×
Our website is made possible by displaying online advertisements to our visitors. Please consider supporting us by whitelisting our website.
  • 9880645340

**ರಾಷ್ಟ್ರೀಯ ಹೆದ್ದಾರಿಗೆ ಕಳ್ಳರ ಕಾಟ: 20ಕ್ಕೂ ಹೆಚ್ಚು ಸೂಚನಾ ಫಲಕಗಳು ನಾಪತ್ತೆ*

ಕಾರ್ಕಳ–ಮಾಳ ಮಾರ್ಗದ ರಾಷ್ಟ್ರೀಯ ಹೆದ್ದಾರಿ–169ರ ಕಾಮಗಾರಿ ಅಂತಿಮ ಹಂತದಲ್ಲಿರುವಾಗ ರಸ್ತೆ ಬದಿಯಲ್ಲಿ ಅಳವಡಿಸಲು ಸಂಗ್ರಹಿಸಿಡಲಾಗಿದ್ದ 20ಕ್ಕೂ ಹೆಚ್ಚು ದಾರಿ ಸೂಚಕ ಹಾಗೂ ವೇಗಮಿತಿ ಫಲಕಗಳು, ಕಬ್ಬಿಣದ ಕಂಬಗಳು ಕಳ್ಳತನವಾಗಿವೆ.

ಕಾರ್ಕಳ ಬೈಪಾಸ್‌ನಿಂದ ಮಾಳ ಗೇಟ್‌ವರೆಗಿನ ವ್ಯಾಪ್ತಿಯಲ್ಲಿ ಈ ಕಳ್ಳತನ ನಡೆದಿದ್ದು, ಕೆಲವು ಕಡೆ ಫಲಕಗಳೊಂದಿಗೆ ಕಬ್ಬಿಣದ ಕಂಬಗಳನ್ನೂ ಕತ್ತರಿಸಿ ಕೊಂಡೊಯ್ಯಲಾಗಿದೆ. ರಸ್ತೆ ಸುರಕ್ಷತೆಗೆ ಅಗತ್ಯವಾದ ಈ ಫಲಕಗಳ ಕಳ್ಳತನದಿಂದ ವಾಹನ ಸವಾರರಿಗೆ ಅಪಾಯ ಉಂಟಾಗುವ ಸಾಧ್ಯತೆ ಇದೆ ಎಂದು ಕಾಮಗಾರಿ ಅಧಿಕಾರಿಗಳು ತಿಳಿಸಿದ್ದಾರೆ.

ಕಳ್ಳರು ಗುಜರಿಗೆ ಮಾರಾಟ ಮಾಡುವ ಉದ್ದೇಶದಿಂದ ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದ್ದು, ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಅಧಿಕಾರಿಗಳು ಪೊಲೀಸ್ ಠಾಣೆಗೆ ದೂರು ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ. ಸಿಸಿಟಿವಿ ದೃಶ್ಯಗಳು ಹಾಗೂ ಸ್ಥಳೀಯರ ಮಾಹಿತಿಯ ಆಧಾರದ ಮೇಲೆ ಆರೋಪಿಗಳನ್ನು ಪತ್ತೆಹಚ್ಚುವ ಕಾರ್ಯ ನಡೆಯಲಿದೆ

Leave a Reply

Your email address will not be published. Required fields are marked *