
ಕಾಪು ಕ್ಷೇತ್ರದ ನೂತನ ಶಾಸಕರಾಗಿ ಆಯ್ಕೆಯಾದ ಗುರ್ಮೆ ಸುರೇಶ್ ಶೆಟ್ಟಿ ಅವರಿಗೆ ಪಲಿಮಾರು ಗ್ರಾಮ ಪಂಚಾಯತ್ ವತಿಯಿಂದ ಇಂದು ದಿನಾಂಕ 09-06-2023 ರಂದು ಪಲಿಮಾರು ಗ್ರಾಮ ಪಂಚಾಯತ್ ನ ಬ್ರಹ್ಮಶ್ರೀ ನಾರಾಯಣ ಗುರು ಸಭಾ ಭವನದಲ್ಲಿ ಅಭಿನಂದನಾ ಸಮಾರಂಭ ನೆರವೇರಿತು. ಸಭೆಯಲ್ಲಿ ಶಾಸಕರು ಸಭಾ ಭವನದ ನಾಮ ಫಲಕವನ್ನು ಅನಾವರಣ ಗೊಳಿಸಿ ಬಳಿಕ ಪಂಚಾಯತ್ ನ 5 ಶೇಕಡ ನಿಧಿಯಿಂದ ವಿಕಲಚೇತನರ ಕಲ್ಯಾಣ ನಿಧಿಯ ಸವಲತ್ತು ವಿತರಣೆ ಹಾಗೂ 25 ಶೇಕಡಾ ಪರಿಶಿಷ್ಟ ಜಾತಿ ಮೀಸಲು ನಿಧಿಯಲ್ಲಿ ಶೈಕ್ಷಣಿಕ ಉದ್ದೇಶಕ್ಕೆ ಲ್ಯಾಪ್ ಟಾಪ್ ವಿತರಣೆ ಮಾಡಿ ಮನೆ ರಿಪೇರಿಯ ಸಹಾಯಧನದ ಚಕ್ಕನ್ನು ವಿತರಿಸಿ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿದರು. ಶಾಸಕರು ಸಮಸ್ಯೆಗಳಿಗೆ ತುರ್ತು ಸ್ಪಂದನೆ ನೀಡಿ ಸೂಕ್ತ ಪರಿಹಾರ ನೀಡಬೇಕೆಂದು ಸಂಬಂಧಿಸಿದ ಇಲಾಖಾಧಿಕಾರಿಗಳಿಗೆ ಸೂಚಿಸಿದರು. ಈ ಸಂದರ್ಭದಲ್ಲಿ ಪಲಿಮಾರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಗಾಯತ್ರಿ ಪ್ರಭು, ಉಪಾಧ್ಯಕ್ಷರಾದ ಸೌಮ್ಯಲತಾ ಶೆಟ್ಟಿ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಶಶಿಕಾಂತ ಪಡುಬಿದ್ರಿ, ಉಪ ವಲಯ ಅರಣ್ಯಾಧಿಕಾರಿಗಳಾದ ಜೀವನ್ ಶೆಟ್ಟಿ, ಪಡುಬಿದ್ರಿ ಸಹಾಯಕ ಪೋಲಿಸ್ ಉಪ ನಿರೀಕ್ಷಕರಾದ ದಿವಾಕರ್, ಮೆಸ್ಕಾಂ ಅಭಿಯಂತರರಾದ ಹುಸೆನ್, ಆಯುಷ್ ವೈದ್ಯಾಧಿಕಾರಿಗಳಾದ ಪೂರ್ಣಿಮಾ ಪೈ, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಶಶಿಧರ, ಪ್ರಭಾರಿ ಗ್ರಾಮ ಆಡಳಿತ ಅಧಿಕಾರಿಗಳಾದ ಅರುಣ್ ಹಾಗೂ ಪಲಿಮಾರು ಗ್ರಾಮ ಪಂಚಾಯತ್ ಸರ್ವ ಸದಸ್ಯರು ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

