ಶಿರ್ವ ಹಿಂದೂ ಜೂನಿಯರ್ ಕಾಲೇಜಿನ ಆವರಣದಲ್ಲಿ ರವಿವಾರ ನಡೆದ ಹಳೆವಿದ್ಯಾರ್ಥಿ ಸಂಘದ ದಶಮಾನೋತ್ಸವ, ಕಾರ್ಯಕ್ರಮದಲ್ಲಿ ದಶಮಾನೋತ್ಸವ ಸ್ಮರಣ ಸಂಚಿಕೆ ಕೃತಿ ಸೌರಭವನ್ನು ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ ಬಿಡುಗಡೆಗೊಳಿಸಿದರು. . ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ವೆಬ್ ಸೈಟ್ ಅನಾವರಣಗೊಳಿಸಿದರು. ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ನಿವೃತ್ತ ಪ್ರಾಂಶುಪಾಲ ರಾಜಗೋಪಾಲ್.ಕೆ ಮತ್ತು ಹಳೆವಿದ್ಯಾರ್ಥಿಸಂಘ ಹಾಗೂ ದಶಮಾನೋತ್ಸವ ಸಂಘಟನಾ ಸಮಿತಿಯ ಪದಾಧಿಕಾರಿಗಳನ್ನು ವಿದ್ಯಾವರ್ಧಕ ಸಂಘದ ವತಿಯಿಂದ ಸಮ್ಮಾನಿಸಲಾಯಿತು. ನಿಟ್ಟೆ ಪರಿಗಣಿತ ವಿ.ವಿ.ಯ ಕುಲಪತಿ ಎನ್. ವಿನಯ್ ಹೆಗ್ಡೆ, ಅನ್ನಪೂರ್ಣ ಉಪಾಹಾರ ಗೃಹದ ದಾನಿಗಳಾದ ಹಿರಿಯ ಹಳೆ ವಿದ್ಯಾರ್ಥಿ ಶಿರ್ವ ಅಟ್ಟಿಂಜೆ ಶಂಭು ಶೆಟ್ಟಿ ಹೇಮಲತಾ ಶೆಟ್ಟಿ ದಂಪತಿ ಮತ್ತು ಕೋಡು ದಿವಾಕರ ಶೆಟ್ಟಿ ಸವಿತಾ ಶೆಟ್ಟಿ ದಂಪತಿ ಹಳೆವಿದ್ಯಾರ್ಥಿಗಳಾದ ಎಸ್.ಕೆ. ಸಾಲ್ಯಾನ್ ಬೆಳ್ಳಣ್ ಮತ್ತು ಶಿರ್ವ ನಡಿಬೆಟ್ಟು ಸಂಗೀತಾ ಎಸ್. ಹೆಗ್ಡೆ ಅವರನ್ನು ಸಮ್ಮಾನಿಸಲಾಯಿತು.ಈ ಸಂದರ್ಭದಲ್ಲಿ ಬೆಂಗಳೂರು ಬಂಟರ ಸಂಘ ಮಾಜಿ ಅಧ್ಯಕ್ಷ ಉಪೇಂದ್ರ ಶೆಟ್ಟಿ, ಪುಣೆ ಬಂಟರ ಸಂಘದ ಸಂತೋಷ್ ಶೆಟ್ಟಿ, ಜಾಗತಿಕ ಬಂಟರ ಸಂಘದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ನಿವೃತ ಪ್ರಿನ್ಸಿಪಾಲ್ ರಾಜಗೋಪಾಲ್ ಕೆ., ಮುಂಬಯಿ ಘಟಕ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ ದಶಮಾನೋತ್ಸವ ಸಂಘಟನಾ ಸಮಿತಿ ಸಂಚಾಲಕ ಕುತ್ಯಾರು ಕಿಶೋರ್ ಕುಮಾರ್ ಶೆಟ್ಟಿ, ಕೋಶಾಧಿ ಕಾರಿ ಸದಾನಂದ ಎಸ್., ಪ್ರಿನ್ಸಿಪಾಲ್ ಭಾಸ್ಕರ್ ಎ., ಮುಖ್ಯ ಶಿಕ್ಷಕಿ ವಸಂತಿ, ಬೆಂಗಳೂರು ಘಟಕ ಅಧ್ಯಕ್ಷ ರಾಜೇಶ್ ಶೆಟ್ಟಿ ಸಹ ಕೋಶಾಧಿಕಾರಿ ಮನೋಹರ ಶೆಟ್ಟಿ ಉಪಸ್ಥಿತರಿದ್ದರು. ದಶಮಾನೋತ್ಸವ ಸಂಘಟನ ಸಮಿತಿ ಅಧ್ಯಕ್ಷ ಖಾಂದೇಶ ಭಾಸ್ಕರ ಶೆಟ್ಟಿ ಸ್ವಾಗತಿಸಿದರು. ಹಳೆ ವಿದ್ಯಾರ್ಥಿ ಸಂಘದ ನಿಕಟಪೂರ್ವ ಅಧ್ಯಕ್ಷ ಕುತ್ಯಾರು ಪ್ರಸಾದ್ ಶೆಟ್ಟಿ ಸ್ಮರಣ ಸಂಚಿಕೆಯ ವಿವರ ನೀಡಿದರು. ಸಂಚಾಲಕ ಸಚ್ಚಿದಾನಂದ ಹೆಗ್ಡೆ, ಮೋಹನ್ ಪ್ರಭು ಸನ್ಮಾನ ಪತ್ರ ವಾಚಿಸಿದರು. ಕಾರ್ಯದರ್ಶಿ ಕುತ್ಯಾರು ನವೀನ್ ಶೆಟ್ಟಿ ವಂದಿಸಿ ದರು, ಜತೆ ಕಾರ್ಯದರ್ಶಿ ಪ್ರಶಾಂತ್ ಬಿ. ಶೆಟ್ಟಿ ಮತ್ತು ಬಬಿತಾ ಜಗದೀಶ್ ಅರಸ ಕಾರ್ಯಕ್ರಮ ನಿರೂಪಿಸಿದರು.

