ಸಹಕಾರಿ ರಂಗದಲ್ಲಿ ಇಂದು ಕರ್ನಾಟಕದಲ್ಲಿರುವ ಉತ್ತುಂಗದ ಹೆಸರು ಡಾ| ರಾಜೇಂದ್ರ ಕುಮಾರ್ ಅವರದ್ದಾಗಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಸೋಮವಾರ ಇಲ್ಲಿನ ದ.ಕ. ಜಿಲ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಸಭಾಂಗಣದಲ್ಲಿ ಹಮ್ಮಿಕೊಂಡ ಸಹಕಾರ ರತ್ನ ಡಾ| ಎಂ.ಎನ್. ರಾಜೇಂದ್ರ ಕುಮಾರ್ ಅವರ 76ನೇ ಹುಟ್ಟು ಹಬ್ಬ ಸಂಭ್ರಮದ ಅಂಗವಾಗಿ ಹಮ್ಮಿಕೊಂಡ ‘ಅಭಿವಂದನಾ ಕಾರ್ಯಕ್ರಮದಲ್ಲಿ ಅವರು ಅಭಿವಂದನಾ ಭಾಷಣ ಮಾಡಿದರು.

ರಾಜೇಂದ್ರ ಕುಮಾರ್ ನಿರಂತರ 31 ವರ್ಷ ಯಶಸ್ವಿಯಾಗಿ ಎಲ್ಲವನ್ನೂ ನಿಭಾಯಿಸಿಕೊಂಡು ಬಂದಿರುವುದೇ ಅಚ್ಚರಿ. 60 ಕೋಟಿ ರೂ. ಇದ್ದ ಠೇವಣಿಯನ್ನು 8,000 ಕೋಟಿ ರೂ. ಗೆ ಏರಿಸಿದ್ದು, 15 ಸಾವಿರ ಕೋಟಿ ರೂ. ವಾರ್ಷಿಕ ವಹಿವಾಟು ಸಾಧಿಸಿರುವುದು, 114 ಶಾಖೆಗಳನ್ನು ತೆರೆದಿರುವುದು ಎಂದರು ಅಭಿವಂದನೆ ಸ್ವೀಕರಿಸಿ ಮಾತನಾಡಿದ ಡಾ| ಎಂಎನ್‌ಆರ್ ಅವರು, ಮೊಳಹಳ್ಳಿ ಶಿವರಾಯರು ಹಾಕಿಕೊಟ್ಟ ಭದ್ರಬುನಾದಿ ಯಿಂದ ಇಂದು ಸಹಕಾರ ಕ್ಷೇತ್ರ ರಾಷ್ಟ್ರ ಮಟ್ಟದಲ್ಲೇ ಹೆಸರಾಗಿದೆ. ನಾನು ಸಾಮಾನ್ಯ ಮನುಷ್ಯನಷ್ಟೇ. ಎಲ್ಲರನ್ನು ಸೇರಿಸಿಕೊಂಡು ಕೆಲಸ ಮಾಡಿದ್ದರಿಂದ ಇಂದು ಸಹಕಾರಿ ಕ್ಷೇತ್ರ ಉನ್ನತ ಮಟ್ಟಕ್ಕೆ ಏರಿದೆ ಎಂದು ಹೇಳಿದರು

ನಳಿನ್ ಮಾಜಿ ಸಂಸದ ನಳಿನ್ ಕುಮಾ ಕಟೀಲು ಮಾತನಾಡಿ, ರಾಜೇಂದ್ರ ಕುಮಾರ್ . ಕೇವಲ ಸಹಕಾರಿ ರಂಗದ ನಾಯಕರಲ್ಲ. ಅವರು ಬಹುಮುಖಿ ರಂಗದ ನಾಯಕರು. ಕಟೀಲು ಬ್ರಹ್ಮಕಲಶದಲ್ಲಿ ನನಗೆ ನೆರವಾದವರು, ಕಾರ್ಕಳ ಮಹಾಮಸ್ತಕಾಭಿಷೇಕವನ್ನು ವೈಭವಯುತವಾಗಿ ನಡೆಸಿದರು


