×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಮನೆಗೆ ನುಗ್ಗಿ13 ಲಕ್ಷ ರೂ. ಮೌಲ್ಯದ ಸೊತ್ತು ಕಳವು

ಕಾಪು ತಾಲೂಕಿನ ಬೆಳಪು ಗ್ರಾಮದಲ್ಲಿ ಮನೆಯೊಂದಕ್ಕೆ ನುಗ್ಗಿದ ಕಳ್ಳರು ಚಿನ್ನ, ಬೆಳ್ಳಿ, ವಜ್ರದ ಆಭರಣಗಳ ಸಹಿತ 13 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ಕಳವು ಮಾಡಿಕೊಂಡು ಪರಾರಿಯಾಗಿರುವ ಘಟನೆ ನಡೆದಿದೆ. ಜ. 25 ರಂದು ಪಡುಬಿದ್ರೆ ಶ್ರೀಖಡೇಶ್ವರಿ ದೇವಸ್ಥಾನದಲ್ಲಿ ಡಕ್ಕೆಬಲಿ ಸೇವೆ ಇರುವ ಕಾರಣ ಕಾಪುವಿನ ಪಣಿಯೂರು ಬೆಳಪು ಗ್ರಾಮದ ನಿವಾಸಿ ಹೇಮಲತಾ ರಾವ್ ಅವರ ಮನೆಗೆ ಅವರ ಸಂಬಂಧಿಕರು ಬಂದಿದ್ದರು. ಜ. 22ರಂದು ಹೇಮಲತಾ ಅವರ ಸಂಬಂಧಿಕರು ಪಡುಬಿದ್ರೆಯ ಶ್ರೀ ಖಡೇಶ್ವರಿ ದೇವಸ್ಥಾನಕ್ಕೆ ಹೋಗಿ ಅಲ್ಲಿನ ಪೂಜಾ ಕಾರ್ಯಕ್ರಮ ಮುಗಿಸಿ ರಾತ್ರಿ 12: 00ಗಂಟೆ ಸುಮಾರಿಗೆ ಮನೆಗೆ ವಾಪಾಸು ಬಂದಿದ್ದರು.ಜ.23 ರಂದು ಬೆಳಿಗ್ಗಿನ ಜಾವ ಹೇಮಲತಾ ಅವರು ಎದ್ದು ನೋಡಿದಾಗ ಮನೆಯೊಳಗಡೆ ಬರುವ ಬಾಗಿಲು ತೆರೆದಿರುವುದು ಗಮನಕ್ಕೆ ಬಂದಿದೆ. ಇದನ್ನು ನೋಡಿ ಮನೆಯಲ್ಲಿದ್ದವರು ಬಾಗಿಲು ತೆಗೆದು ಹೊರಗಡೆ ಹೋಗಿರಬಹುದೆಂದು ಭಾವಿಸಿ ಮನೆಯ ಕೆಲಸದಲ್ಲಿದ್ದರು.ಬಳಿಕ ಬೆಳಿಗ್ಗೆ 6:00ಗಂಟೆಗೆ ಅವರ ಸಂಬಂಧಿ ಅನುರಾಧ ರಾವ್ ರವರು ಬಂದು ಕಪಾಟಿನೊಳಗಡೆ ನೋಡಿದಾಗ ಬ್ಯಾಗ್‌ನಲ್ಲಿರಿಸಿದ್ದ ಬಂಗಾರದ ಸೊತ್ತುಗಳು ತೋರುತ್ತಿಲ್ಲ. ತಾನು ಕೆಳಗಡೆ ಬಂದು ನೋಡಿದಾಗ ತನ್ನ ಪರ್ಸ್ ನೆಲದ ಮೇಲೆ ಬಿದ್ದಿರುತ್ತದೆ ಎಂದು ತಿಳಿಸಿದ್ದರು. ಈ ವೇಳೆ ಪರಿಶೀಲನೆ ನಡೆಸಿದಾಗ ಮನೆಯಲ್ಲಿ ಇಟ್ಟಿದ್ದ ಬೆಳ್ಳಿಯ ವಸ್ತುಗಳು, ಚಿನ್ನ ಹಾಗೂ ವಜ್ರದ ಆಭರಣಗಳು, ಕ್ರೆಡಿಟ್ ಕಾರ್ಡ್ ಗಳ ಸಹಿತ 13, 00, 970 ರೂ. ಮೌಲ್ಯದ ಸೊತ್ತುಗಳು ಕಳವಾಗಿರುವುದು ಕಂಡು ಬಂದಿದೆ.   ಮನೆಯ ಹಿಂದಿನ ಬಾಗಿಲಿನ ಚಿಲಕವನ್ನು ಮುರಿದು ಒಳ ನುಗ್ಗಿದ ಮನೆಯೊಳಗಡೆ ಇದ್ದ ಸೊತ್ತುಗಳನ್ನು ಕಳವು ಮಾಡಿಕೊಂಡು ಹೋಗಿದ್ದಾರೆ ಎಂಬುದಾಗಿ ಹೇಮಲತಾ ಅವರು ನೀಡಿದ ದೂರಿನಂತೆ ಶಿರ್ವ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Leave a Reply

Your email address will not be published. Required fields are marked *