ಉಡುಪಿ: ಇಲ್ಲಿನ ಕೊಡವೂರು ಗ್ರಾಮದ ಜುಮಾದಿನಗರದ ಶ್ರೀ ಪಂಚಧೂಮಾವತಿ ದೈವಸ್ಥಾನದಲ್ಲಿ ಏಪ್ರಿಲ್ 18ರ ಶನಿವಾರದಂದು ದೈವಗಳ ಸಿರಿ ಸಿಂಗಾರದ ನೇಮೋತ್ಸವವು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರುಗಲಿದೆ.
ಬೆಳಿಗ್ಗೆ 8:30ಕ್ಕೆ ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ ಪ್ರಾರ್ಥನೆ ಬಳಿಕ ಜುಮಾಧಿನಗರ ದೈವಸ್ಥಾನದಲ್ಲಿ ಪ್ರಧಾನ ಹೋಮ, ಕಲಾಶಾಭಿಷೇಕ ಮತ್ತು ಚಪ್ಪರ ಮೂಹೂರ್ತ. ಮಧ್ಯಾಹ್ನ 12:30ಕ್ಕೆ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ.
ಸಂಜೆ 3:30ಕ್ಕೆ ಶ್ರೀ ವಡಭಾಂಡೇಶ್ವರ ಬಲರಾಮ ದೇವಸ್ಥಾನದಿಂದ ಭಜನಾ ತಂಡಗಳು, ಚೆಂಡೆ, ಡೋಲು ಹಾಗೂ ತಾಳಮದ್ದಳೆಗಳೊಂದಿಗೆ “ಸಾವಿರ ಸೂಟೆಯ ಬೃಹತ್ ಶೋಭಾಯಾತ್ರೆ” ನಡೆಯಲಿದೆ. ರಾತ್ರಿ 8:30 ರಿಂದ ಶ್ರೀ ಪಂಚಧೂಮಾವತಿ ಬಂಟ ದೈವಗಳ ವೈಭವದ ನೇಮೋತ್ಸವ ನಡೆಯಲಿದೆ ಎಂದು ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ

