×
Our website is made possible by displaying online advertisements to our visitors. Please consider supporting us by whitelisting our website.
  • 9880645340

ರಾಷ್ಟ್ರೀಯ ಸೇವಾ ಯೋಜನೆಯ ಚಿಂತನೆಗೆ ಗಾಂಧಿ ಸ್ಫೂರ್ತಿ~ ಬಿ.ಪಿ . ವರದರಾಯ್ ಪೈ

ಮಹಾತ್ಮ ಗಾಂಧಿ ಸ್ಮಾರಕ ಸಂಧ್ಯಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನ ಕಾರ್ಯಕ್ರಮವು ಗೋವರ್ಧನ ಗೋಶಾಲೆ ನೀಲಾವರದಲ್ಲಿನಡೆಯಿತು​. ಗಾಂಧೀಜಿ ಚಿಂತನೆಯ ಸತ್ಯ,​ ಅಹಿಂಸೆ ಗ್ರಾಮೀಣಾಭಿವೃದ್ಧಿ ಮತ್ತು ಸಮಾಜ ಸೇವೆಯು ರಾಷ್ಟ್ರೀಯ ಸೇವಾ ಯೋಜನೆಯ ತತ್ವಗಳು.​ ಈ ಕಾರಣದಿಂದಲೆ 1969 ರಲ್ಲಿ ಗಾಂಧೀಜಿಯವರ ಶತಮಾನೋತ್ಸವ ಸಂದರ್ಭದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಅನುಷ್ಠಾನ ಮಾಡಲಾಯಿತು. ಸ್ವಯಂ ಸೇವಕರು ಈ ತತ್ವಗಳನ್ನು ಅರ್ಥಮಾಡಿಕೊಂಡಾಗ ಮಾತ್ರ ನಿಜವಾದ ಸ್ವಯಂ ಸೇವಕರಾಗಲು ಸಾಧ್ಯ ಎಂದು ವಾರ್ಷಿಕ ಶಿಬಿರದ ಉದ್ಘಾಟಕಾರದ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ನ ಕಾರ್ಯದರ್ಶಿಗಳಾದ ಶ್ರೀ ​ಬಿ.ಪಿ . ವರದರಾಯ್ ಪೈ ಇವರು ಹೇಳಿದರು​. ಮಹಾತ್ಮಗಾಂಧಿ ಸ್ಮಾರಕ ಸಂಧ್ಯಾ ಕಾಲೇಜಿನ ಪ್ರಾಂಶುಪಾಲರಾದ ಡಾ।.ದೇವಿದಾಸ್ ಎಸ್.ನಾಯಕ್ ಇವರು ಅಧ್ಯಕ್ಷತೆ ವಹಿಸಿ ರಾಷ್ಟ್ರೀಯ ಸೇವಾ ಯೋಜನೆಯ ಮಹತ್ವ ಹಾಗೂ ಸ್ವಯಂ ಸೇವಕರ ಕರ್ತವ್ಯದ ಕುರಿತು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು .ಮುಖ್ಯ ಅತಿಥಿಗಳಾಗಿ ಪ್ರೊ।ನಿಕೇತನ,ಪ್ರಾಧ್ಯಾಪಕರು ಮತ್ತು ಕನ್ನಡ ವಿಭಾಗ ಮುಖ್ಯಸ್ಥರು ,ಡಾ।.ಜಿ.ಶಂಕರ್ ಮಹಿಳಾ ಸಕಾರಿ ಪ್ರಥಮ ದರ್ಜೆ ಕಾಲೇಜು ಉಡುಪಿ ಮಹಾತ್ಮ ಗಾಂಧಿ ಸ್ಮಾರಕ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಲಕ್ಷ್ಮೀನಾರಾಯಣ ಕಾರಂತ ,ಡಾ।.ಮಲ್ಲಿಕಾ ಎ ಶೆಟ್ಟಿ ಉಪನ್ಯಾಸಕರು , ಎಂಜಿಎಂ ಕಾಲೇಜು,, ಗೀತಾ ಬಾಳಿಗ, ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಶ್ರೀಮತಿ ಕೆ ಬೇಬಿ ಪಂಚಾಯತ್ ಅಧ್ಯಕ್ಷರು, ಎನ್ ಎಸ್ ಎಸ್ ನ ಯೋಜನಾಧಿಕಾರಿಗಳಾದ ಸನತ್ ಕೋಟ್ಯಾನ್ ಮತ್ತು ದೀಪಿಕಾ ಇವರು ಉಪಸ್ಥಿತರಿದ್ದರು.ಪ್ರಜ್ಞಾ ಸ್ವಾಗತಿಸಿ ಪುಣ್ಯ ವಂದಿಸಿ ದಿಶಾ ನಿರೂಪಿಸಿದರು

Leave a Reply

Your email address will not be published. Required fields are marked *