×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಬೈಕ್ ಅಪಘಾತ – ಯುವತಿ ಸ್ಥಳದಲ್ಲೇ ಸಾವು

ಅಪಘಾತದಲ್ಲಿ ಸ್ಥಳದಲ್ಲೇ ಮೃತಪಟ್ಟ ಘಟನೆ ನಿನ್ನೆ ಸಾಯಂಕಾಲ ಕಾಪು ಪೊಲೀಸ್ ಠಾಣಾ ವ್ಯಾಪ್ತಿಯ ಕಟಪಾಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಮೃತ ಯುವತಿ ಮಂಗಳೂರಿನ ರೋಶ್ನಿ ಡಿಸೋಜ (27) ಎಂದು ತಿಳಿದುಬಂದಿದೆ.ರೋಶ್ನಿ ತನಗೆ ಮದುವೆ ನಿಶ್ಚಯವಾಗಿದ್ದ ಜೋಯಲ್ ಎಂಬಾತನ ಜೊತೆ ಮಂಗಳೂರಿನಿಂದ ಉಡುಪಿಯ ಕಲ್ಮಾಡಿ ಚರ್ಚ್ ಗೆ ಭೇಟಿ ನೀಡಿ ಹಿಂದಕ್ಕೆ ಹೋಗುತ್ತಿರುವಾಗ ಈ ದುರ್ಘಟನೆ ನಡೆದಿದೆ. ಮೂಡುಬೆಟ್ಟು ಅಂಬಿಕಾ ಟಿಂಬರ್ ಬಳಿ ಹಾಕಲಾಗಿದ್ದ ಬ್ಯಾರಿಕೆಡ್ ಗೆ ಡಿಕ್ಕಿ ಹೊಡೆದು ಬೈಕ್ ಉರುಳಿ ಬಿದ್ದಿತ್ತು. ಇದರಿಂದ ಬೈಕ್ ನಿಂದ ಎಸೆಯಲ್ಪಟ್ಟ ರೋಶ್ನಿಯ ತಲೆಗೆ ಗಂಭೀರ ಗಾಯವಾಗಿತ್ತು. ತಕ್ಷಣ ಅವರನ್ನು ಉಡುಪಿಯ ಆದರ್ಶ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ರೋಶ್ನಿ ಅದಾಗಲೇ ಮೃತಪಟ್ಟಿದ್ದಾಗಿ ವೈದ್ಯರು ತಿಳಿಸಿದ್ದಾರೆ. ಬೈಕ್ ಸವಾರ ಜೋಯಲ್ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದು, ಈ ಕುರಿತು ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *