ಸ್ವಾತಂತ್ರ್ಯ ನಂತರ ಭಾರತದಲ್ಲಿ ಅಸ್ತಿತ್ವಕ್ಕೆ ಬಂದ ಮೊದಲ ಸರಕಾರದ ಸಂಪುಟದಲ್ಲಿ ಕಾನೂನು ಸಚಿವರಾಗಿ ಕರ್ತವ್ಯ ನಿರ್ವಹಿಸಿದ ಡಾ. ಬಿ. ಆರ್. ಅಂಬೇಡ್ಕರ್ ರವರು, ದೇಶದ ಅತ್ಯಂತ ಕೆಳವರ್ಗದ ಬಡವರ, ಕಾರ್ಮಿಕರ, ಮಹಿಳೆಯರ, ಯುವಕರ ಮತ್ತು ಎಲ್ಲಾ ವರ್ಗಗಳ ಜನರ ಜೀವನ ಮಟ್ಟವನ್ನು ಸುಧಾರಣೆಗೆ ತರಲು, ಮತ್ತು ಸಾಮಾಜಿಕ ನ್ಯಾಯದ ಮೂಲಕ ಸಮಾನತೆಯನ್ನು ತರುವ ಪ್ರಮುಖ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ರಚಿಸಿ ಜಾರಿಗೆ ತಂದಿರುವ ಭಾರತದ ಸಂವಿಧಾನವು ಇಂದು ವಿಶ್ವಕ್ಕೇ ಮಾದರಿಯಾಗಿದೆ. ತನ್ನಲ್ಲಿರುವ ಅಪರಿಮಿತ ಜ್ಞಾನದ ಆಗರದಿಂದ ಒಂದು ವಿಷಯವನ್ನು ವಿಶ್ಲೇಷಿಸುವ, ಅದರ ಬಗ್ಗೆ ಸಂಶೋಧನೆ ನಡೆಸುವ ಮತ್ತು ಅದರಿಂದ ಜನ ಸಾಮಾನ್ಯರ ಬದುಕಿನಲ್ಲಿ ಸತ್ಪರಿಣಾಮ ಬೀರಬಲ್ಲಂತಹ ಕಾನೂನುಗಳನ್ನ ಮಾಡಿ ಇಂದು ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ವಿಶ್ವದ ಇತರೆ ರಾಷ್ಟ್ರಗಳು ಕೂಡಾ ಪ್ರಶಂಸಿಸುವ ಸಂವಿಧಾನವನ್ನು ನೀಡಿದ ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ರವರು ಇವತ್ತಿನವರೆಗೂ ವಿಶ್ವ ಕಂದ ಅಪ್ರತಿಮ ಮೇಧಾವಿಯಾಗಿ ವಿಶ್ವಡೆಲ್ಲೆಡೆ ಜನಮಾನಸದಲ್ಲಿ ಅಚ್ಚಳಿಯದೆ ನೆಲೆಯೂರಿದ್ದಾರೆ ಎಂದು ಕೆ. ಪಿ. ಸಿ. ಸಿ ಪ್ರಚಾರ ಸಮಿತಿಯ ರಾಜ್ಯಾಧ್ಯಕ್ಷರು ಹಾಗೂ ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆಯವರು ಹೇಳಿದರು.
ಅವರು ಇಂದು ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ, ಕಾಪು ರಾಜೀವ್ ಭವನ ದಲ್ಲಿ ನಡೆದ ಡಾ. ಬಿ. ಆರ್. ಅಂಬೇಡ್ಕರ್ ರವರ 135 ನೇ ಜನ್ಮದಿನದ ಆಚರಣೆಯ ಕಾರ್ಯಕ್ರಮ ದಲ್ಲಿ ಭಾಗವಹಿಸಿ ಮಾತನಾಡುತ್ತಾ,
ಸರ್ವರಿಗೂ ಸಮಬಾಳು, ಸಮಾನ ಕಾನೂನು ಎಂಬ ರೀತಿಯಲ್ಲಿ ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಪ್ರಬಲ ಆಶಯದೊಂದಿಗೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ಕೊಟ್ಟ ಅತೀ ದೊಡ್ಡ ಕೊಡುಗೆಯಾದ ಭಾರತದ ಸಂವಿಧಾನವನ್ನು ತಿರುಚುವ, ಅದನ್ನು ಬದಲಾಯಿಸುವಂತಹ ದುಷ್ಟಪ್ರಯತ್ನಕ್ಕೆ ಹುನ್ನಾರ ನಡೆಸುತ್ತಿರುವ ಪ್ರಸಕ್ತ ಆಡಳಿತಾರೂಢ ಕೇಂದ್ರದ ಬಿ. ಜೆ. ಪಿ ಸರ್ಕಾರದ ನಡೆ ನಿಜಕ್ಕೂ ವಿಪರ್ಯಾಸದ ಪರಮಾವಧಿಯಂತಿದೆ.
ಮೇಲು-ಕೀಳು, ಬಡವ – ಬಲ್ಲಿದ ನಿಗೆ ಇರುವಂತಹ ಕಾನೂನಾತ್ಮಕವಾದ ಹಕ್ಕು ಅದು – ಮತದಾನದ ಹಕ್ಕು, ಆ ಹಕ್ಕನ್ನು ಕೂಡಾ ಎಸ್. ಐ. ಆರ್ (S I R ) ಎಂಬ ಗುಮ್ಮನನ್ನು ಮುನ್ನೆಲೆಗೆ ತಂದು ಕಸಿದುಕೊಳ್ಳುವಂತಹ ಪ್ರಯತ್ನಕ್ಕೆ ಕೈ ಹಾಕಿರುವ ಕೇಂದ್ರ ಸರಕಾರದ ನಡೆ ಕಾನೂನು ಬಾಹಿರ ಮತ್ತು ಅಪ್ರಜಾಸತ್ತಾತ್ಮಕ ಎಂದರು.
“ಭಾರತ ರತ್ನ ” ಪುರಸ್ಕೃತ “ಸಂವಿಧಾನ ಶಿಲ್ಪಿ ” ಅಂಬೇಡ್ಕರ್ರವರ ಜೀವನ ನಮಗೆಲ್ಲರಿಗೂ ಆದರ್ಶಪ್ರಾಯ, ಅವರ ಚಿಂತನೆಗಳನ್ನು ಮತ್ತು ಅವರು ರಚಿಸಿಕೊಟ್ಟ ಸಂವಿಧಾನವನ್ನು ಜೀವದ ಹಂಗನ್ನು ಲೆಕ್ಕಿಸದೆ ಉಳಿಸುವ, ಸಂರಕ್ಷಿಸುವ ಮಹತ್ತರವಾದ ಜವಾಬ್ದಾರಿ ಭಾರತೀಯರೆನಿಸಿದ ನಮ್ಮೆಲ್ಲರ ಮೇಲಿದೆ. ಅದು ನಮ್ಮ ಪರಮ ಕರ್ತವ್ಯ ಎಂದು ಭಾವಿಸಿ ಸಂವಿಧಾನ ಉಳಿಸುವ ಕಾರ್ಯದಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದರು.
ಈ ಸಂದರ್ಭ ಡಾ. ಬಿ. ಆರ್. ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ನಮನ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಪಕ್ಷದ ಪ್ರಮುಖರಾದ ನವೀನ್ ಚಂದ್ರ ಸುವರ್ಣ, ಪ್ರಶಾಂತ್ ಜತ್ತನ್ನ, ಶರ್ಫುದ್ದಿನ್ ಶೇಖ್, ಶಾಂತಲತಾ ಎಸ್. ಶೆಟ್ಟಿ, ಮೊಹಮ್ಮದ್ ಸಾದಿಕ್, ಸುಚರಿತಾ ಲಕ್ಷ್ಮಣ್, ಮಾರ್ಗರೆಟ್ ಸೀಮಾ ಡಿಸೋಜ, ದೇವರಾಜ್ ಎ. ಕೋಟ್ಯಾನ್, ಕೆ. ಎಚ್. ಉಸ್ಮಾನ್, ಸುನಂದಾ, ಸುಮನ್ ಬೋಳಾರ್, ಬಾಶು ಮಲ್ಲಾರ್, ಅಶೋಕ್ ಪೂಜಾರಿ, ಅಶೋಕ್ ನಾಯರಿ ಮತ್ತಿತರ ಪ್ರಮುಖರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಅಧ್ಯಕ್ಷತೆ ವಹಿಸಿದ್ದ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ವೈ. ಸುಕುಮಾರ್ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಪ್ರಧಾನ ಕಾರ್ಯದರ್ಶಿ ಅಮೀರ್ ಕಾಪು ವಂದಿಸಿದರು.

