×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಕುಂದಾಪುರ : ಬ್ಯಾರೀಸ್ ಸಂಸ್ಥೆಯ 120ರ ಸಂಭ್ರಮ ‘ಬ್ಯಾರೀಸ್ ಉತ್ಸವ-2025’ ಮತ್ತು ‘ಸಂಸ್ಥಾಪಕರ ದಿನಾಚರಣೆ’

ಶನಿವಾರ ನಡೆದ ಕೋಡಿ ಬ್ಯಾರೀಸ್ ಸಂಸ್ಥೆಯ 120ರ ಸಂಭ್ರಮ ‘ಬ್ಯಾರೀಸ್ ಉತ್ಸವ-2025’ ಮತ್ತು ‘ಸಂಸ್ಥಾಪಕರ ದಿನಾಚರಣೆ’ ಹಾಗೂ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ದೇಶಿಸಿ .ಶಾಸಕ ಹಾಗೂ ಕಿಯೋನಿಕ್ಸ್‌ನ ಅಧ್ಯಕ್ಷ ಶರತ್ ಬಚ್ಚೇಗೌಡ ಮಾತನಾಡಿದ ಪ್ರಬುದ್ಧತೆ ಬೆಳೆಸಿಕೊಳ್ಳಿ ಅದನ್ನು ಯಾರಿಂದಲೂ ಕಿತ್ತಿಕೊಳ್ಳಲು ಸಾಧ್ಯವಿಲ್ಲ ವಿಶ್ವದಲ್ಲಿ ಅತಂತ್ಯ ಚಿಕ್ಕ ವಯಸ್ಸಿನ ದೇಶ ಭಾರತ ಕರ್ನಾಟಕ ರಾಜ್ಯದ ಅಭಿವೃದ್ಧಿಗೆ ಕರಾವಳಿ ಜಿಲ್ಲೆಗಳಿಂದ ಹೆಚ್ಚಿನ ಕೊಡುಗೆ ಇದೆ ಕರಾವಳಿ ಜಿಲ್ಲೆಯ ಅಭಿವೃದ್ಧಿ ನಿಟ್ಟಿನಲ್ಲಿ ಸಿಆರ್ ಝಡ್ ಸಮಸ್ಯೆಗಳ ನಿವಾರಣೆಗಾಗಿ ಪ್ರತ್ಯೇಕ ನೀತಿ ಹಾಗೂ ಸಿಂಗಲ್ ವಿಂಡೋ ರಾಚಿಸಲು ಸರಕಾರ ಚಿಂತನೆ ನಡೆಸಿದೆ ಲೀಫ್’ ಕಲ್ಪನೆಯಡಿ ಸರಕಾರ ಒಂದು ಸಾವಿರ ಕೋಟಿ ರೂ.ವನ್ನು ಬಜೆಟ್ ನಲ್ಲಿ ಮೀಸಲಿಟ್ಟಿದ್ದು ಇದರಿಂದ ಪ್ರತಿಭಾನ್ವಿತರು, ನವೋದ್ಯಮಿಗಳಿಗೆ ಅನುಕೂಲವಾಗಲಿದೆಎಂದು ಹೇಳಿದರು

ಎ.ಕಿರಣ್ ಕುಮಾರ್ ಕೊಡ್ಡಿ ಮಾತನಾಡಿ ಗುಣಮಟ್ಟದ ಶಿಕ್ಷಣ ಕೊಡುವಂತಹ ಪ್ರಯತ್ನ ನಿಜವಾಗಿಯೂ ಮೆಚ್ಚುವಂತದ್ದು ಬ್ಯಾರೀಸ್ ವಿದ್ಯಾಸಂಸ್ಥೆಯು 120 ವರ್ಷದ ಸಂಭ್ರಮದಲ್ಲಿದೆ. ಕರಾವಳಿ ಅಭಿವೃದ್ಧಿ, ಇಲ್ಲಿನ ಪರಿಸರ ಕಾಳಜಿ ಬ್ಯಾರೀಸ್ ಗ್ರೂಪ್ ಇಂದು ವಿವಿಧ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ ಎಂದರು.

: ಹಾಜಿ ಕೆ.ಮೊಯ್ದಿನ್ ಬ್ಯಾರಿ ಸಯ್ಯದ್ ಮುಹಮ್ಮದ್ ಬ್ಯಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು

ಇದೇ ಸಂದರ್ಭದಲ್ಲಿ ಕರ್ನಾಟಕ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಎ.ಗಫೂರ್ ಪ್ರಾಧ್ಯಾಪಕ ಡಾ.ಸೋಮಶೇಖರ್ ಉಡುಪರನ್ನು ಸನ್ಮಾನಿಸಲಾಯಿತು

.ಬ್ಯಾರೀಸ್ ಗ್ರೂಪ್ ಆಫ್ ಇನ್ ಸ್ಟಿಟ್ಯೂಟ್‌ನ ಅಧ್ಯಕ್ಷ ಅಬ್ದುಲ್ ರಹ್ಮಾನ್‌ ಬ್ಯಾರಿ ಅಧ್ಯಕ್ಷತೆ ವಹಿಸಿದ್ದರು. ಕುಂದಾಪುರ ಉಪವಿಭಾಗದ ಸಹಾಯಕ ಆಯುಕ್ತ ರಶ್ಮಿ ಎಸ್.ಆರ್., ಕೋಡಿ ಶ್ರೀಚಕ್ರಮ್ಮ ದೇವಸ್ಥಾನದ ಗೋಪಾಲ ಪೂಜಾರಿ, ಕೆಎಂಎಫ್ ಬೆಂಗಳೂರಿನ ಅಧ್ಯಕ್ಷ ಮಂಜುನಾಥ್, ಬ್ಯಾರೀಸ್ ಗ್ರೂಪ್ ಆಫ್ ಇನ್ ಸ್ಟಿಟ್ಯೂಟ್‌ನ ಟ್ರಸ್ಟಿಗಳಾದ ಅಶ್ರಫ್ ಬ್ಯಾರಿ, ಸಿದ್ದೀಕ್ ಬ್ಯಾರಿ, ಡಾ.ಆಸಿಫ್ ಬ್ಯಾರಿ, ಅಕಾಡೆಮಿಕ್ಸ್ ಡೀನ್ ಡಾ.ಪೂರ್ಣಿಮಾ ಶೆಟ್ಟಿ ಬ್ಯಾರೀಸ್ ಡಿ.ಎಡ್, ಬಿ.ಎಡ್ ಕಾಲೇಜಿನ ಪ್ರಾಂಶುಪಾಲೆ ಡಾ.ಫಿರ್ದೌಸ್, ಡಾ.ಜಯಶೀಲ ಶೆಟ್ಟಿ ಜಟ್ಟಪ್ಪ ಸುಮಿತ್ರಾ ಮತ್ತಿತರರು ಉಪಸ್ಥಿತರಿದ್ದರು.

ಪಿಯು ಕಾಲೇಜಿನ ಪ್ರಾಂಶುಪಾಲೆ ಅಶ್ವಿನಿ ಶೆಟ್ಟಿ ಸ್ವಾಗತಿಸಿದರು. ಲಮೀಸ್ ಹಾಗೂ ಸ್ವಾತಿ ಕಾರ್ಯಕ್ರಮ ನಿರೂಪಿಸಿದರು. ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಶಬೀನಾ ಎಚ್. ವಂದಿಸಿದರು.

Leave a Reply

Your email address will not be published. Required fields are marked *