14-02-2025 ರಿಂದ 20-02-2025 ವರೆಗೆ ಪ್ರಾಚೀನ ವ್ಯಾಪಾರ ಕೇಂದ್ರವಾಗಿದ್ದ ಬಾರಕೂರು ನಿತ್ಯೋತ್ಸವದ ರಾಜಧಾನಿಯಾಗಿತ್ತು. ಇಲ್ಲಿ 364 ದೇವಸ್ಥಾನಗಳಿದ್ದು ರಾಜ ದಿನಕ್ಕೊಂದು ದೇವಸ್ಥಾನಕ್ಕೆ ಭೇಟಿನೀಡಿ ಪೂಜೆ ಸಲ್ಲಿಸುತ್ತಿದ್ದನೆಂದು ಹೇಳಲಾಗಿದೆ. ಕರಾವಳಿ ಕರ್ನಾಟಕದ ಹೆಚ್ಚಿನ ಎಲ್ಲಾ ಜಾತಿ ಅಥವಾ ಸಮುದಾಯಗಳ ಮೂಲ ದೇವಸ್ಥಾನವಿರುವುದು ಬಾರಕೂರಿನಲ್ಲಿ ಎನ್ನುವುದು ಈ ಪ್ರದೇಶದ ಐತಿಹಾಸಿಕ ಮಹತ್ವಕ್ಕೆ ಸಾಕ್ಷಿಯಾಗಿದೆ. ಇಲ್ಲಿನ ಪ್ರಾಚೀನ ದೇವಾಲಯಗಳಲ್ಲಿ ಸುಮಾರು 1000 ವರ್ಷಕ್ಕೂ ಹೆಚ್ಚಿನ ಇತಿಹಾಸ ಹೊಂದಿರುವ ಶ್ರೀ ಬ್ರಹ್ಮಲಿಂಗ ವೀರಭದ್ರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನವು ಪ್ರಮುಖವಾಗಿದೆ. ಇದು ಕರಾವಳಿ ಕರ್ನಾಟಕದ ಅತಿ ಪ್ರಾಚೀನ ವೀರಭದ್ರ ದೇವಾಲಯಗಳಲ್ಲಿ ಒಂದಾಗಿದೆ. ಶ್ರೀ ಬ್ರಹ್ಮಲಿಂಗ ವೀರಭದ್ರ ಇಲ್ಲಿನ ಪ್ರಧಾನ ದೇವರಾಗಿದ್ದು ಹೊಯ್ಸಳ ಕಾಲದ ಶ್ರೀ ವೀರಭದ್ರ ದೇವರ ಶಿಲಾಮೂರ್ತಿಯು ಕರ್ನಾಟಕದಲ್ಲೇ ಅತಿ ಸುಂದರವಾದ ಮೂರ್ತಿಗಳಲ್ಲಿ ಒಂದಾಗಿದೆ. ಈ ದೇವಾಲಯದಲ್ಲಿರುವ ಶಿಲಾಶಾಸನ ಮತ್ತು ವೀರಗಲ್ಲು ಈ ದೇವಾಲಯದ ಪ್ರಾಚೀನತೆಯನ್ನು ತಿಳಿಸುವ ಐತಿಹಾಸಿಕ ದಾಖಲೆಯಾಗಿದೆ. ಹೊಯ್ಸಳ ದೊರೆ ಪ್ರತಾಪಚಕ್ರವರ್ತಿ ವೀರಬಲ್ಲಾಳ ದೇವನು ಶಕ 1255 (ಕ್ರಿಶ 1333)ರಲ್ಲಿ ದೇವಾಲಯಕ್ಕೆ ಬಿಟ್ಟ ಉಂಬಳಿಯ ಉಲ್ಲೇಖ ಈ ಶಿ ಲಾಶಾ ಸನ ದಲ್ಲಿದೆ ಇಂತಹ ಭವ್ಯ ಇತಿಹಾಸ ವಿರುವ ಈ ದೇವಸ್ಥಾನದ ಧಾರ್ಮಿಕ ಕಾರ್ಯಕ್ರಮ ಕ್ಕೆ ತಮ್ಮೆಲ್ಲರಿಗೂ ಆದರದ ಸ್ವಾಗತ. ತಂತ್ರಿಗಳಾದ ವೇದಮೂರ್ತಿ ಶ್ರೀ ಎನ್. ರಮೇಶ್ ಭಟ್, ನಾಯರಬೆಟ್ಟು ಇವರ ನೇತೃತ್ವದಲ್ಲಿ ನಡೆಯು ವ ಮೇಲಿನ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಿಗೆ ತಾವು ಕುಟುಂಬ ಸಮೇತರಾಗಿ ಆಗಮಿಸಿ ತನು-ಮನ-ಧನ ಸಹಕಾರವಿತ್ತು, ಸಿರಿಮುಡಿ ಗಂಧ ಪ್ರಸಾದ ಸ್ವೀಕರಿಸಿ, ಶ್ರೀ ದೇವರ ಪೂರ್ಣಾನುಗ್ರಹಕ್ಕೆ ಪಾತ್ರರಾಗಬೇಕಾಗಿ ಅಪೇಕ್ಷಿಸುವ ತಮ್ಮ ಆಗಮನಾಭಿಲಾಷಿಗಳು ಬಿ. ಶ್ರೀನಿವಾಸ ಶೆಟ್ಟಿಗಾರ್ ಅಧ್ಯಕ್ಷರು, ಅಭಿವೃದ್ಧಿ ಸಮಿತಿ ಹೆಚ್. ಎ. ಗೋಪಾಲ ಡಾ. ಜಯರಾಮ ಶೆಟ್ಟಿಗಾರ್ ಆಡಳಿತ ಮೊಕೇಸರರು ಅಧ್ಯಕ್ಷರು, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಅರ್ಚಕರು ಸಹ ಮೊತ್ತೇಸರರು ಮತ್ತು ಆಡಳಿತ ಮಂಡಳಿ ಸರ್ವ ಸಮಿತಿಗಳ ಪದಾಧಿಕಾರಿಗಳು ಮತ್ತು ಸದಸ್ಯರು ಏಳು ಮಾಗಣೆಯ ಮುಖ್ಯಸ್ಥರು ಮತ್ತು ಸರ್ವ ಭಕ್ತ ವೃಂದದವರು ಸಮಾಜದ ವೀರಭದ್ರ ದೇವಸ್ಥಾನಗಳ ಮೊತ್ತೇಸರರು, ಸಮಾಜ ಬಾಂಧವರು ಮತ್ತು ಹತ್ತು ಸಮಸ್ತರು.

