ಉಡುಪಿ, ಬಂಟಕಲ್, ೧೩ ಅಕ್ಟೋಬರ್ ೨೦೨೫: ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಅಭಿವೃದ್ಧಿ ಪಡಿಸಿದ ಸುರಕ್ಷಾ ಕವಚ ಎಂಬ ಎಐ ಸಾಧನವು ದಿನಾಂಕ ೭ ಮತ್ತು ೮ ಅಕ್ಟೋಬರ್ ೨೦೨೫ರಂದು ನಿಟ್ಟೆ ವೃತ್ತಿಪರ ಶಿಕ್ಷಣ ಸಂಸ್ಥೆ ಮಂಗಳೂರು ಇಲ್ಲಿ ನಡೆದ ರಾಷ್ತ್ರೀಯ ಮಟ್ಟದ ಹ್ಯಾಕಥಾನ್ ನಲ್ಲಿ ಪ್ರಥಮ ಬಹುಮಾನವನ್ನು ಗಳಿಸಿತು. ಈ ಸಾಧನವು ಕನ್ನಡ, ತುಳು ಮತ್ತು ಇತರ ಪ್ರಾದೇಶಿಕ ಭಾಷೆಗಳಲ್ಲಿ ಆನ್‌ಲೈನ್‌ನಲ್ಲಿ ಆಗುವ ವಂಚನೆಯಿAದ ರಕ್ಷಿಸುವಂತೆ ತಯಾರಿಸಲಾಗಿದೆ. ೨೭ ಗಂಟೆಗಳ ಕೋಡಿಂಗ್ ಸ್ಪಿçಂಟ್‌ನಲ್ಲಿ ಅಭಿವೃದ್ಧಿ ಪಡಿಸಲಾದ ಈ ಯೋಜನೆಯಿಂದ ಸ್ಥಳೀಯ ಸಮುದಾಯಗಳಲ್ಲಿ ಹೆಚ್ಚುತ್ತಿರುವ ಡಿಜಿಟಲ್ ವಂಚನೆ ಸಮಸ್ಯೆಯನ್ನು ಪರಿಹರಿಸಲು ಸಹಾಯವಾಗುತ್ತದೆ. ಇಂಗ್ಲೀಷ್‌ನಲ್ಲಿ ಮಾತ್ರ ಕಾರ್ಯನಿರ್ವಹಿಸುವ ಬಹುತೇಕ ಭದ್ರತಾ ಸಾಧನಗಳಿಗಿಂತ ವಿಭಿನ್ನವಾಗಿ, ಸುರಕ್ಷಾ ಕವಚದಿಂದ ಇಂಗ್ಲೀಷ್ ಮತ್ತು ಕನ್ನಡದಲ್ಲಿ ಬರುವ ವಂಚನೆಯಿAದ ಸಂದೇಶಗಳನ್ನು ಸುಲಭವಾಗಿ ಪತ್ತೆಹಚ್ಚಬಹುದಾಗಿದೆ ಮತ್ತು ಸ್ಕಿçÃನ್‌ಶಾಟ್‌ನಿಂದ ಆನ್‌ಲೈನ್ ವಂಚನೆಯನ್ನು ಗುರುತಿಸಬಹುದಾಗಿದೆ. ವಿದ್ಯಾರ್ಥಿಗಳ ಈ ಯೋಜನೆಯ ಬಗ್ಗೆ ಮಂಗಳೂರು ಪೋಲೀಸ್ ವರಿಷ್ಠಾಧಿಕಾರಿಯವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಗಣಕಯಂತ್ರ ವಿಭಾಗದ ಎಸ್ ಸ್ವಾತನಾಥ್, ನಿಕಿತಾ ಸಿ ಹೆಗಡೆ, ವಿಜಯ್ ನೆಟೆಕಲ್ ಮತ್ತು ಮೆಷಿನ್ ಲರ್ನಿಂಗ್
ವಿಭಾಗದ ಅಂಶಿಕಾ ಅವರ ಈ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು ಮತ್ತು ಡೀನ್‌ಗಳು ಅಭಿನಂದನೆಗಳನ್ನು ವ್ಯಕ್ತಪಡಿಸಿದ್ದಾರೆ

