×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಬೆಳ್ಳೆ ವ್ಯವಸಾಯ ಸೇ. ಸ. ಸಂಘ; ಹವಾನಿಯಂತ್ರಿತ ಶಾಖೆಗಳ ಲೋಕಾರ್ಪಣೆ

ಶಿರ್ವ, ಎ. 27ಅವಿಭಾಜಿತ ಜಿಲ್ಲೆಯಲ್ಲಿ ಸಹಕಾರಿ ಕ್ಷೇತ್ರಗಳು ಬೆಲೆದಷ್ಟು ದೇಶದಲ್ಲಿ ಎಲ್ಲಿಯೂ ಬೆಳೆದಿಲ್ಲ ದೇಶದಲ್ಲಿ 459 ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಗಳಿದ್ದರೂ ಸಂಘಗಳ ಸದಸ್ಯರಿಗೆ ಸ್ವಾವಲಂಬಿ ಜೀವನಕ್ಕೆ ಬೇಕಾದ ಆರ್ಥಿಕ ವ್ಯವಸ್ಥೆ ಕಲ್ಪಿಸಿದ ಅವಿಭಜಿತ ದ.ಕ. ಜಿಲ್ಲೆಯ ಸಹಕಾರಿ ಕ್ಷೇತ್ರ ದೇಶದಲ್ಲಿಯೇ ಮೊದಲನೇ ಸ್ಥಾನದಲ್ಲಿದ್ದು, ಮಾದರಿ ಯಾಗಿದೆ 12ಶೇಕಡಾ ಡಿವಿಡೆಂಟ್ ನೀಡುತ್ತಿದ್ದು ಠೇವಣಾತಿ ಮೇಲಿನ ಬಡ್ಡಿ ದರಕ್ಕಿಂತ ಹೆಚ್ಚಿನ ಡಿವಿಡೆಂಟ್ ಕೊಡುತ್ತಿದ್ದು ಇದೊಂದು ಬಲಾಢ್ಯ ಸಹಕಾರಿ ಕ್ಷೇತ್ರವಾಗಿದೆ ಎಂದು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಲ ಮತ್ತು ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ। ಎಂ. ಎನ್. ರಾಜೇಂದ್ರ ಕುಮಾರ್ ಹೇಳಿದರು.

27ರಂದು ಮೂಡು ಬೆಳೆಯ ಸಂತ ಲಾರೆನ್ಸ್ ಚರ್ಚ್ . ಸಭಾಭವನದಲ್ಲಿ ಬೆಳ್ಳಿ ವ್ಯವಸಾಯ ಸೇವಾ ಸಹಕಾರಿ ಸಂಘದ ಪಡುಬೆಳ್ಳೆ ಮತ್ತು ಕಟ್ಟಿಂಗೇರಿ (ನಾಲ್ಕು ಬೀದಿ) ಸ್ವಂತ ಕಟ್ಟಡದಲ್ಲಿ ನಿರ್ಮಿಸಿರುವ ಹವಾನಿಯಂತ್ರಿತ ನೂತನ ಶಾಖೆಗಳ ಉದ್ಘಾಟನೆ ಪ್ರಯುಕ್ತ ನಡೆದ ಸಭಾ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಸಂಘದ ಸೇವೆ ಮತ್ತು ಸಾಧನೆ ಗುರುತಿಸಿ 10 ಲ. ರೂ. ಗಳ ಪ್ರೋತ್ಸಾಹಧನ ನೀಡುವುದಾಗಿ ಘೋಷಿಸಿದರು.

ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಮಾತನಾಡಿ, ಗ್ರಾಮದಲ್ಲಿ 2 ಶಾಖೆಗಳನ್ನು ಪ್ರಾರಂಭಿಸಿ ಜನರಿಗೆ ಪ್ರಯೋಜನವಾಗುವಂತೆ ಮಾಡಿದ ಬೆಳ್ಳೆ ಸಹಕಾರಿ ಸಂಘ ಮತ್ತಷ್ಟು ಹೆಸರು ಗಳಿಸಲಿ ಎಂದರು.

ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜಾ ಮಾತನಾಡಿ, ಆರ್ಥಿಕ ಸಫಲತೆಯೊಂದಿಗೆ ಸಮರ್ಥ ನಾಯಕರನ್ನು ನೀಡುವ ಮೂಲಕ ಸಹಕಾರಿ ಸಂಘಗಳು ಸಾಮಾಜಿಕ ಪರಿವರ್ತನೆಯೊಂದಿಗೆ ವಿಶ್ವಸಾರ್ಹತೆ

ಎಸ್‌ ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ದೇವಿಪ್ರಸಾದ್ ಶೆಟ್ಟಿ ಗ್ರಾಹಕರ ಠೇವಣಿ ಪತ್ರ ಬಿಡುಗಡೆ ಮಾಡಿದ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಉಡುಪಿ ಜಿಲ್ಲೆ ಸಹಕಾರ ಸಂಘಗಳ ಉಪನಿಬಂಧಕಿ ಲಾವಣ್ಯಾ

ಡಾ| ಎಂ. ಎನ್. ರಾಜೇಂದ್ರ ಕುಮಾರ್, ಸುರೇಶ್ ಶೆಟ್ಟಿ ಗುರ್ಮೆ, ವಿನಯ ಕುಮಾರ್‌ಸೊರಕೆ, ಐವನ್ ಡಿ’ಸೋಜಾ, ದೇವಿಪ್ರಸಾದ್ ಶೆಟ್ಟಿ ಜಯಕರ ಶೆಟ್ಟಿ ಇಂದ್ರಾಳಿ ಅವರನ್ನು ಸಮ್ಮಾನಿಸಲಾಯಿತು.

ಕುಂದಾಪುರ ಸಹಕಾರ ಸಂಘಗಳ ಸಹಾಯಕ ನಿಬಂಧಕ ಸುಧೀರ್ ಮಾಜಿ ಸಹಾಯಕ ನಿಬಂಧಕ ಅರುಣ್ ಕುಮಾರ್ ಎಸ್. ವಿ., ಎಸ್‌ ಸಿಡಿಸಿಸಿ ಬ್ಯಾಂಕ್‌ನ ಮಾಜಿ ನಿರ್ದೇಶಕ ರಮೇಶ್ ಶೆಟ್ಟಿ ಸಂಘದ ಉಪಾಧ್ಯಕ್ಷೆ ಮೈಮುನಾ,

ನಿರ್ದೇಶಕರುಗಳಾದ: ಶ್ರೀ ಆ್ಯಂಡ್ರು ಗ್ರೆಗರಿ ಡಿ’ಸೋಜ, ಶ್ರೀ ರಿತೇಶ್ ಎಸ್. ಸುವರ್ಣಶ್ರೀ ವಿನ್ಸೆಂಟ್ ಫೆರ್ನಾಂಡೀಸ್, ಶ್ರೀಮತಿ ರಂಜಿನಿ ಹೆಗ್ಡೆ,

ದಯಾನಂದ ಶೆಟ್ಟಿ, ಶ್ರೀ ರಜನೀಶ್ ಅಲ್ಫೋನ್ಸ್ ಕುಲಚಂದ್ರ ರಾಜೇಂದ್ರ ಕುಮಾರ್, ಮೊಹಮ್ಮದ್ ಹನೀಫ್ ಕರುಣಾಕರ ಪಾನರ, ಶ್ರೀ ಬಾಲ ಗೋಪಾಲ ಬಲ್ಲಾಳ್ ಪ್ರಧಾನ ವ್ಯವಸ್ಥಾಪಕ ಇಸ್ಮಾಯಿಲ್, ಎಸ್‌ಸಿಡಿಸಿಸಿ ಬ್ಯಾಂಕ್‌ನ ವಲಯ ಮೇಲ್ವಿಚಾರಕ ಬಾಲಗೋಪಾಲ ಬಲ್ಲಾಳ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *