ಉಡುಪಿ ನಗರದ ಇಂದ್ರಾಳಿ ರೈಲ್ವೆ ನಿಲ್ದಾಣ ರಸ್ತೆಯ ಕೊಂಕಣ ರೈಲ್ವೆ ಸಿಬ್ಬಂದಿ ವಸತಿ ಕಾಲನಿ ಎದುರು ನೂತನವಾಗಿ ಆರಂಭಗೊಂಡಿರುವ ‘ಕಿಚನ್ ಬೌಲ್’ ಆಹಾರ ಮಳಿಗೆಗೆ ಇಂದು ಶುಭಾರಂಭ ನೆರವೇರಿತು.
ಕಾರ್ತಿಕ್ ಶೆಟ್ಟಿ ಹಾಗೂ ನಿತೇಶ್ ಪಿ.ಆರ್. ಅವರ ಮಾಲಿಕತ್ವದಲ್ಲಿ ಆರಂಭಗೊಂಡಿರುವ ಈ ಮಳಿಗೆಯನ್ನು ಉದ್ಯಮಿಗಳು ಹಾಗೂ ಸಮಾಜಸೇವಕರಾದ ಕೃಷ್ಣಮೂರ್ತಿ ಆಚಾರ್ಯ ಅವರು ಉದ್ಘಾಟಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಅಮೃತ ಕೃಷ್ಣಮೂರ್ತಿ ಆಚಾರ್ಯ ಉಪಸ್ಥಿತರಿದ್ದರು.

ಆಹಾರ ಪ್ರಿಯರಿಗೆ ವೈವಿಧ್ಯಮಯ ಹಾಗೂ ರುಚಿಕರ ಖಾದ್ಯಗಳನ್ನು ಒದಗಿಸುವ ಉದ್ದೇಶದಿಂದ ಆರಂಭಗೊಂಡಿರುವ ‘ಕಿಚನ್ ಬೌಲ್’ನಲ್ಲಿ ಚಿಕನ್ ಬೌಲ್, ಬಿರಿಯಾನಿ, ಶವರ್ಮಾ, ಬರ್ಗರ್, ಸ್ನ್ಯಾಕ್ಸ್ ಹಾಗೂ ಫ್ರೈಡ್ ರೈಸ್ ಸೇರಿದಂತೆ ವಿವಿಧ ಬಗೆಯ ಆಹಾರ ಪದಾರ್ಥಗಳು ಲಭ್ಯವಿರಲಿವೆ.

ನಗರದ ಆಹಾರ ಪ್ರಿಯರಿಗೆ ಹೊಸ ಆಯ್ಕೆಯನ್ನು ಒದಗಿಸುವ ಈ ಮಳಿಗೆಯು ಶುಭಾರಂಭದೊಂದಿಗೆ ತನ್ನ ಸೇವೆಯನ್ನು ಆರಂಭಿಸಿದೆ.
ಸ್ಥಳ: ಕೊಂಕಣ ರೈಲ್ವೆ ಸಿಬ್ಬಂದಿ ವಸತಿ ಕಾಲನಿ ಎದುರು, ಇಂದ್ರಾಳಿ ರೈಲ್ವೆ ನಿಲ್ದಾಣ ರಸ್ತೆ, ಉಡುಪಿ – 576102.
ಸಂಪರ್ಕ: 9483402456, 94823 32372

