×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಬದ್ರೀಯಾ ಜುಮ್ಮಾ ಮಸೀದಿ ಮಜೂರು ಮಲ್ಲಾರು ವಿವಿದ ಅಭಿವೃದ್ದಿ ಕಾಮಗಾರಿ ಉದ್ಘಾಟಿಸಿದ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ

ಬದ್ರೀಯಾ ಜುಮ್ಮಾ ಮಸೀದಿ ಮಜೂರು ಮಲ್ಲಾರು ಇದರ ನೂತನವಾಗಿ ಆಯ್ಕೆಯಾದ ಜಮಾತ್ ಆಡಳಿತ ಸಮಿತಿ ಹಾಗೂ ಜಮಾತ್ ಅಭಿವೃದ್ದಿ ಸಮಿತಿಯ ವತಿಯಿಂದ ದಾನಿಗಳ ನೆರವಿನಿಂದ ವಿವಿದ ಅಭಿವೃದ್ದಿ ಕಾಮಗಾರಿಗಳ ಉದ್ಘಾಟನೆಯನ್ನು ಮಾಜಿ ಸಚಿವರಾದ ಶ್ರೀ ವಿನಯ್ ಕುಮಾರ್ ಸೊರಕೆಯವರು ನೆರವೇರಿಸಿದರು . ಜಮಾತಿನ ಹಲವಾರು ಧಾನಿಗಳ ಮುಖಾಂತರ ಸಮಾರು 10 ಲಕ್ಷದ ಅಭಿವೃದ್ದಿ ಕೆಲಸ ಕಾರ್ಯಗಳು ನಡೆಯಿತು.ಮಸೀದಿಯ ಖತೀಬರಾದ ಅಬ್ದುಲ್ ರಶೀದ್ ಸಖಾಫಿ ದುವಾ ಮಾಡುವುದರ ಮೂಲಕ ಸಭಾ ಕಾರ್ಯಕ್ರಮ ಪ್ರಾರಂಭವಾಯಿತು .ಅಬಿವೃದ್ದಿ ಕೆಲಸಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಮಾಜಿ ಸಚಿವರು ಜಮಾತ್ ಸಮಿತಿ ಮತ್ತು ಅಬಿವೃದ್ದಿ ಸಮಿತಿ ಹಾಗೂ ಧಾನಿಗಳನ ಎಲ್ಲಾ ಜಮಾತಿಗರ ಒಗ್ಗಟ್ಟನ್ನು ಶ್ಲಾಘಿಸಿದರು. ಜಮಾತಿನ ಅಧ್ಯಕ್ಷರಾದ ಢಾ. ಯು ಎಂ ಫಾರೂಕ್ ಚಂದ್ರನಗರರವರು ಅಧ್ಯಕ್ಷತೆ ವಹಿಸಿದ್ದರು. ಶರ್ಫುದ್ದೀನ್ ಶೇಖ್ ಸ್ವಾಗತಿಸಿ ಅಬಿವೃದ್ದಿ ಕಾರ್ಯಗಳ ವಿವರಣೆ ನೀಡಿದರು .ಅತಿಥಿಗಳಾಗಿ ರಜಬ್ ಪರ್ಕಳ,ಅಶ್ರಫ್ ಮೂಸ ಮಜೂರು,ಹಸನಬ್ಬ ಸಾಹೇಬ್, ಹಾಜಿಮೋನು,ಉ ಎ ರಶೀದ್,ಸಾದಿಕ್ ಕೆ ಪಿ,ಮಹಮ್ಮದ್,ಶೌಕತ್ ಅಲಿ ಬಾವ,ಅಬ್ದುಲ್ ರಹೀಂ,ಜಮಾತ್ ಆಡಳಿತ ಸಮಿತಿಯ ಸದಸ್ಯರುಗಳು ಮಾಜಿ ಅಧ್ಯಕ್ಷರುಗಳು ಹಾಗೂ ಜಮಾತಿನ ಸದಸ್ಯರು ಉಸಸ್ಥಿತರಿದ್ದರು. ಅಶ್ರಫ್ ಖಾಸಿಂ ಕರಂದಾಡಿ ವಂದಿಸಿದರು .

Leave a Reply

Your email address will not be published. Required fields are marked *