×
Our website is made possible by displaying online advertisements to our visitors. Please consider supporting us by whitelisting our website.
  • 9880645340

ರೌಡಿ ಶೀಟರ್ ನ ಕಾಲಿಗೆ ಗುಂಡು ಹಾರಿಸಿ ಪೊಲೀಸರಿಂದ ಬಂಧನ..!!

ಶಿವಮೊಗ್ಗ : ನಗರದ ರೌಡಿ ಶೀಟರ್ ಹರ್ಷದ್ಎಂಬಾತನು ಪೋಲೀಸರ ವಶಕ್ಕೆ  ಚಾಕು ತೋರಿಸಿ ಪೊಲೀಸರ ಮೇಲೆ ಹಲ್ಲೆಗೆ ಮುಂದಾದ ಆರೋಪದಲ್ಲಿ ರೌಡಿ ಶೀಟರ್ ಓರ್ವನ ಕಾಲಿಗೆ ಗುಂಡು ಹಾರಿಸಿ, ಪೊಲೀಸರು ವಶಕ್ಕೆ ಪಡೆದುಕೊಂಡಿದ್ದ ಘಟನೆ ನಡೆದಿದೆ.

ಕೊಲೆ ಪ್ರಕರಣದಲ್ಲಿ ಶಿಕ್ಷೆಯಾದರೂ ಸುಪ್ರೀಂಕೋರ್ಟ್‌ನಲ್ಲಿ ಜಾಮೀನು ಪಡೆದು ಓಡಾಡುತ್ತಿದ್ದ ಹರ್ಷದ್, ಚಾಕು ತೋರಿಸುತ್ತಾ ಜನರನ್ನ ದರೋಡೆ ಮಾಡುವ ಕೃತ್ಯಕ್ಕೆಕೈ ಹಾಕಿದ್ದ ಎಂದು ಆರೋಪಿಸಲಾಗಿದ್ದು, ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು, ಆತನನ್ನು ಬಂಧಿಸಲು ಹೋಗಿದ್ದರು.ಆ ವೇಳೆ ಪೊಲೀಸರಿಗೆ ಚಾಕು ತೋರಿಸಿ ಹಲ್ಲೆಗೆ ಮುಂದಾಗಿದ್ದು, ಆತ್ಮ ರಕ್ಷಣೆಗಾಗಿ ತುಂಗಾನಗರ ಪೊಲೀಸರು ಆತನ ಕಾಲಿಗೆ ಗುಂಡು ಹಾರಿಸಿ, ಆತನನ್ನ ವಶಕ್ಕೆ ಪಡೆದಿದ್ದಾರೆ ಎಂದು ತಿಳಿಯಲಾಗಿದೆ.  ಸಿಬ್ಬಂದಿ ಮೇಲೆ ಹಲ್ಲೆಗೆ ಮುಂದಾಗಿದ್ದನ್ನು ಗಮನಿಸಿದ ಇನ್ಸ್ಪೆಕ್ಟರ್ ಮಂಜುನಾಥ್, ಹರ್ಷದ್ ಕಾಲಿಗೆ ಗುಂಡು ಹಾರಿಸಿ, ಆತನನ್ನ ಹಿಡಿದಿದ್ದಾರೆ. ಬುದ್ಧನಗರ ನಿವಾಸಿಯಾಗಿರುವ ಹರ್ಷದ್ ವಿರುದ್ಧ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆ ಪ್ರಕರಣದಲ್ಲಿ ಆತನಿಗೆ ಶಿಕ್ಷೆಯೂ ಆಗಿತ್ತು. ಸುಪ್ರೀಂ ಕೋರ್ಟ್‌ನಲ್ಲಿ ಬೇಲ್ ತೆಗೆದುಕೊಂಡು ಬಂದಿರುವ ಹರ್ಷದ್ ಶಿವಮೊಗ್ಗದಲ್ಲಿ ಸುಲಿಗೆ, ದರೋಡೆ, ಬೆದರಿಕೆ ಹಾಕುವ ಕೆಲಸ ಮಾಡುತ್ತಿದ್ದ ಎಂದು  ‌ತಿಳಿದು‌ ಬಂದಿದೆ.

Leave a Reply

Your email address will not be published. Required fields are marked *