ಸಮಾಜದಲ್ಲಿ ಪ್ರಚಾರ, ಪ್ರಶಸ್ತಿ ಅಥವಾ ಯಾವುದೇ ಪತ್ರಿಕಾ ಪ್ರಕಟಣೆಯ ಹಪಹಪಿತನವಿಲ್ಲದೆ, ಕೇವಲ ಮಾನವೀಯತೆಯ ದೃಷ್ಟಿಯಿಂದ ಸಾರ್ವಜನಿಕರ ಕಷ್ಟಗಳಿಗೆ ಸ್ಪಂದಿಸುವ ತೆರೆಮರೆಯ ಸಮಾಜ ಸೇವಕ ಉಚ್ಚಿಲದ ಶೇಖ್ ಮಯ್ಯದ್ದಿ ಇಸ್ಮಾಯಿಲ್ ಇವರಿಗೆ 2026ನೇ ಸಾಲಿನ ರಾಜ್ಯದ ಶ್ರೇಷ್ಠ ನಾಗರಿಕ ಸೇವಾ ಪ್ರಶಸ್ತಿ ಪ್ರೈಡ್ ಆಫ್ ಕರ್ನಾಟಕ”ನೀಡಿ ಗೌರವಿಸಲಾಯಿತು ಕರ್ನಾಟಕ ಮೀಡಿಯಾ ವತಿಯಿಂದ ಜೂನ್ 5 ರಂದು “ಕಲಾಗ್ರಾಮ”ಏನ್.ಜಿ.ಇ.ಎಫ್ ಲೇಔಟ್, ಜ್ಞಾನಭಾರತಿ, ಬೆಂಗಳೂರು ಸಭಾಂಗಣದಲ್ಲಿ ನಡೆದ, 2026 ನೇ ಸಾಲಿನ ರಾಜ್ಯದ ಶ್ರೇಷ್ಠ ನಾಗರಿಕ ಸೇವಾ ಪ್ರಶಸ್ತಿ “ಪ್ರೈಡ್ ಆಫ್ ಕರ್ನಾಟಕ” ಬಿರುದು ಹಾಗು ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಯ್ಯದ್ದಿಯವರ ಸಾಧನೆಯನ್ನು ಗುರುತಿಸಿ ಸನ್ಮಾನಿಸಲಾಯಿತು

ಈ ಸಂದರ್ಭದಲ್ಲಿ ಶ್ರೀ ಷ.ಬ್ರ. ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಅಧ್ಯಕ್ಷರು | ಸದ್ಧರ್ಮ ಸಿಂಹಾಸನ ಸಂಸ್ಥಾನ ಶ್ರೀ ಹೊನ್ನಮ್ಮಗವಿ ಮಠ, ಶಿವಗಂಗೆ ಕ್ಷೇತ್ರಡಾ. ಶ್ರೀ ಶ್ರೀ ಶ್ರೀ ಸಿದ್ದರಾಜು ಸ್ವಾಮೀಜಿ ಶ್ರೀ ಶನೇಶ್ವರ ಸ್ವಾಮಿ ಪುಣ್ಯ ಕ್ಷೇತ್ರ ಪಾಲನಹಳ್ಳಿ ಸನ್ಮಾನ್ಯ ಶ್ರೀ ಚೇತನ್ ಅಹಿಂಸಾ ಸನ್ಮಾನ್ಯ ಡಾ| ಪದ್ಮ ಪ್ರಕಾರ್, ಅಧ್ಯಕ್ಷರಾದ ರಮೇಶ್ ಎಸ್ .ಜಿ ಹಾಗು ಅನೇಕ ಗಣ್ಯರು ಉಪಸ್ಥಿತರಿದ್ದರು

