×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಜನ ಪ್ರತಿನಿಧಿಗಳ ಮಾರ್ಗದರ್ಶಕರಾಗಬೇಕಿದ್ದ ಶಾಸಕರುಗಳ ನಡೆ ಕೈಲಾಗದವನು ಮೈ ಪರಿಚಯಿಸಿಕೊಂಡಂತೆ – ಪ್ರಭಾ ಬಿ ಶೆಟ್ಟಿ

ಗ್ರಾಮ ಪಂಚಾಯಿತಿ ಮುಂದುಗಡೆ ಬಿಜೆಪಿ ಧರಣಿ ಇದು ಗುಬ್ಬಚ್ಚಿ ಮೇಲೆ ಬ್ರಹ್ಮಾಸ್ತ್ರ ಪ್ರಯೋಗ ಮಾಡಿ ಜನರ ಕಣ್ಣಿಗೆ ಮಂಕುಬೂದಿ ಎರಚಿ ನಾಟಕ ಪ್ರದರ್ಶಿಸುವ ಹೇಡಿತನದ ಪರಮಾವಧಿ. ನಮ್ಮ ಕರಾವಳಿಯ ಪಂಚಾಯತ್ ವ್ಯಾಪ್ತಿಯಲ್ಲಿ ಅನೇಕ ಜ್ವಲಂತ ಸಮಸ್ಯೆಗಳ ಬಗ್ಗೆ ಕರಾವಳಿಯಾದ್ಯಂತ ಗೆದ್ದು ಬಂದ ಶಾಸಕರು ವಿಧಾನಸೌಧದ ಅಧಿವೇಶನದಲ್ಲಿ ಚರ್ಚಿಸಿ ಬಗೆಹರಿಸುವ ಪ್ರಾಮಾಣಿಕ ಪ್ರಯತ್ನವನ್ನು ಜಿಲ್ಲೆಯ ಎಲ್ಲಾ ಶಾಸಕರು ಮಾಡಲಿ ಶಾಸಕರು ಗೆದ್ದು ಬಂದ ಮೇಲೆ ಪಕ್ಷಕ್ಕೆ ಸೀಮಿತವಲ್ಲ.ಪಕ್ಷದ ತತ್ವ ಸಿದ್ಧಾಂತಗಳನ್ನು ಬದಿಗಿಟ್ಟು ಪಕ್ಷಾತೀತವಾಗಿ ಎಲ್ಲಾ ಗ್ರಾಮ ಪಂಚಾಯಿತಿ ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಮಸ್ಯೆ ಪರಿಹರಿಸಬೇಕು ಅದನ್ನು ಬಿಟ್ಟು ಜನ ಪ್ರತಿನಿಧಿಗಳ ಮಾರ್ಗದರ್ಶಕರಾಗಬೇಕಿದ್ದ ಶಾಸಕರುಗಳ ಈ ನಡೆ ಕೈಲಾಗದವನು ಮೈ ಪರಿಚಯಿಸಿಕೊಂಡ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕಟಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಪ್ರಭಾ ಬಿ ಶೆಟ್ಟಿ ಯವರು ಪತ್ರಿಕಾ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ

Leave a Reply

Your email address will not be published. Required fields are marked *