ಲಿ ಗೌರವಾನ್ವಿತ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಅಪೇಕ್ಷೆಯಂತೆ ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿಯ ವತಿಯಿಂದ ಜನವರಿ 30ರಂದು ಬೆಳಿಗ್ಗೆ 10 ಗಂಟೆಗೆ, ಮಾನ್ಯ ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ ಅವರ ನೇತೃತ್ವದಲ್ಲಿ ” ಕಾಪು ರಾಜೀವ ಭವನ” ದಲ್ಲಿ ಧ್ವಜಾರೋಹಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು… ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷೆ ಶ್ರೀಮತಿ. ಗೀತಾ ವಾಗ್ಲೇ ಯವರು ಧ್ವಜಾರೋಹಣಗೈದರು. ತದನಂತರ ನಡೆದ ಕಾರ್ಯಕರ್ತರ ಸಭೆಯಲ್ಲಿ, ರಾಶ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ಪುಣ್ಯತಿಥಿಯ ಅಂಗವಾಗಿ, ಪುಷ್ಪ ನಮನ ಸಲ್ಲಿಸಲಾಯಿತು. ಈ ಸಂದರ್ಭ ಮಾತನಾಡಿದ ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆಯವರು, ಅಹಿಂಸೆಯಿಂದಲೇ ದೇಶಕ್ಕೆ ಸ್ವಾತಂತ್ರ್ಯ ಗಳಿಸಿಕೊಟ್ಟ ಶಾಂತಿದೂತ, ಮಹಾನ್ ಸಂತ ಹಿಂಸೆಗೆ ಬಲಿಯಾಗಿದ್ದು ಜಗತ್ತಿನ ಇತಿಹಾಸದ ಬಹುದೊಡ್ಡ ಕಪ್ಪುಚುಕ್ಕೆಯಾಗಿದೆ ಎಂದರು.
ಈ ಸಂದರ್ಭದಲ್ಲಿ “ಭಾರತ್ ಜೋಡೋ” ಯಾತ್ರೆಯನ್ನುದ್ದೇಶಿಸಿ ಮಾತನಾಡಿದ ಸೊರಕೆಯವರು, ಜಾತಿ-ಧರ್ಮಗಳ ಮಧ್ಯೆ ಕಂದಕವನ್ನು ಸೃಷ್ಟಿಸಿ, ಕೋಮುವಾದದ ವಿಷ-ಬೀಜವನ್ನು ಬಿತ್ತಲು ಪ್ರಯತ್ನಿಸುತ್ತಿರುವ ಕೋಮು ಶಕ್ತಿಗಳ ವಿರುದ್ಧ ಧ್ವನಿಯೆಬ್ಬಿಸಿ, ದೇಶದ ಏಕತೆ ಮತ್ತು ಅಖಂಡತೆಗಾಗಿ, ಸೌಹಾರ್ದತೆ, ಸಮಾನತೆ ಮತ್ತು ಸಹೋದರತೆಯ ಸಮಾಜ ನಿರ್ಮಾಣಕ್ಕಾಗಿ “ಭಾರತ್ ಜೋಡೋ” ಯಾತ್ರೆಯು ಮೊದಲ ಹೆಜ್ಜೆಯಾಗಿದ್ದು, ಮುಂದಿನ ಹಂತದಲ್ಲಿ ಇನ್ನಷ್ಟು ದೀರ್ಘ ಆಲೋಚನೆಗಳ ಕ್ರಮ ಕೈಗೊಳ್ಳುವ ಉದ್ದೇಶ ಕಾಂಗ್ರೆಸ್ ಪಕ್ಷಕ್ಕಿದೆ ಎಂದರು.
ಸುಮಾರು 4000 ಕಿ.ಮೀ.ಗಳ ಪಾದಯಾತ್ರೆಯು ಕೇವಲ ನಡಿಗೆಯಲ್ಲ, ಇದು ಭಾರತದ ಜನರ ಭಾವನೆಗಳನ್ನು ಬೆಸೆಯುವ, ಕಷ್ಟಗಳನ್ನು ಅರ್ಥೈಸಿಕೊಂಡು ಅವರ ಮೂಲ ಸಂಕಷ್ಟಗಳನ್ನು ಪರಿಹರಿಸುವುದೇ ಈ ಯಾತ್ರೆಯ ಪರಮ ಉದ್ದೇಶವಾಗಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ನವೀನ್ ಚಂದ್ರ ಸುವರ್ಣರು ವಹಿಸಿದ್ದರು. ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ವಾಗ್ಲೇ, ಬ್ಲಾಕ್ ಪ್ರಚಾರ ಸಮಿತಿ ಅಧ್ಯಕ್ಷ ಜಿತೇಂದ್ರ ಫುರ್ಟಾಡೋ, ಸರಸು ಡಿ. ಬಂಗೇರ, ವೈ. ಸುಧೀರ್ ಮಾತನಾಡಿದರು. ಈ ಸಂದರ್ಭದಲ್ಲಿ, ಬ್ಲಾಕ್ ಸಮಿತಿಗೆ ನೂತನ ಪದಾಧಿಕಾರಿಗಳನ್ನು ನೇಮಕಮಾಡಿ ಆದೇಶ ಪತ್ರವನ್ನು ನೀಡಲಾಯಿತು. ಸಭೆಯಲ್ಲಿ, ಪಕ್ಷದ ಪ್ರಮುಖರಾದ ಶಿವಾಜಿ ಸುವರ್ಣ ಬೆಳ್ಳೆ, ಅಬ್ದುಲ್ ಅಝೀಜ್ ಹೆಜಮಾಡಿ, ವಿನಯ್ ಬಲ್ಲಾಳ್, ಫಾರೂಕ್ ಚಂದ್ರನಗರ, ಸೌರಬ್ ಬಲ್ಲಾಳ್, ಶಾಂತಲತಾ ಎಸ್. ಶೆಟ್ಟಿ, ರಾಘವ ಕೋಟ್ಯಾನ್, ಶರ್ಫುದ್ದೀನ್ ಶೇಖ್, ರಕ್ಷಿತ್ ಶೆಟ್ಟಿ, ರಾಜೇಶ್ ರಾವ್ ಪಾಂಗಳ, ಕಿಶೋರ್ ಎರ್ಮಾಳ್, ರಾಜೇಶ್ ಮೆಂಡನ್, ಮಹೇಶ್ ಶೆಟ್ಟಿ ಬಿಳಿಯಾರು, ಕಿಶೋರ್ ಅಂಬಾಡಿ, ಐಡಾ ಗಿಬ್ಬಾ ಡಿಸೋಜ, ವಿಲ್ಸನ್ ರಾಡ್ರಿಗಸ್, ಮೆಲ್ವಿನ್ ಡಿಸೋಜ, ರಂಜನಿ ಹೆಗ್ಡೆ, ಸುಜಾತ ಸುವರ್ಣ, ಪ್ರಭಾ ಬಿ. ಶೆಟ್ಟಿ, ಇಂದಿರಾ ಆಚಾರ್ಯ, ಸುನಿಲ್ ಡಿ. ಬಂಗೇರ, ಸಂತೋಷ್ ಶೆಟ್ಟಿ ಎಲ್ಲೂರು, ರಹಿಮ್ ಕುಂಜೂರು, ಗಣೇಶ್ ಆಚಾರ್ಯ, ಸುಧೀರ್ ಕರ್ಕೇರ, ಕರುಣಾಕರ ಪೂಜಾರಿ, ಯಶವಂತ್ ಪಲಿಮಾರ್, ಶೋಭಾ ಬಂಗೇರ, ವಿದ್ಯಾ ಲತಾ, ಸತೀಶ್ ಚಂದ್ರ, ಕೆ.ಎಚ್. ಉಸ್ಮಾನ್, ರಹಿಮಾನ್ ಕಣ್ಣಂಗಾರ್, ಅಶ್ವಿನಿ ಬಂಗೇರ, ಆಶಾ ಅಂಚನ್, ಹರೀಶ್ ನಾಯಕ್, ಜ್ಯೋತಿ ಮೆನನ್, ಮುಬೀನಾ ಲಿಯಾಖತ್, ಸುಚರಿತ ಲಕ್ಷ್ಮಣ್, ಜನೇಟ್ ಬರ್ಬೋಝ, ಸುನಂದಾ, ಸೀಮಾ ಮಾರ್ಗರೇಟ್ ಡಿಸೋಜ, ಗೋಪಾಲ್ ಪೂಜಾರಿ ಫಲಿಮಾರು, ದೀಪಕ್ ಎರ್ಮಾಳ್, ಶಾಬು ಸಾಹೇಬ್ ಮಲ್ಲಾರ್, ನಸೀರ್ ಅಹ್ಮದ್ ಮತ್ತಿತರ ಮುಖಂಡರು, ಬ್ಲಾಕ್ ಪದಾಧಿಕಾರಿಗಳು, ಇತರ ಘಟಕ / ಸಮಿತಿಗಳ ಅಧ್ಯರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು. ಬ್ಲಾಕ್ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಅಮೀರ್ ಕಾಪು ಸ್ವಾಗತಿಸಿ, ನಿರೂಪಿಸಿದರು. ಬ್ಲಾಕ್ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಮೀಜ್ ಹುಸೇನ್ ಧನ್ಯವಾದವಿತ್ತರು.

Leave a Reply

Your email address will not be published. Required fields are marked *