×
Our website is made possible by displaying online advertisements to our visitors. Please consider supporting us by whitelisting our website.
  • 9880645340

ನೈಜ ಆಶಯ–ಆದರ್ಶಗಳ ಸಂರಕ್ಷಣೆ ಮತ್ತು ನೈತಿಕ ಮೌಲ್ಯಗಳ ಪ್ರಚಾರ ಕಾಲದ ಅಗತ್ಯ: ಸುಲ್ತಾನುಲ್ ಉಲಮಾ ಎ.ಪಿ. ಉಸ್ತಾದ್

ಕಾಪು, ಅಕ್ಟೋಬರ್ 27: ಧಾರ್ಮಿಕ ಶಿಕ್ಷಣದ ಪ್ರಸಾರ, ಸುನ್ನೀ ಆದರ್ಶಗಳ ಸಂರಕ್ಷಣೆ, ನೈತಿಕ ಮೌಲ್ಯಗಳ ಪ್ರಚಾರ ಹಾಗೂ ಸಮಾಜದಲ್ಲಿ ಶಾಂತಿ, ಸಹಬಾಳ್ವೆ ಮತ್ತು ಪರಸ್ಪರ ಗೌರವವನ್ನು ಬಲಪಡಿಸುವುದು ಕಾಲದ ಅಗತ್ಯವಾಗಿದೆ ಎಂದು ಇಂಡಿಯನ್ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್ ಕಾಂತಪುರಂ ಹೇಳಿದರು.

ಸಮಸ್ತದ ಶತಮಾನೋತ್ಸವದ ಅಂಗವಾಗಿ ಸುನ್ನೀ ಜಂಇಯ್ಯತುಲ್ ಉಲಮಾ ಹಾಗೂ ಜಿಲ್ಲಾ ಸುನ್ನೀ ಸಂಯುಕ್ತ ಜಮಾಅತ್ ಉಡುಪಿ ಜಿಲ್ಲಾ ಸಮಿತಿಯ ವತಿಯಿಂದ ಕಾಪು ಕೊಪ್ಪಲಂಗಡಿಯ ಇನಾಸನ್ ಆಡಿಟೋರಿಯಂನ ತಾಜುಲ್ ಫುಖಹಾ ಖಾಝಿ ಬೇಕಲ್ ಉಸ್ತಾದ್ ವೇದಿಕೆಯಲ್ಲಿ ನಡೆದ ಉಡುಪಿ ಜಿಲ್ಲಾ ಸಮಸ್ತ ತಾತ್ವಿಕ ಸಮಾವೇಶಕ್ಕೆ ಸಂದೇಶ ನೀಡಿದ ಅವರು, 1926ರಲ್ಲಿ ಸ್ಥಾಪನೆಯಾದ ಸಮಸ್ತವು ಕಳೆದ ಒಂದು ಶತಮಾನದಿಂದ ಧಾರ್ಮಿಕ, ಶೈಕ್ಷಣಿಕ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಸಲ್ಲಿಸಿರುವ ಸೇವೆಗಳನ್ನು ಸ್ಮರಿಸುವುದರ ಜೊತೆಗೆ ಅದರ ಆದರ್ಶಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದರು.
2027ರ ಜನವರಿ 28, 29, 30 ಮತ್ತು 31ರಂದು ಕೇರಳದ ಮಲಪ್ಪುರಂ ವಾದಿ ಹರಮೈನ್ ನಗರದಲ್ಲಿ ನಡೆಯಲಿರುವ ಸಮಸ್ತ ಶತಮಾನೋತ್ಸವ ಸಮಾರೋಪ ಸಮ್ಮೇಳನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವಂತೆ ಸುಲ್ತಾನುಲ್ ಉಲಮಾ ಎ.ಪಿ. ಉಸ್ತಾದ್ ಕರೆ ನೀಡಿದರು

ಖಾಝಿ ಝೈನುಲ್ ಉಲಮಾ ಎಂ. ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ಅಧ್ಯಕ್ಷತೆಯಲ್ಲಿ ನಡೆದ ಸಮಾವೇಶವನ್ನು. ಅಸ್ಸಯ್ಯಿದ್ ಜಾಫರ್ ಅಸ್ಸಖಾಫ್ ತಂಙಳ್ ಕೋಟೇಶ್ವರ ಉದ್ಘಾಟಿಸಿದರು. ಸಮಸ್ತ ಕಾರ್ಯದರ್ಶಿ ಅಸ್ಸಯ್ಯಿದ್ ಖಲೀಲುಲ್ ಬುಖಾರಿ ತಂಙಳ್ ಕಡಲುಂಡಿ, ಮೌಲಾನಾ ಪೇರೋಡ್ ಅಬ್ದುರ್ರಹ್ಮಾನ್ ಸಖಾಫಿ ಹಾಗೂ ಮೌಲಾನಾ ಡಾ. ಮುಹಮ್ಮದ್ ಫಾಝಿಲ್ ರಝ್ವಿ ಕಾವಳಕಟ್ಟೆ ಮುಖ್ಯ ಭಾಷಣ ಮಾಡಿದರು.
ನಾಯಿಬ್ ಖಾಝಿ ಅಬ್ದುರ್ರಹ್ಮಾನ್ ಮದನಿ ಮೂಳೂರು, ಮೌಲಾನಾ ಅಬೂಸುಫ್ಯಾನ್ ಇಬ್ರಾಹಿಂ ಮದನಿ ಮತ್ತು ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ. ಗಫೂರ್ ಶುಭ ಹಾರೈಸಿದರು. ಯು.ಕೆ. ಮುಸ್ತಫಾ ಸಅದಿ ಮೂಳೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ಮೌಲಾನಾ ಮೌಲಾ ಅಲಿ ಅಂಜುಮನ್ ನಅತೇ ಶರೀಫ್ ಹಾಡಿದರು.

ಇಸ್ಮಾಯಿಲ್ ಮದನಿ ಮಾವಿನಕಟ್ಟೆ, ಕಾಪು ಖಾಝಿ ಅಹ್ಮದ್ ಮುಸ್ಲಿಯಾರ್, ಸಯ್ಯಿದ್ ಮುಹಮ್ಮದ್ ತಂಙಳ್ ಉಚ್ಚಿಲ, ಅಲ್ಹಾಜ್ ಸಲೀಂ ಮದನಿ ಎಲ್ಲೂರು, ಹಾಫಿಳ್ ಅಶ್ರಫ್ ಸಖಾಫಿ ಮೂಳೂರು, ಅಶ್ರಫ್ ಸಖಾಫಿ ಕನ್ನಂಗಾರು, ಅಬ್ದುಲ್ ಲತೀಫ್ ಫಾಳಿಲಿ ನಾವುಂದ, ಅಬ್ದುರಶೀದ್ ಸಖಾಫಿ ಮಜೂರು, ಬಶೀರ್ ಮದನಿ ಕಟಪಾಡಿ, ಅಬ್ರಝಾಕ್ ಖಾಸಿಮಿ ಕಾಪು, ಶಾಹುಲ್ ಹಮೀದ್ ನಹೀಮಿ ಉಚ್ಚಿಲ, ಯಹ್ಕೂಬ್ ಸಅದಿ ಕಾಪು, ಅಶ್ರಫ್ ಫುರ್ಖಾನಿ ಉಚ್ಚಿಲ, ಹಾಜಿ ಪಿ. ಅಬೂಬಕ್ಕರ್ ನೇಜಾರು, ಸ್ವಾದಿಖ್ ದೀನಾರ್ ಇನಾಸನ್, ಎಂ.ಎ. ಬಾವು ಹಾಜಿ ಮೂಳೂರು, ಮನ್ಸೂರ್ ಮೆಕ್ಕಾಸ್, ಚೆರಿಯಬ್ಬ ಹಾಜಿ ಮಾವಿನಕಟ್ಟೆ, ಬಿ.ಎಸ್.ಎಸ್. ರಫೀಕ್ ಗಂಗೊಳ್ಳಿ, ಅಶ್ರಫ್ ತೋನ್ಸೆ, ಹನೀಫ್ ಹಾಜಿ ಅಂಬಾಗಿಲು, ಬಿ.ಎಂ. ಜಾಫರ್ ತೋನ್ಸೆ, ಸಿ.ಎಚ್. ಮುತ್ತಲಿ ವಂಡ್ಸೆ, ಬಿ.ಎಂ. ಮೊಯ್ದಿನ್ ಕಟಪಾಡಿ, ಹಮೀದ್ ಹಾಜಿ ಕನ್ನಂಗಾರು, ಮುರಾದ್ ಅಲಿ ಮೂಳೂರು, ವೈ.ಎಂ. ಇಲ್ಯಾಸ್, ಶೀದಿ ಹಾಜಿ ಡಿಕೆಎಸ್ಸಿ, ವೈಬಿಸಿ ಬಾವ ಮೂಳೂರು, ಹುಸೈನ್ ಮೋನು ಪಡುಕರೆ, ಅಡ್ವೋಕೇಟ್ ಹಂಝತ್ ಉಡುಪಿ,ವೈಬಿಸಿ ಬಶೀರ್ ಅಲಿ, ಸುಭಾನ್ ಅಹ್ಮದ್ ಹೊನ್ನಾಳ, ಅಡ್ವೋಕೇಟ್ ಇಲ್ಯಾಸ್ ನಾವುಂದ ಸೇರಿದಂತೆ ಹಲವು ಧಾರ್ಮಿಕ ಹಾಗೂ ಸಾಮಾಜಿಕ ನಾಯಕರು ಉಪಸ್ಥಿತರಿದ್ದರು.

ಸಂಯುಕ್ತ ಜಮಾಅತ್ ಸಂಘಟನಾ ಕಾರ್ಯದರ್ಶಿ ಕೆ.ಎ. ಅಬ್ದುರ್ರಹ್ಮಾನ್ ರಝ್ವಿ ಅಲ್ ಫುರ್ಖಾನಿ ಕಲ್ಕಟ್ಟ ಸ್ವಾಗತಿಸಿ, ಉಲಮಾ ಒಕ್ಕೂಟದ ಕಾರ್ಯದರ್ಶಿ ಸುಲೈಮಾನ್ ಸಅದಿ ಅಲ್ ಅಫ್ಳಲಿ ವಂದಿಸಿದರು. ಅಬ್ದುಸ್ಸಲಾಂ ಮದನಿ ಉಳ್ಳಾಲ ಕಾರ್ಯಕ್ರಮ ನಿರೂಪಿಸಿದರು

Leave a Reply

Your email address will not be published. Required fields are marked *