
ಬೆಳಗಾವಿ: ಶ್ರೀರಾಮಸೇನೆ ಜಿಲ್ಲಾಧ್ಯಕ್ಷ ರವಿ ಕೋಕಿತಕರ್ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾರೆ. ಹಿಂಡಲಗಾ ಗ್ರಾಮದ ಬಳಿ ರೋಡ್ ಹಂಪ್ ನಲ್ಲಿ ಕಾರು ನಿಧಾನ ಮಾಡಿಗಾ ಅಪರಿಚಿತರು ಗುಂಡು ಹಾರಿಸಿದರು, ಗುಂಡು ರವಿ ಗದ್ಯಕ್ಕೆ ತಗುಲಿ ನಂತರ ಚಾಲಕನ ಕೈಗೆ ಬುಲೆಟ್ ತಗುಲಿದೆ. ಗಾಯಗೊಂಡಿರುವ ರವಿ ಕೋಕಿತಕ ಹಾಗೂ ಕಾರು ಚಾಲಕ ಮನೋಜ್ ದೇಸೂರಕರ್ ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ. ಈ ಘಟನೆಯನ್ನು ಶ್ರೀರಾಮಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ತೀವ್ರವಾಗಿ ಖಂಡಿಸಿದ್ದು ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ.

