×
Our website is made possible by displaying online advertisements to our visitors. Please consider supporting us by whitelisting our website.
  • 9880645340

ರಾಷ್ಟ್ರೀಯ ಮಟ್ಟದ ಮುಕ್ತ ಆಹ್ವಾನ ತುಳುನಾಡು ಕರಾಟೆ ಚಾಂಪಿಯನ್ ಶಿಪ್-2025 ಹಲವು ಬಹುಮಾನ ಗೆದ್ದ -ಫೈಝುಲ್ ಇಸ್ಲಾಂ ಆಂಗ್ಲ ಮಾಧ್ಯಮ ಶಾಲೆ

ಕುಬುಡೊ ಬುಡೊಕಾನ್ ಕರಾಟೆ ಅಸೋಸಿಯೇಶನ್ ಕರ್ನಾಟಕ (ರಿ). ಇದರ ಸಹಯೋಗದಲ್ಲಿ ಜನವರಿ 18ರಂದು ಗ್ರಾಮ ಪಂಚಾಯತ್ ಕ್ರೀಡಾಂಗಣ ಉದ್ಯಾವರದಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಮುಕ್ತ ಆಹ್ವಾನ ತುಳುನಾಡು ಕರಾಟೆ ಚಾಂಪಿಯನ್ ಶಿಪ್-2025 ರಲ್ಲಿ ಶಿರ್ವದ ಫೈಝುಲ್ ಇಸ್ಲಾಂ ಆಂಗ್ಲ ಮಾಧ್ಯಮ ಶಾಲೆಯ ಮಕ್ಕಳು ಭಾಗವಹಿಸಿದ್ದು, ಮುಹಮ್ಮದ್ ಸಯ್ಯಾಂ ಖಾಝಿ ದ್ವಿತೀಯ ಸ್ಥಾನ,ಅಫಾಕ್ ಅಬ್ಬಾಸ್ ತೃತೀಯ ಸ್ಥಾನ, ಮುಹಮ್ಮದ್ ಆದಿಲ್ ತೃತೀಯ ಸ್ಥಾನ , ಐಮನ್ ಅಬ್ದುಲ್ ಖಾದರ್ ತೃತೀಯ ಸ್ಥಾನ ಹಾಗೂ ಖದೀಜ ಶಫಿನ್ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.ಇವರು ಜಪಾನ್ ಶೋಡೋಕಾನ್ ಕರಾಟೆ ಕನ್ನಿಂಜುಕು ಆರ್ಗನೈಝೇಶನ್ ಇಂಡಿಯಾ ಇದರ ಕರ್ನಾಟಕ ರಾಜ್ಯದ ಮುಖ್ಯ ಶಿಕ್ಷಕ ಮತ್ತು ಪರೀಕ್ಷಕ ಸಂಶುದ್ದೀನ್ ಎಚ್.ಶೇಖ್ ಅವರಿಂದ ತರಬೇತಿ ಪಡೆದಿದ್ದಾರೆ.ಶಾಲಾ ಆಡಳಿತ ಮಂಡಳಿಯು ಉತ್ತಮ ಶಿಕ್ಷಣದೊಂದಿಗೆ ಕ್ರೀಡೆಗೆ ಪ್ರೋತ್ಸಾಹ ನೀಡುತ್ತಿದ್ದು ವಿದ್ಯಾರ್ಥಿಗಳಿಗೆ ಸಹಕಾರಿಯಾಗಿದೆ.

Leave a Reply

Your email address will not be published. Required fields are marked *