×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಪರಶುರಾಮನ ಪ್ರತಿಮೆ ರಹಸ್ಯ ಬಯಲಿಗೆಳೆದ ಪ್ರಕರಣ ಕಾಂಗ್ರೆಸ್ ಮುಖಂಡರ ವಿರುದ್ಧ ನಗರ ಠಾಣೆಯಲ್ಲಿ ದಾಖಲಾದ ಪ್ರಕರಣಕ್ಕೆ ರಾಜ್ಯ ಉಚ್ಛ ನ್ಯಾಯಾಲಯವು ತಡೆಯಾಜ್ಞೆ

ಬೈಲೂರು ಎರ್ಲಪಾಡಿಯ ಪರಶುರಾಮ ಥೀಂ ಪಾಕ್ ೯ನಲ್ಲಿ ಪ್ರತಿಷ್ಟಾಪನೆಗೊಂಡ ಪರಶುರಾಮನ ಪ್ರತಿಮೆ ರಹಸ್ಯ ಬಯಲಿಗೆಳೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಕಳ ಕಾಂಗ್ರೆಸ್ ಮುಖಂಡರ ವಿರುದ್ಧ ನಗರ ಠಾಣೆಯಲ್ಲಿ ದಾಖಲಾದ ಪ್ರಕರಣಕ್ಕೆ ರಾಜ್ಯ ಉಚ್ಛ ನ್ಯಾಯಾಲಯವು ತಡೆಯಾಜ್ಞೆ ನೀಡಿದೆ. ಕಳೆದ ಅಕ್ಟೋಬರ್ 22ರಂದು ಪರಶುರಾಮ ಥೀಂ ಪಾಕ್ ೯ಗೆ ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಭೇಟಿ ನೀಡಿ ಪ್ರತಿಮೆಯ ಗುಣಮಟ್ಟದ ಪರಿಶೀಲನೆ ನಡೆಸಿ ನಿರ್ಮಿತಿ ಕೇಂದ್ರದ ಅಧಿಕಾರಿಗಳೊಂದಿಗೆ ಮಾಹಿತಿ ಪಡೆದಿದ್ದರು. ಇದೇ ಸಂದರ್ಭ ತೆರವು ಮಾಡಲಾದ ಪ್ರತಿಮೆಯ ಫೈಬರ್ ಅವಶೇಷಗಳನ್ನು ಹಿಡಿದುಕೊಂಡು ಕಾಂಗ್ರೆಸ್ ಮುಖಂಡರು ಸಾರ್ವಜನಿಕರಿಗೆ ಮಾಹಿತಿ ನೀಡುವ ವೀಡಿಯೋ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರಗೊಂಡಿದ್ದವು. ಇದನ್ನಾಧರಿಸಿ ಎರ್ಲಪಾಡಿ ಗ್ರಾ.ಪಂ. ಅಧ್ಯಕ್ಷ ಸುನಿಲ್ ಹೆಗ್ಡೆ ಕಾರ್ಕಳ ನಗರ ಠಾಣೆಗೆ ನೀಡಿದ ದೂರಿನನ್ವಯ ಕಾಂಗ್ರೆಸ್ ಮುಖಂಡರಾದ ಪುರಸಭೆ ಸದಸ್ಯ ಶುಭದ ರಾವ್, ಮಾಜಿ ಅಧ್ಯಕ್ಷ ಸುಭಿತ್ ಕುಮಾರ್, ಮಾಜಿ ಸದಸ್ಯ ವಿವೇಕಾನಂದ ಶೆಣೈ ಮತ್ತು ಐವನ್ ಮಿರಾಂಡ ಸೇರಿದಂತೆ ಒಟ್ಟು 4 ಮಂದಿಯ ವಿರುದ್ಧ ನಗರ ಠಾಣೆಯಲ್ಲಿ ಐಪಿಎಸ್ ಸೆಕ್ಷನ್ 442, 505(2) ಮತ್ತು 34 ಪ್ರಕಾರ ಕೇಸು ದಾಖಲಿಸಿದ್ದರು. ಇದೇ ಪ್ರಕರಣವನ್ನು ಪ್ರಶ್ನಿಸಿ ಕಾಂಗ್ರೆಸ್ ಮುಖಂಡರು ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ ಪರಿಣಾಮ, ಏ.4ರಂದು ನ್ಯಾಯಾಲಯವು ತಡೆಯಾಜ್ಞೆ ನೀಡಿದೆ. ನ್ಯಾಯವಾದಿ ಕೆರೆಬೆಟ್ಟು ಪ್ರಸನ್ನ ಶೆಟ್ಟಿ ಈ ಪ್ರಕರಣದ ಬಗ್ಗೆ ವಾದಿಸಿದ್ದರು.

Leave a Reply

Your email address will not be published. Required fields are marked *