×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಸವಿತಾ ಸಮಾಜ ವಿ. ಸೌಹಾರ್ದ ಸಹಕಾರಿ ಸಂಘ : ರಕ್ತ ಪರೀಕ್ಷಾಕೇಂದ್ರ ಉದ್ಘಾಟಿಸಿದ – ಡಾ ಎಚ್. ಅಶೋಕ್

ಉಡುಪಿ : ಸವಿತಾ ಸಮಾಜ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ವತಿಯಿಂದ ಅಂಬಲಪಾಡಿ ರಾ.ಹೆ. 66ರ ಸನಿಹದಲ್ಲಿರುವ ಜಿಲ್ಲಾ ಸವಿತಾ ಸಮಾಜ ಸಮುದಾಯ ಭವನದಲ್ಲಿ ನೂತನವಾಗಿ ಆರಂಭಗೊಂಡ ರಕ್ತ ಪರೀಕ್ಷಾ ಕೇಂದ್ರ (ಕ್ಲಿನಿಕಲ್ ‘ಸವಿತಾ ಡಯಾಗ್ನೋಸ್ಟಿಕ್ ) ಸೆಂಟರನ್ನು ಸರಕಾರಿ ವೈದ್ಯಧಿಕಾರಿ (ಸರ್ಜನ್ ) ಡಾ ಎಚ್. ಅಶೋಕ್ ಮಂಗಳವಾರ ಉದ್ಘಾಟಿಸಿದರು ಸವಿತಾ ಸಮಾಜ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ ಅಧ್ಯಕ್ಷ ನವೀನ್‌ ಚಂದ್ರ ಭಂಡಾರಿ ಮಣಿಪಾಲ ಅಧ್ಯಕ್ಷತೆ ವಹಿಸಿ ಮಾತನಾಡಿ,ಸಹಕಾರಿ ಚಳವಳಿಯಲ್ಲಿ ಪ್ರಥಮ ಬಾರಿಗೆ ಕ್ಲಿನಿಕಲ್ ಲ್ಯಾಬೋರೇಟರಿ ಆರಂಭಗೊಂಡಿದೆ. ಈ ಸೆಂಟರ್ ಸಮುದಾಯದ ಅರೋಗ್ಯದ ಮೇಲೆ ಗಮನಹರಿಸಲು ಮತ್ತು ಉತ್ತಮ ಗುಣಮಟ್ಟದ ವೈದ್ಯಕೀಯ ಪರೀಕ್ಷಾ ಕೇಂದ್ರವಾಗಿದೆ ಎಂದರು.ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಕಿಶೋರು ಕುಮಾರ್ ಬೊಟ್ಯಾಡಿ ಅವರನ್ನು ಸಮ್ಮಾನಿಸಲಾಯಿತು ಮುಖ್ಯ ಅತಿಥಿಗಳಾಗಿ ನಗರಸಭೆ ಸದಸ್ಯ ಹರೀಶ್‌ ಶೆಟ್ಟಿ, ರಾಯಚೂರು ಜಿಲ್ಲಾ ಸವಿತಾ ಸಮಾಜ ಅಧ್ಯಕ್ಷ ವಿಜಯ ಭಾಸ್ಕರ್ ಇಡಗಿ, ದ.ಕ ಜಿಲ್ಲಾ ಸವಿತಾ ಸಮಾಜ ಅಧ್ಯಕ್ಷ ಆನಂದ ಭಂಡಾರಿ, ಜಿಲ್ಲಾ ಸವಿತಾ ಸಮಾಜ ಅಧ್ಯಕ್ಷ ವಿಶ್ವನಾಥ ಭಂಡಾರಿ, ಬಂಡಾರಿ ಸಮಾಜ ಸಂಘದ ಅಧ್ಯಕ್ಷ ಗುರುದಾಸ್ ಭಂಡಾರಿ, ಜಿಲ್ಲಾ ಸವಿತಾ ಸಮಾಜ ಜಿಲ್ಲಾ ಪ್ರ. ಕಾರ್ಯದರ್ಶಿ ಸದಾಶಿವ ಬಂಗೇರ,ಸುಧಾರಕ ಸಂಘದ ಜಿಲ್ಲಾಧ್ಯಕ್ಷ ಶಂಕರ್ ಭಂಡಾರಿ ಉಡುಪಿ ತಾಲೂಕು ಸವಿತಾ ಸಮಾಜ ಅಧ್ಯಕ್ಷ ರಾಜು ಭಂಡಾರಿ ಕಿನ್ನಿಮೂಲ್ಕಿ, ಸೌಹಾರ್ದ ಸಹಕಾರಿಯ ಸಿಇಒ ಮಾಲತಿ ಅಶೋಕ್‌ ಭಂಡಾರಿ ಉಪಸ್ಥಿತರಿದ್ದರು. ಪೂರ್ಣಿಮ. ಭಂಡಾರಿ ಸಮ್ಮಾನ ಪತ್ರ ವಾಚಿಸಿದರು. ಗೌರವಾಧ್ಯಕ್ಷ ಗೋವಿಂದ ಭಂಡಾರಿ ಬನ್ನಂಜೆ ಪ್ರಸ್ತಾವನೆಗೈದರು. ಸತ್ಯವತಿ ನಾಗೇಶ್ ಕಾಪು ಸ್ವಾಗತಿಸಿ, ಮಂಜುನಾಥ ಭಂಡಾರಿ ಪಡುಕೆರೆ ವಂದಿಸಿ, ನಿರೂಪಿಸಿದರು. ಸವಿತಾ ಸಮಾಜ ವಿ.ವಿ. ಸೌಹಾರ್ಧ ಸಹಕಾರಿ ಸಂಘದ ಸಿಬಂದಿ, ಸಮಾಜ ಬಾಂಧವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *