×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಪೆರ್ಡೂರ್ ಗ್ರಾ. ಪಂ ‘ಜನಸ್ಪಂದನ ಕಾರ್ಯಕ್ರಮ’ ಜನರ ಅಹವಾಲು ಸ್ವೀಕರಿಸಿದ : ಶಾಸಕ ಲಾಲಾಜಿ ಮೆಂಡನ್

ಮಾನ್ಯ ಶಾಸಕರಾದ ಲಾಲಾಜಿ ಆರ್ ಮೆಂಡನ್ ರವರು ಕ್ಷೇತ್ರದ ಪ್ರತಿ ಪಂಚಾಯತ್ ವ್ಯಾಪ್ತಿಯಲ್ಲಿ ಜನಸ್ಪಂದನ ಕಾರ್ಯಕ್ರಮ ನಡೆಸುತ್ತಿದ್ದು ಇಂದು ಪೆರ್ಡೂರ್ ಗ್ರಾಮ ಪಂಚಾಯತ್ ಗೆ ಭೇಟಿ ನೀಡಿ ಇಲ್ಲಿನ ಸುಬ್ರಾಯ ಕಲ್ಯಾಣ ಮಂಟಪದಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿದರು. ವಿವಿಧ ಇಲಾಖೆ ಅಧಿಕಾರಿಗಳ ಉಪಸ್ಥಿತಿಯಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಲಾಯಿತು

ಪೆರ್ಡೂರ್ ಪಂಚಾಯತ್ ವ್ಯಾಪ್ತಿಯ ಫಲಾನುಭವಿಗಳಿಗೆ 94ಸಿ ಹಕ್ಕುಪತ್ರ, ಬಸವ ವಸತಿ ಹಾಗೂ ಅಂಬೇಡ್ಕರ್ ನಿಗಮದ ವಸತಿ ಯೋಜನೆಯಯಡಿಯಲ್ಲಿ 33 ಅರ್ಹ ಫಲಾನುಭವಿಗಳಿಗೆ ಮನೆ ಮಂಜೂರಾತಿಯ ಮಂಜೂರಾತಿ ಪತ್ರವನ್ನು, ಮುಖ್ಯಮಂತ್ರಿ ಪರಿಹಾರ ನಿಧಿ ಚೆಕ್, ಪ್ರಾಕೃತಿಕ ವಿಕೋಪ ನಿಧಿ ಚೆಕ್, 52 ಫಲಾನುಭವಿಗಳಿಗೆ ವೃದ್ಧಪ್ಯಾ ವೇತನ, ಸಂಧ್ಯಾ ಸುರಕ್ಷಾ, ಮನಸ್ವಿನಿ ಯೋಜನೆ, ಅಂಗವಿಕಲ ವೇತನ ವಿತರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಮಾನ್ಯ ಶಾಸಕರಾದ ಲಾಲಾಜಿ ಆರ್ ಮೆಂಡನ್ ರವರು ಪಂಚಾಯತ್ ವ್ಯಾಪ್ತಿಯಲ್ಲಿ ಹೆಚ್ಚಿನ ಮಟ್ಟದಲ್ಲಿ ಅಭಿವೃದ್ಧಿ ಕೆಲಸಗಳು ನಡೆದಿದ್ದು ಈ ಭಾಗಗಳಲ್ಲಿ ಹೆಚ್ಚಿನ ರಸ್ತೆಗಳು ಗ್ರಾಮೀಣ ಪ್ರದೇಶದ ಹಳ್ಳಿಗಳನ್ನು ಸಂಪರ್ಕಿಸುವ ರಸ್ತೆಗಳಾಗಿದ್ದು 30 ಕೋಟಿ ರೂಗಳ ವೆಚ್ಚದಲ್ಲಿ ಹೆಚ್ಚಿನ ರಸ್ತೆಗಳನ್ನು ಈಗಾಗಲೇ ಅಭಿವೃದ್ಧಿ ಪಡಿಸಲಾಗಿದೆ. ಇನ್ನೂ ಹೆಚ್ಚಿನ ಮಟ್ಟದಲ್ಲಿ ಈ ಭಾಗದಲ್ಲಿ ಮೂಲ ಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿ ಅನುದಾನ ನೀಡಲಾಗುವುದು ಹಾಗೂ ಬಿಜೆಪಿ ನೇತೃತ್ವದ ಪೆರ್ಡೂರ್ ಗ್ರಾಮ ಪಂಚಾಯತ್ ಆಡಳಿತ ಉತ್ತಮ ರೀತಿಯಲ್ಲಿ ಜನರ ಆಶೋತ್ತರಗಳಿಗೆ ಸ್ಪಂದಿಸುತಿದ್ದು ಪಂಚಾಯತ್ ಸದಸ್ಯರು ಜನರೊಂದಿಗೆ ನಿಕಟಸಂಪರ್ಕ ಹೊಂದಿದ್ದು ಜನಪರವಾಗಿ ಕೆಲಸ ಕಾರ್ಯ ಮಾಡುತ್ತಿದ್ದಾರೆ. ಈ ಭಾಗದ ಇತಿಹಾಸ ಪ್ರಸಿದ್ದ ಪೆರ್ಡೂರ್ ಅನಂತಪದ್ಮನಾಭ ದೇವಸ್ಥಾನದ ಪುನರ್ ನಿರ್ಮಾಣ ಕಾರ್ಯಕ್ಕೆ 30 ಕೋಟಿ ರೂಗಳ ವೆಚ್ಚದಲ್ಲಿ ಮುಂದಾಗಿದ್ದು ಶೀಘ್ರದಲ್ಲಿ ಕೆಲಸ ಕಾರ್ಯಕ್ರಮ ಪ್ರಾರಂಭಗೊಳ್ಳಲಿದ್ದು ಗ್ರಾಮಸ್ಥರು ಈ ಪುಣ್ಯ ಕಾರ್ಯಗಳಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳುವಂತೆ ಮಾನ್ಯ ಶಾಸಕರು ವಿನಂತಿಸಿಕೊಂಡರು ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರು ದೇವು ಪೂಜಾರಿ, ಉಡುಪಿ ತಹಸೀಲ್ದಾರ್ ಮಹೇಶ್ , ಕಂದಾಯ ನಿರೀಕ್ಷಕರು ಉಪೇಂದ್ರ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗೋಪಾಲ್, ಕುಕ್ಕೆಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಅರ್ಚನಾ ಹೆಗ್ಡೆ, ಮೆಸ್ಕಾಂ ಸಹಾಯಕ ಇಂಜಿನಿಯರ್ ಬಾಲಕೃಷ್ಣ, ಗ್ರಾಮ ಲೆಕ್ಕಧಿಕಾರಿ ಗುರುಪ್ರಸಾದ್ , ಪಂಚಾಯತ್ ರಾಜ್ ಸಹಾಯಕ ಎಂಜಿನಿಯರ್ ಸುಭಾಸ್ ರೆಡ್ಡಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಕುಮಾರ್, ಅರಣ್ಯ ಇಲಾಖೆ ಅಧಿಕಾರಿ ಗೋವಿಂದ ಪಾಟ್ಕರ್, ಕೃಷಿ ಇಲಾಖೆ ಅಧಿಕಾರಿ ಸುರೇಶ್, ಹಿರಿಯಡ್ಕ ಪೊಲೀಸ್ ಉಪನಿರಿಕ್ಷಕರು ಅನಿಲ್ ಮಾದರ್ ಹಾಗೂ ಇನ್ನಿತರ ಇಲಾಖೆ ಅಧಿಕಾರಿಗಳು, ಗ್ರಾಮ ಪಂಚಾಯತ್ ಸದಸ್ಯರುಗಳಾದ ಜಗದೀಶ್ ಹೆಗ್ಡೆ, ತುಕಾರಾಮ್ ನಾಯಕ್, ಸಚಿನ್, ಜಗದೀಶ್ ಶೆಟ್ಟಿ, ಉಷಾಲತಾ, ರೇವತಿ ನಾಯ್ಕ್,ಲತಾ ಪೂಜಾರಿ, ಭಾರತಿ, ಭವಾನಿ, ಶಕುಂತಲಾ ಶೆಟ್ಟಿ, ಉಷಾ, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಗ್ರಾಮ ಪಂಚಾಯತ್ ಅಧಿಕಾರಿಗಳು, ಪ್ರಮುಖರಾದ ಸುರೇಶ್ ಸೇರ್ವೆಗಾರ್, ಸುಭಾಸ್ ನಾಯ್ಕ್, ಮಹೇಶ್ ಶೆಟ್ಟಿ , ಆನಂದ್ ಕುಲಾಲ್, ಸಾರ್ವಜನಿಕರು ಹಾಗೂ ವಿವಿಧ ಯೋಜನೆಗಳ ಅರ್ಹ ಫಲಾನುಭವಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *