×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಕಾಪು : ಶ್ರೀ ನಾರಾಯಣ ಗುರು ನೂತನ ಕೋಚಿಂಗ್ ಸೆಂಟರ್ ಉದ್ಘಾಟನೆ

ಶ್ರೀ ನಾರಾಯಣ ಗುರು ಕೋಚಿಂಗ್ ಸೆಂಟರ್ ಹೀರಾ ಕಾಂಪ್ಲೆಕ್ಸ್ ಹೊಸ ಮಾರಿಗುಡಿ ಬಳಿ.ಉದ್ಘಾಟನೆಗೊಂಡಿತು ಮುಖ್ಯ ಅತಿಥಿಯಾಗಿ ದಂಡತೀರ್ಥ ಸಮೂಹ ಸಂಸ್ಥೆ ಕಾಪು ಪ್ರಾಂಶುಪಾಲರು ನೀಲಾನಂದ ನಾಯ್ಕ , ಮಾತನಾಡಿದ ಒಂದು ಹೊಸ ವಿದ್ಯಾ ಸಂಸ್ಥೆ ಅಥವಾ ತರಬೇತಿ ಕೇಂದ್ರ ಆರಂಭವಾಗುತ್ತಿದೆ ಎಂದರೆ, ಅಲ್ಲಿ ಜ್ಞಾನದ ಹೊಸ ದೀಪ ಬೆಳಗುತ್ತಿದೆ ಎಂದೇ ಅರ್ಥ.ನನ್ನ ಪ್ರೀತಿಯ ವಿದ್ಯಾರ್ಥಿಗಳೇ, ನಿಮಗೊಂದು ಮಾತು – ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳಿ. ಪ್ರಶ್ನೆ ಕೇಳುವುದನ್ನು ನಿಲ್ಲಿಸಬೇಡಿ. ಎಷ್ಟು ಪ್ರಶ್ನೆ ಕೇಳುತ್ತೀರೋ, ಅಷ್ಟು ಜ್ಞಾನ ಬೆಳೆಯುತ್ತದೆ. ಕಷ್ಟಪಟ್ಟು ಓದುವುದಕ್ಕಿಂತ, ಇಷ್ಟಪಟ್ಟು ಓದಿ. ಯಶಸ್ಸು ಖಂಡಿತ ಎಂದು ತಿಳಿಸಿದರು

ಕಾಪು ಶಾಸಕರು ಸುರೇಶ್ ಶೆಟ್ಟಿ ಗುರ್ಮೆ ಮಾತನಾಡಿದಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಕೇವಲ ಶಾಲಾ ಶಿಕ್ಷಣ ಅಷ್ಟೇ ಸಾಲುವುದಿಲ್ಲ. ಪ್ರತಿಯೊಬ್ಬ ಮಗುವಿಗೂ ವೈಯಕ್ತಿಕ ಗಮನ ಮತ್ತು ಕಠಿಣ ವಿಷಯಗಳನ್ನು ಸುಲಭವಾಗಿ ಅರ್ಥಮಾಡಿಕೊಳ್ಳುವ ಮಾರ್ಗದರ್ಶನದ ಅಗತ್ಯವಿರುತ್ತದೆ. ಟ್ಯೂಷನ್ ಕ್ಲಾಸ್‌ಗಳು ಕೇವಲ ಪರೀಕ್ಷೆಯಲ್ಲಿ ಅಂಕ ಗಳಿಸುವುದಕ್ಕಷ್ಟೇ ಸೀಮಿತವಾಗಬಾರದು; ಅವು ವಿದ್ಯಾರ್ಥಿಗಳಲ್ಲಿ ಕಲಿಯುವ ಆಸಕ್ತಿಯನ್ನು ಮತ್ತು ಆತ್ಮವಿಶ್ವಾಸವನ್ನು ಮೂಡಿಸುವಂತಾಗಬೇಕು. ಈ ಸಂಸ್ಥೆ ಆ ನಿಟ್ಟಿನಲ್ಲಿ ಕೆಲಸ ಮಾಡುತ್ತದೆ ಎಂದರು

ಈ ಸಂದರ್ಭದಲ್ಲಿ ಶ್ರೀ ಪ್ರಸಾದ್ ಶೆಣೈ ಆಡಳಿತ ಮೊಕೇಸರರು, ಶ್ರೀ ಹಳೇ ಮಾರಿಯಮ್ಮ ದೇವಸ್ಥಾನ, ಕಾಪು ಶ್ರೀ ಉಮಾನಾಥ ಕಾಪು ಅಧ್ಯಕ್ಷರು, ಶ್ರೀ ನಾರಾಯಣ ಗುರು ಸ್ಪೋರ್ಟ್ & ಎಜುಕೇಶನ್ ಟ್ರಸ್ಟ್, ಕಾಪು , ಸುಧಾಕರ್ ಸಾಲ್ಯಾನ್ ಮಾಜಿ ಅಧ್ಯಕ್ಷರು, ಜೆಸಿಐ ಕಾಪು ,ಶ್ರೀಮತಿ ಸೌಂದರ್ಯ ಯು. ಕೆ.ಸ್ಥಾಪಕರು, ಶ್ರೀ ನಾರಾಯಣ ಗುರು ಕೋಚಿಂಗ್ ಸೆಂಟರ್ ಕಾಪು , ವ್ಯವಸ್ಥಾಪಕ ನಿರ್ದೇಶಕ ಶ್ರೀ ಲೋಕೇಶ್ ಬೆಲ್ಚಡ ಕೊಡ್ಮಾಣ್, ನಿರ್ದೇಶಕರು ಶ್ರೀ ಸಾಕ್ಷಾತ್ ಯು. ಕೆ. ಹಾಗೂ ಡಾ. ಮಾಧುರ್ಯ ಎಸ್ , ಮುಂತಾದವರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *