×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಹೆಜಮಾಡಿ ಕುದುರೆ ಜಾರಂದಾಯ ದೈವಸ್ಥಾನ ದ ಗಡಿ ಪ್ರಧಾನ ಅರ್ಚಕ ನಾರಾಯಣ ಪೂಜಾರಿ ಯವರಿಗೆ ನುಡಿ ನಮನ

ಇತ್ತೀಚಿಗೆ ನಿಧನರಾದ ಹೆಜಮಾಡಿ ಕುದುರೆ ಜಾರಂದಾಯ ದೈವಸ್ಥಾನ ದ ಗಡಿ ಪ್ರಧಾನ ಅರ್ಚಕ ನಾರಾಯಣ ಪೂಜಾರಿ ಯವರಿಗೆ ನುಡಿ ನಮನ ಕಾರ್ಯಕ್ರಮ ವು ದಿನಾಂಕ 16.10.2026 ರಂದು ಹೆಜಮಾಡಿ ಬಿಲ್ಲವ ಸಂಘದ ರತ್ನ ಶಂಕರ್ ಸಭಾ ಭವನ ದಲ್ಲಿ ಜರಗಿತು.

ಹೆಜಮಾಡಿ ಕುದುರೆ ಜಾರಂದಾಯ ದೈವಸ್ಥಾನದ ಅಧ್ಯಕ್ಷ ಪ್ರಭೋದ್ ಚಂದ್ರ ಹೆಜಮಾಡಿ ಯವರು ಪ್ರಾಸ್ತವಿಕವಾಗಿ ಮಾತನಾಡಿ ದಿ. ನಾರಾಯಣ ಪೂಜಾರಿ ಯವರ ಕಾರ್ಯ ವೈಖರಿ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು.
ಕಾರ್ಯಕ್ರಮ ದಲ್ಲಿ ಪಡುಬಿದ್ರೆ ಕಲ್ಲಟ್ಟೆ ಶ್ರೀ ಜಾರಂದಾಯ ದೈವಸ್ಥಾನ ದ ಗುತ್ತಿನಾರ್ ವಿಶುಕುಮಾರ್ ಶೆಟ್ಟಿ, ಕೊಡಮಣಿತ್ತಾಯ ದೈವಸ್ಥಾನ ದ ಅರ್ಚಕ, ಜ್ಯೋತಿಷಿ ಕೇಶವ ಅಮೀನ್, ಹೆಜಮಾಡಿ ಬಿಲ್ಲವ ಸಂಘದ ಅಧ್ಯಕ್ಷ ಮೋಹನ್ ದಾಸ್ ಹೆಜಮಾಡಿ, ಹೆಜಮಾಡಿ ಕುದುರೆ ಜಾರಂದಾಯ ದೈವಸ್ಥಾನದ ಗೌರವ ಅಧ್ಯಕ್ಷ ಮಾಧವ ಸನಿಲ್, ಹೆಜಮಾಡಿ ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷರು ಗಳಾದ ವಾಮನ್ ಕೋಟ್ಯಾನ್ ನಡಿಕುದ್ರು, ಸುಧಾಕರ ಕರ್ಕೇರಾ, ಬಾಲಚಂದ್ರ ಸನಿಲ್ ಮುಲ್ಕಿ ಇವರುಗಳು ದಿ ನಾರಾಯಣ ಪೂಜಾರಿ ಯವರಿಗೆ ನುಡಿ ನಮನ ಸಲ್ಲಿಸಿದರು.
ಕಾರ್ಯಕ್ರಮ ದಲ್ಲಿ ಮಾಜಿ ಗ್ರಾಮ ಪಂಚಾಯತ್ ನ ಅಧ್ಯಕ್ಷ ಸುಭಾಸ್. ಜಿ ಸಾಲ್ಯಾನ್, ಶೀನ ಪೂಜಾರಿ ಪಡುಬಿದ್ರಿ, ಮೂಡುಕರೆ ಬಿಲ್ಲವ ಸಮಿತಿಯ ಅಧ್ಯಕ್ಷ ಶ್ರೀನಿವಾಸ್ ಕೋಟ್ಯಾನ್, ಮೃತರ ಪತ್ನಿ, ಪುತ್ರಿಯರು, ಅಳಿಯಂದಿರು, ಮೊಮ್ಮಕ್ಕಳು, ಕುಟುಂಬಿಕರು ಹಾಗೂ ಬಂಧು ಮಿತ್ರರು ಉಪಸ್ಥಿತರಿದ್ದರು. ಮನೋಹರ್ ಹೆಜಮಾಡಿ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *