ಪಡುಕುತ್ಯಾರು: ಇಲ್ಲಿನ ಪಡುಕುತ್ಯಾರು ಕಟಪಾಡಿ ಆನೆಗುಂದಿ ಮಹಾಸಂಸ್ಥಾನದಲ್ಲಿ ಶ್ರೀ ಸರಸ್ವತೀ ಯಾಗ ಶಾಲೆಯ ಸಮರ್ಪಣೆಯು ಅಕ್ಟೋಬರ್ 24ರಂದು ನಡೆಯಲಿದೆ.ಬಾರ್ಕೂರು ಶ್ರೀ ಕಾಳಿಕಾಂಬಾ ದೇವಸ್ಥಾನದ ಆಡಳಿತ ಧರ್ಮಗಳೂ ಆನೆಗುಂದಿ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀ ವಿ ಶ್ರೀಧರ ಆಚಾರ್ಯ ಹಾಗೂ ಶ್ರೀ ಮತಿ ಚಂದ್ರಾವತಿ ಎಸ್. ಆಚಾರ್ಯ ವಡೇಯರ ಹೋಬಳಿ ಮತ್ತು ಮಕ್ಕಳು ಸುಮಾರು 50 ಲಕ್ಷ ರೂಪಾಯಿ ವೆಚ್ಚದಲ್ಲಿ ವಿಸ್ತೃತ ಮತ್ತು ನವೀಕೃತ ಯಾಗ ಶಾಲೆಯನ್ನು ಮಹಾಸಂಸ್ಥಾನದಲ್ಲಿ ಕುಲಗುರುಗಳಾದ
ಪರಮಪೂಜ್ಯ ಅನಂತಶ್ರೀವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿಗಳವರಿಗೆ ಶತಚಂಡಿಕಾ ಯಾಗದೊಂದಿಗೆ ಸಮರ್ಪಿಸಲಿದ್ದಾರೆ. ಅಕ್ಟೋಬರ್ 21ರಿಂದ ಕಾರ್ಯಕ್ರಮಗಳು ಆರಂಭಗೊಳ್ಳಲಿದೆ. ಕಾರ್ಯಕ್ರಮ ವಿವರ
ತಾ. 21.10.2024 ಸೋಮವಾರ: ಪಾರಾಯಣ ಸಂಕಲ್ಪ-ಗುರುಗಣಪತಿ ಪೂಜೆ-ಪುಣ್ಯಾಹ ವಾಚನ, ಶ್ರೀ ಗುರುಪಾದುಕಾ ಪೂಜೆ- ಶತಚಂಡೀ ಪಾರಾಯಣ ಪ್ರಾರಂಭ ತಾ.23.10.2024 ಬುಧವಾರ: ಮಹಾಸಂಕಲ್ಪ-ಯಾಗಶಾಲಾ ಮಂಟಪ ಸಂಸ್ಕಾರ, ವಾಸ್ತು-ರಾಕ್ಷೋಘ್ನ-ನವಗ್ರಹ-ಸುದರ್ಶನ ಹೋಮ-ಶತಚಂಡೀ ಯಾಗ ಕಲಶ ಪ್ರತಿಷ್ಠಾಪೂರ್ವಕ ಪೂರ್ವಾರಾಧನೆ ತಾ. 24.10.2024 ಗುರುವಾರ: ಪ್ರಾತಃಕಾಲ ಘಂಟೆ 5.30 ಕ್ಕೆ ಶ್ರೀ ಶತಚಂಡಿಕಾ ಮಹಾಯಾಗ ಪ್ರಾರಂಭ ಗಂಟೆ 10.30ಕ್ಕೆ ಪೂರ್ಣಾಹುತಿ, ಮಹಾಪೂಜೆ -ಸುಹಾಸಿನಿಪೂಜೆ- ಆಚಾರ್ಯ ದಂಪತಿ ಆರಾಧನೆ- ಜಗದ್ಗುರುಗಳವರಿಂದ ಅನುಗ್ರಹ ಪ್ರಸಾದ- ತೀರ್ಥ ಪ್ರಸಾದ ವಿತರಣೆ- ಘಂಟೆ 11.30ಕ್ಕೆ ಧಾರ್ಮಿಕ ಸಭಾ ಕಾರ್ಯಕ್ರಮ ದಿವ್ಯ ಸಾನಿಧ್ಯ ಹಾಗೂ ಆಶೀರ್ವಚನ: ಪರಮಪೂಜ್ಯ ಅನಂತಶ್ರೀವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿಗಳವರು
ಪೀಠಾಧೀಶ್ವರರು, ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠ, ಕಟಪಾಡಿ ಪಡುಕುತ್ಯಾರು ಅಧ್ಯಕ್ಷತೆ: ಶ್ರೀ ವಿ.ಶ್ರೀಧರ ಆಚಾರ್ಯ ವಡೇರಹೋಬಳಿ, ಅಧ್ಯಕ್ಷರು, ಚಾತುರ್ಮಾಸ್ಯ ವ್ರತ ನಿರ್ವಹಣಾ ಸಮಿತಿ ಹಾಗೂ ಶ್ರೀಮತ್ ಆನೆಗುಂದಿ ಜಗದ್ಗುರು ಮಹಾಸಂಸ್ಥಾನ ಸರಸ್ವತೀ ಪೀಠ ಪ್ರತಿಷ್ಠಾನ(ರಿ.) ಕಟಪಾಡಿ, ಧರ್ಮದರ್ಶಿಗಳು ಶ್ರೀ ಕಾಳಿಕಾಂಬಾ ದೇವಸ್ಥಾನ ಬಾರ್ಕೂರು ಧಾರ್ಮಿಕ ಉಪನ್ಯಾಸ: ವಿದ್ವಾನ್ ಹಿರಣ್ಯ ವೆಂಕಟೇಶ್ ಭಟ್ ಬಾಯಾರು ಘನ ಉಪಸ್ಥಿತಿ: ಮಹಾಮಹೋಪಾಧ್ಯಾಯ ವಿದ್ವಾನ್ ಪಂಜ ಭಾಸ್ಕರ ಭಟ್ , ಅಂತರಾಷ್ಟ್ರೀಯ ಜ್ಯೋತಿಷ್ಯ ವಿದ್ವಾನ್ ಉಮೇಶ್ ಆಚಾರ್ಯ ಪಡೀಲು ವೇದ ಬ್ರಹ್ಮ ಶ್ರೀ ಶಂಕರಾಚಾರ್ಯ ಕಡ್ಲಾಸ್ಕರ್ ಪಂಡಿತ್ ಹುಬ್ಬಳ್ಳಿ ಆಸ್ಥಾನ ವಿದ್ವಾಂಸರು ಆನೆಗುಂದಿ ಶ್ರೀಮತ್ ಜಗದ್ಗುರು ಮಹಾಸಂಸ್ಥಾನ ಸರಸ್ವತೀ ಪೀಠ ಕಟಪಾಡಿ ಪಡುಕುತ್ಯಾರು ಮುಖ್ಯ ಅತಿಥಿಗಳು: ಶ್ರೀ ಕೋಟ ಶ್ರೀನಿವಾಸ ಪೂಜಾರಿ ಸಂಸದರು, ಉಡುಪಿ ಚಿಕ್ಕಮಗಳೂರು ಲೋಕಸಭಾಕ್ಷೇತ್ರ ಶ್ರೀ ಸುರೇಶ್ ಶೆಟ್ಟಿ ಗುರ್ಮೆ ಶಾಸಕರು ಕಾಪು ವಿಧಾನಸಭಾ ಕ್ಷೇತ್ರ ಶ್ರೀ ರಘುಪತಿ ಭಟ್ ಉಡುಪಿ, ಮಾಜಿ ಶಾಸಕರು ಉಡುಪಿ ವಿಧಾನ ಸಭಾ ಕ್ಷೇತ್ರ ಶ್ರೀ ಕೆ.ವಾಸುದೇವ ಶೆಟ್ಟಿ ದೇವಿಪ್ರಸಾದ್ ಕನ್ಸ್ಟ್ರಕ್ಷನ್ಸ್ ಕಾಪು
ಅಧ್ಯಕ್ಷರು ಜೀರ್ಣೋದ್ಧಾರ ಸಮಿತಿ,ಶ್ರೀ ಮಾರಿಯಮ್ಮ (ಹೊಸ ಮಾರಿ ಗುಡಿ) ದೇವಸ್ಥಾನ ಕಾಪು ಶ್ರೀ ಸುಧೀರ್ ಶೆಟ್ಟಿ ಆಡಳಿತ ನಿರ್ದೇಶಕರು, ಕೀರ್ತಿ ಕನ್ಸ್ಟ್ರಕ್ಷನ್ಸ್ ಉಡುಪಿ ಶ್ರೀ ಪ್ರವೀಣ್ ಆಚಾರ್ಯ ರಂಗನಕೆರೆ, ಎರಡನೇ ಮೊಕ್ತೇಸರರು, ಶ್ರೀ ಕಾಳಿಕಾಂಬಾ ದೇವಸ್ಥಾನ ಬಾರ್ಕೂರು
ಶ್ರೀ ಸುಬ್ರಾಯ ಆಚಾರ್ಯ ಕೋಟ, ಮೂರನೇ ಮೊಕ್ತೇಸರರು ,ಶ್ರೀ ಕಾಳಿಕಾಂಬಾ ದೇವಸ್ಥಾನ ಬಾರ್ಕೂರು ಶ್ರೀ ಜನಾರ್ಧನ ಆಚಾರ್ಯ ಕಳತ್ತೂರು, ಅಧ್ಯಕ್ಷರು ಕುತ್ಯಾರು ಗ್ರಾಮಪಂಚಾಯತ್ ಶ್ರೀಮತಿ ಲತಾ ಎಸ್ ಆಚಾರ್ಯ ಕುತ್ಯಾರು, ಸದಸ್ಯರು ಕುತ್ಯಾರು ಗ್ರಾಮ ಪಂಚಾಯತ್ ಗೌರವ ಉಪಸ್ಥಿತಿ : ಶ್ರೀ ಪಿ.ವಿ ಗಂಗಾಧರ ಆಚಾರ್ಯ, ಉಡುಪಿ ಗೌರವಾಧ್ಯಕ್ಷರು, ಚಾತುರ್ಮಾಸ್ಯ ವ್ರತ ನಿರ್ವಹಣಾ ಸಮಿತಿ ಪಡುಕುತ್ಯಾರು ಶ್ರೀ ಲೋಕೇಶ್ ಎಂ.ಬಿ ಆಚಾರ್, ಕಂಬಾರು , ಪ್ರಧಾನ ಕಾರ್ಯದರ್ಶಿ ಆನೆಗುಂದಿ ಪ್ರತಿಷ್ಠಾನ ಕಟಪಾಡಿ ಪಡುಕುತ್ಯಾರು ಶ್ರೀ ಅರವಿಂದ ವೈ ಆಚಾರ್ಯ ಬೆಳುವಾಯಿ, ಕೋಶಾಧಿಕಾರಿ,ಆನೆಗುಂದಿ ಪ್ರತಿಷ್ಠಾನ ಕಟಪಾಡಿ ಪಡುಕುತ್ಯಾರು ಶ್ರೀ ಬಿ.ಸೂರ್ಯಕುಮಾರ್ ಆಚಾರ್ಯ ಹಳೆಯಂಗಡಿ, ಅಧ್ಯಕ್ಷರು ಅಸೆಟ್ ಹಾಗೂ ಪ್ರಧಾನ ಸಂಚಾಲಕರು ಶ್ರೀ ನಾಗಧರ್ಮೇಂದ್ರ ಸರಸ್ವತೀ ಸಂಸ್ಕೃತ ವೇದ ಸಂಜೀವಿನೀ ಪಾಠ ಶಾಲಾ ಪಡುಕುತ್ಯಾರು. ಶ್ರೀ ಗಣೇಶ್ ಆಚಾರ್ಯ ಕೆಮ್ಮಣ್ಣು, ಅಧ್ಯಕ್ಷರು, ಆನೆಗುಂದಿ ಗುರುಸೇವಾ ಪರಿಷತ್ ಕೇಂದ್ರ ಸಮಿತಿ ಪಡುಕುತ್ಯಾರು, ಶ್ರೀ ಬೆಳುವಾಯಿ ಸುಂದರ ಆಚಾರ್ಯ ಮಂಗಳೂರು, ಅಧ್ಯಕ್ಷರು ಶ್ರೀ ಸರಸ್ವತೀ ಗೋವು ಪರ್ಯಾವರಣ್ ಸಂರಕ್ಷಣಾ ಟ್ರಸ್ಟ್ (ರಿ) ಪಡುಕುತ್ಯಾರು. ಶ್ರೀಮತಿ ಸಂಧ್ಯಾ ಲಕ್ಷ್ಮಣ ಆಚಾರ್ಯ ಉಡುಪಿ, ಅಧ್ಯಕ್ಷರು ಶ್ರೀ ಸರಸ್ವತೀ ಮಾತೃ ಮಂಡಳಿ ಪಡುಕುತ್ಯಾರು ಬ್ರಹ್ಮಶ್ರೀ ಕೇಶವ ಶರ್ಮಾ ಇರುವೈಲು, ಶ್ರೀ ಸರಸ್ವತೀ ಪೂರ್ವ ಛಾತ್ರ ಸಂಘ ಪಡುಕುತ್ಯಾರು ( ಶ್ರೀ ನಾಗಧರ್ಮೇಂದ್ರ ಸರಸ್ವತೀ ಸಂಸ್ಕೃತ ವೇದ ಸಂಜೀವಿನೀ ಪಾಠ ಶಾಲಾ ಪಡುಕುತ್ಯಾರು) ಶ್ರೀ ಐ. ಲೋಲಾಕ್ಷ ಶರ್ಮಾ ಪಡುಕುತ್ಯಾರು, ಜಗದ್ಗುರುಗಳವರ ಪ್ರಧಾನ ಆಪ್ತ ಸಹಾಯಕರು. ಮಹಾ ಅನ್ನ ಸಂತರ್ಪಣೆ

