×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಉಡುಪಿ: ಅಲೈಡ್ ಹೆಲ್ತ್ -ಪ್ಯಾರಾಮೆಡಿಕಲ್ ಸೈನ್ಸ್ ನ ಸಮ್ಮೇಳನ ‘ರ್‍ಯಾಪ್ಕಾನ್’ ಉದ್ಘಾಟಿಸಿದ – ಪ್ರೊ.ಡಾ.ವೈಶಾಲಿ ಶ್ರೀಜಿತ್

ಸತತ ಕಲಿಕೆ ಮುಖ್ಯವಾಗಿದೆ. ಈ ಮೂಲಕ ತಮ್ಮ ಜ್ಞಾನವನ್ನು ವೃದ್ಧಿಸಿಕೊಳ್ಳಬೇಕು. ವಿವಿಧ ಕಾಯಿಲೆಗಳೊಂದಿಗೆ ನೋವು ಹೊತ್ತುಕೊಂಡು ಬರುವ ರೋಗಿಗಳಿಗೆ ನಗುಮುಖದ ಸೇವೆ ನೀಡಬೇಕು ಎಂದು ರಾಜೀವ ಗಾಂಧಿ ವಿಶ್ವವಿದ್ಯಾನಿಲಯ ಹೆಲ್ತ್ ಸೈನ್ಸ ಸೆನೆಟ್ ಸದಸ್ಯೆ ಹಾಗೂ ಮಂಗಳೂರು ಎಂ.ವಿ. ಶೆಟ್ಟಿ ಕಾಲೇಜ್ ಆಫ್ ಅಲೈಡ್ ಹೆಲ್ತ್ ಸೈನ್ಸ್ ನ ಉಪ ಪ್ರಾಂಶುಪಾಲೆ ಪ್ರೊ.ಡಾ.ವೈಶಾಲಿ ಶ್ರೀಜಿತ್ ಹೇಳಿದ್ದಾರೆ. ಉಡುಪಿ ಲೋಂಬಾರ್ಡ್ ಸಮೂಹ ಸಂಸ್ಥೆಗಳ ವತಿಯಿಂದ ಸಂಸ್ಥೆಯ ಎಲ್.ಎಂ.ಎಚ್ ಕ್ಯಾಂಪಸ್ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಅಲೈಡ್ ಹೆಲ್ತ್ ಮತ್ತು ಪ್ಯಾರಾಮೆಡಿಕಲ್ ಸೈನ್ಸ್ ನ ದೈವಾರ್ಷಿಕ ಪ್ರಾದೇಶಿಕ ಸಮ್ಮೇಳನ ‘ರ್ಯಪ್ಯಾನ್’-2025’ವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲೋಂಬಾರ್ಡ್ ಸಮೂಹ ಸಂಸ್ಥೆಗಳ ನಿರ್ದೇಶಕ ಡಾ.ಸುಶೀಲ್ ಜತ್ತನ್ನ ವಹಿಸಿದ್ದರು. ಉಡುಪಿ ನಿರಾಮಯ ಕಾಲೇಜ್ ಆಫ್ ಅಲೈಡ್ ಹೆಲ್ತ್ ಸೈನ್ಸ್ ನ ಪ್ರಾಂಶುಪಾಲ ಪ್ರೊ. ಶಿವಶಂಕರ ಪೈ, ಕೋಟ ಅಶ್ರಿತ್ ಟ್ರಸ್ಟ್ ನಿರ್ದೇಶಕ ಡಾ. ವಿದ್ಯಾಧರ್ ಶೆಟ್ಟಿ, ಉಡುಪಿ ನೇತ್ರಜ್ಯೋತಿ ಪ್ಯಾರಾಮೆಡಿಕಲ್ ಮತ್ತು ಅಲೈಡ್ ಹೆಲ್ತ್ ಸೈನ್ಸ್ ನ ಸಿಇಓ ಡಾ.ಗೌರಿ ಪ್ರಭು ಮುಖ್ಯ ಅತಿಥಿಗಳಾಗಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ಮಂಗಳೂರು ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜಿನ ಜೀವ ರಸಾಯನಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ಶಿವಶಂಕರ, ಉಡುಪಿ ಸಿಟಿ ಆಸ್ಪತ್ರೆಯ ಡಾ.ಇಂದಿರಾ ಶಾನುಭಾಗ್‌, ಆದರ್ಶ ಅಲೈಡ್ ಹೆಲ್ತ್ ಸೈನ್ಸ್ ನ ಪ್ರಾಂಶುಪಾಲ ಪ್ರೊ.ರವಿಕುಮಾ‌ರ್ ಟಿ.ಎನ್., ಲೊಂಬಾರ್ಡ್ ಸಮೂಹ ಸಂಸ್ಥೆಗಳ ಸ್ವರಾಜ್ ಶೆಟ್ಟಿ ಭಾಗವಹಿಸಿದ್ದರು. ಆರೋಗ್ಯ ರಕ್ಷಣೆಯಲ್ಲಿ ಸುರಕ್ಷತೆ ಎಂಬ ವಿಷಯದ ಕುರಿತ ಪೋಸ್ಟರ್ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ವೇದಿಕೆಯಲ್ಲಿ ಲೋಂಬಾರ್ಡ್ ಕಾಲೇಜು ಆಫ್ ನರ್ಸಿಂಗ್ನ ಪ್ರಾಂಶುಪಾಲೆ ಸುಜಾತಾ ಕರ್ಕಡ, ಸ್ಕೂಲ್ ಆಫ್ ನರ್ಸಿಂಗ್ ನ ಪ್ರಾಂಶುಪಾಲೆ ವೀಣಾ ಮಿನೇಜಸ್, ಚರ್ಚಿನ ಚಾಪ್ಲಿನ್ ರೇಚರ್ ಡಿಸಿಲ್ವ, ಲೋಂಬಾರ್ಡ್ ಸಂಸ್ಥೆಯ ಆಡಳಿತಾಧಿಕಾರಿ ಡಿಲಿಮಾ ಪ್ರಭಾವತಿ ಉಪಸ್ಥಿತರಿದ್ದರು. ಲೋಂಬಾರ್ಡ್ ಹಾಸ್ಪಿಟಲ್ ಮತ್ತು ಪ್ಯಾರಾಮೆಡಿಕಲ್ ಕಾಲೇಜಿನ ಉಪ ಪ್ರಾಂಶುಪಾಲ ಡಾ.ಬಿ.ಎನ್‌. ಪೆರಲಾಯ ಸ್ವಾಗತಿಸಿದರು. ಲೋಂಬಾರ್ಡ್ ಪ್ಯಾರಾ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲೆ ಡಾ.ರೋಶನ್ ಪಾಯಸ್ ವಂದಿಸಿದರು. ಸಮ್ಮೇಳನದ ಸಂಘಟನಾ ಕಾರ್ಯದರ್ಶಿಗಳಾದ ಉಪನ್ಯಾಸಕಿ ಮೇಧಾ ಪಡಿಂಚರೆತ್ ಮತ್ತು ಸೈಷ್ಟಿ ಇವಾನ್ ಕಾರ್ಯಕ್ರಮ ನಿರೂಪಿಸಿದರು. ರಾಜ್ಯದ ವಿವಿಧ ಕಾಲೇಜುಗಳ ಪ್ಯಾರಾ ಮೆಡಿಕಲ್ ಮತ್ತು ಅಲೈಡ್ ಹೆಲ್ತ್ ಸೈನ್ಸ್ ನ ಅಧ್ಯಾಪಕರುಗಳು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *