×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಡಾ ಶೈಖ್ ವಾಹಿದ್ ದಾವೂದ್ ಕುಟುಂಬ ಸಮ್ಮಿಲನ ಕಾರ್ಯಕ್ರಮ

ನಾನು ನನ್ನದು ಎನ್ನುವ ಸ್ವಾರ್ಥ ತೊರೆದು ಸಮಾಜದೊಂದಿಗೆ ಬದುಕುವ ಮನಸ್ಸು ನಮ್ಮದಾದರೆ ಈ ದೇಶ ಅದ್ಭುತವಾದ ಬದಲಾವಣೆಯನ್ನು ಕಾಣುವುದಕ್ಕೆ ಸಾಧ್ಯವಿದೆ ಎಂಬುದನ್ನು ಡಾ. ಶೇಖ್ ವಾಹಿದ್ ದಾವೂದ್ ಅವರು ತೋರಿಸಿಕೊಟ್ಟಿದ್ದಾರೆ ಎಂದು ನಮ್ಮ ನಾಡು ಒಕ್ಕೂಟದ ಸಂಸ್ಥಾಪಕ ಮಹಮ್ಮದ್ ಸಲೀಂ ಹೇಳಿದರು.

ಅವರು ಇತ್ತೀಚಿಗೆ ಗ್ರೀನ್ ವುಡ್ ರೆಸಾರ್ಟ್ ಕಾಪುವಿನಲ್ಲಿ ಆಯೋಜಿಸಿದ್ದ ಡಾ. ಶೈಖ್ ವಾಹಿದ್ ಕುಟುಂಬ ಸಮ್ಮಿಲನ ಕಾರ್ಯಕ್ರಮದಲ್ಲಿ ಆಗಮಿಸಿ ಮಾತನಾಡಿದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿದ್ದ ಮುಸ್ಲಿಂ ಒಕ್ಕೂಟದ ಉಡುಪಿಯ ಮುಖ್ಯಸ್ಥರಾದ ಮೊಹಮ್ಮದ್ ಮೌಲ್ವಾ ಮಾತನಾಡಿ ಇದು ಒಂದು ಅದ್ಭುತವಾದ ಕಾರ್ಯಕ್ರಮ ಎಲ್ಲಿಯೂ ಕಾಣ ಸಿಗದ ಕಾರ್ಯಕ್ರಮ, ಕುಟುಂಬದವರನ್ನು ಒಟ್ಟು ಸೇರಿಸುವುದೇ ಕಷ್ಟವಾಗಿರುವಾಗ ಇಂದು ಎಲ್ಲರನ್ನು ಜೊತೆ ಸೇರಿಸಿ ಸಾಧಕರನ್ನು ಗುರುತಿಸಿ ಸನ್ಮಾನಿಸಿರುವುದು ಅದ್ಭುತ ಕಾರ್ಯ. ಎಲ್ಲೂ ಆಗದೇ‌ ಇರುವಂತ ವಿರಳವಾದ ಕಾರ್ಯಕ್ರಮವನ್ನು ಆಯೋಜಿಇಸಿದ್ದೀರಾ ನಾವೂ ಕೂಡಾ ಇದರಿಂದ ಪ್ರೇರೇಪಣೆ ಕೊಂಡು ನಮ್ಮಲ್ಲೂ ಈ‌ ಕಾರ್ಯಕ್ರಮ ಆಯೋಜಿಸುತ್ತೇವೆ ಎಂದರು.

ನಮ್ಮ ಮಕ್ಕಳಲ್ಲಿ ಧಾರ್ಮಿಕ ಚಿಂತನೆಗಳೊಂದಿಗೆ ಸಮಾಜದ ಸಮಸ್ಯೆಗಳಿಗೆ ತುಡಿಯುವ ಮನಸ್ಸು ಹೆಚ್ಚಾಗಬೇಕು ಎಂದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಆಲ್‌ ಹವ್ವಾ ಮಸ್ಜೀದ್ ಅತ್ತೂರು ಕಾರ್ಕಳ ಇದರ ಧರ್ಮ ಗುರುಗಳಾದ ಮೌಲ್ವಾನ ಅಬ್ದುಲ್ ಹಫೀಜ್ ಕ್ವಾಸಿಮ್ ಖತೀಬ್ ಮಾತನಾಡಿ ದೂರ‌ ಚಲಿಸಿರುವ ಕುಟುಂಬದ ಸದಸ್ಯರನ್ನು ಒಟ್ಟು ಸೇರಿಸಿ ಅವರೊಳಗೆ ಬಾಂಧವ್ಯವನ್ನು ಗಟ್ಟಿಗೊಳಿಸುವ ಈ‌ ಕಾರ್ಯ ಮಾಡಿರುವ ಡಾ. ಶೇಖ್ ವಾಹಿದ್ ಅವರು ಅಭಿನಂದನಾರ್ಹರು ಎಂದರು .ಜುಮ್ಮಾ ಮಸ್ಜೀದ್ ಇಂದ್ರಾಳಿಯ ಧರ್ಮ ಗುರುಗಳಾದ ಮೌಲ್ವಾನ ಮುಶಿಯುಲ್ಲಾ ಖಾನ್ ಇಮಾಮ್ ಮಾತನಾಡಿ ನಾನು ಶೇಖ್ ವಾಹಿದ್ ಅವರನ್ನು ಮತ್ತು ಅವರ ಕುಟುಂಬದವರನ್ನು 25 ವರ್ಷಗಳಿಂದ ಬಲ್ಲೆನು ನಾನೂ ಅವರ ಕುಟುಂಬದ ಸದಸ್ಯನಾಗಿಯೇ‌ ಇದ್ದೇನೆ, ಅವರಿಗೆ ನನ್ನ ಬಗೆಗಿರುವ ಒಲವು, ನನಗೆ ಅವರ ಬಗೆಗೆ ಇರುವ ಪ್ರಾಮಾಣಿಕ ನಂಬಿಕೆ ನಮ್ಮನ್ನು ಇಂದಿನವರೆಗೂ ಅವರ ಸೋದರನ ಹಾಗೆ ಜೊತೆಗಿರುವಂತೆ ಮಾಡಿದೆ. ಅದಕ್ಕಾಗಿ ನಾನು ಅವರಿಗೆ ಚಿರ ಋಣಿಯಾಗಿದ್ದೇನೆ ಎಂದರು.

ನಮ್ಮ ಶ್ರದ್ಧೆಯ ನಂಬಿಕೆಗಳು ನಮ್ಮನ್ನ ಭಗವಂತನ ಬಳಿಗೆ ಕೊಂಡೊಯ್ಯುತ್ತವೆ, ಸಮಾಜಕ್ಕೆ ಒಳಿತನ್ನು ಬಯಸುವಂಥ ಮನಸ್ಸು ನಮ್ಮದಾದರೆ ಭಗವಂತ ನಮ್ಮನ್ನ ಇಷ್ಟ ಪಡುತ್ತಾನೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಮಾಜ ಸೇವಕ, ಸ್ಟಾರ್ ಪಿ.ವಿ.ಎಸ್ ಎಂಟರ್ ರ್ಪ್ರೈಸಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಮಣಿಪಾಲ್ ಇದರ ವ್ಯವಸ್ಥಾಪಕ ನಿರ್ದೇಶಕ, ಡಾ. ಶೇಖ್ ವಾಹಿದ್ ದಾವೂದ್ ಫ್ಯಾಮಿಲಿ ಟ್ರಸ್ಟ್ ನ ಮುಖ್ಯಸ್ಥರಾದ ಡಾ. ಶೇಖ್‌ವಹಿದ್ ದಾವೂದ್ ಮಾತಾನಡಿ ಸಮಾಜದ ನಡುವೆ ನಮ್ಮನ್ನು ಗುರುತಿಸಿಕೊಂಡಾಗ ಸಮಾಜಕ್ಕೆ ಹೊಸ ಕೊಡುಗೆಗಳನ್ನು ನೀಡಿದಾಗ ಸಮಾಜ ನಮ್ಮನ್ನು ಗೌರವಿಸುತ್ತದೆ . ಅದೇ ರೀತಿ ನನ್ನ ಸಮಾಜ ಕೂಡ ಒಳ್ಳೆಯ ಕೆಲಸಗಳನ್ನು ಮಾಡಿ‌ ಒಟ್ಟಿಗೆ‌ ಇದ್ದು, ಒಳ್ಳೆಯ ಸಾಧನೆಗಳನ್ ಮಾಡಿ, ನಮ್ಮ‌ ಮಕ್ಕಳು ವಿದ್ಯಾವಂತರಾಗಿ, ಬುದ್ಧಿವಂತರಾಗಿ ಸಮಾಜಕ್ಕೆ ಮಾದರಿಯಾಗಬೇಕು ಎಂದು‌ ಕರೆ‌ ನೀಡಿದರು. ನಮ್ಮ ಕುಟುಂಬದ ಎಲ್ಲರೂ ಸಮಾಜದ ಮುಖ್ಯಸ್ಥರಗಳಲ್ಲಿ ಮಿಂಚುವಂಥವರಾಗಬೇಕು ,ನಮ್ಮ ಹಿರಿಯರ ಆದರ್ಶಗಳು ನಮಗಾಗಿ ಅವರು ಪಟ್ಟ ಕಷ್ಟಗಳನ್ನ ನೆನಪಿಸಿಕೊಂಡು ಅವರು ಹಾಕಿಕೊಟ್ಟ ದಾರಿಯಲ್ಲಿ ಸಾಗಿದಾಗ ನಾವೆಲ್ಲರೂ ಮಾದರಿಯಾಗುತ್ತೇವೆ ಎಂದರು .ಕಾರ್ಯಕ್ರಮದಲ್ಲಿ ಜನವರಿ 5ರಂದು ವೆಲ್ಕಮ್ ಸಭಾಂಗಣದಲ್ಲಿ ಆಯೋಜಿಸಿದ್ದ ಕುರಾನ್ ಪಠಣ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು. ಕುಟುಂಬದ ಏಳಿಗೆಗಾಗಿ ಅವಿರತವಾಗಿ ಶ್ರಮಿಸಿದ ಮತ್ತು ಶ್ರಮಿಸುತ್ತಿರುವ .ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನ ವ್ಯಕ್ತಪಡಿಸಿದರು. ವೇದಿಕೆಯಲ್ಲಿ ಮಹಮ್ಮದ್ ಸಾದಿಕ್, ಮಹಮ್ಮದ್ ಹನೀಪ್, ಸಂಶುದ್ದೀನ್ ಸಾಹೇಬ್ ಉಪಸ್ಥಿತರಿದ್ದರು. ಶೇಖ್ ವಾಹಿದ್ ಧನ್ಯವಾದ ಗೈದರು. ಭೋಜನದ‌ ನಂತರ ಮನೋರಂಜನಾ ಆಟಗಳನ್ನು ಕುಟುಂಬಿಕರಿಗಾಗಿ ಆಯೋಜಿಸಲಾಗಿತ್ತು

ಜನಾಬ್ ಅಮೀರ್ ದಾವೂದ್ ಸಾಹೇಬ್

ಜನಾಬ್ ಸಾದಿಕ್ ಶಾಬುದ್ದಿನ್ ಸಾಹೇಬ್

ಜನಾಬ್ ಶಂಶದ್ದಿನ್ ರಝಕ್ ಸಾಹೇಬ್

ಜನಾಬ್ ಸಲೀಂ ಅಮನ್ ಸಾಹೇಬ್

ಜನಾಬ್ ಅರೀಫ್ ಹಿದಾಯತುಲ್ಲ ಸಾಹೇಬ್

ಜನಾಬ್ ಮೊಹಮ್ಮದ್ ಹನೀಫ್ ಜಾಫರ್ ಸಾಹೇಬ್

ಜನಾಬ್ ಸಯೀದ್ ಮಝೂರ್ ಅಹಮ್ಮದ್

ಜನಾಬ್ ಇಕ್ಬಲ್ ಹುಸ್ಮಾನ್ ಸಾಹೇಬ್

ಜನಾಬ್ ನಿಹಾಲ್ ಭಾಷಾ ಜನಾಬ್ ಅಶ್ಪಕ್ ಅಮೀರ್ ಸಾಹೇಬ್ ಜನಾಬ್ ವಾಸಿಂ ವಾಹಿದ್ ದಾವೂದ್ 12 ಜನ ಸಾಧಕರನ್ನ ಗುರುತಿಸಿ ಸನ್ಮಾನ ಮಾಡಲಾಯಿತು

Leave a Reply

Your email address will not be published. Required fields are marked *