×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಸಮಾಜ ಸೇವಕ ಕಾಪುವಿನ ಮೊಹಮ್ಮದ್ ಫಾರೂಕ್ ಚಂದ್ರನಗರ ಇವರಿಗೆ ಚೆನ್ನೈ ಯಲ್ಲಿ ಗೌರವ ಡಾಕ್ಟರೆಟ್ ಪದವಿ ಪ್ರದಾನ

ಹತ್ತಾರು ಸಾಮಾಜಿಕ ಸಂಘ ಸಂಸ್ಥೆಗಳಲ್ಲಿ ಮುಂಚೂಣಿಯಲ್ಲಿ ಗುರುತಿಸಿ ಎಲ್ಲಾ ಬಾಂಧವರೊಂದಿಗೆ ಹೊಂದಿಕೊಂಡು ಜಾತಿ ಮತ ಬೇದವಿಲ್ಲದೆ ಸಮಾಜಕ್ಕೆ ತನ್ನಿಂದಾಗುವ ಸಹಾಯ ಮಾಡುತ್ತ ಉಡುಪಿ ಜಿಲ್ಲಾ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ದೇಶ ವಿದೇಶಗಳಲ್ಲಿ ಹತ್ತಾರು ಪ್ರಶಸ್ತಿ ಪಡೆದು ನೂರಾರು ಕಡೆಗಳಲ್ಲಿ ಗೌರವ ಸನ್ಮಾನ ಪಡೆದ ಉಡುಪಿ ಜಿಲ್ಲೆ ಕಾಪು ಪರಿಸರದ ಸಮಾಜ ಸೇವಕ ಕಾಂಗ್ರೆಸ್ ಪಕ್ಷದ ಮುಖಂಡ, ಧಾರ್ಮಿಕ ಮುಖಂಡ, ಬಟರ್ ಫ್ಲೈ ಗೆಸ್ಟ್ ಹೌಸ್ ಮತ್ತು ಪಾರ್ಟಿ ಹಾಲ್ ಚಂದ್ರನಗರ ಇದರ ಆಡಳಿತ ನಿರ್ದೇಶಕ ಮೊಹಮ್ಮದ್ ಫಾರೂಕ್ ಚಂದ್ರನಗರ ಇವರ ಸಮಾಜ ಸೇವೆಯನ್ನು ಪರಿಗಣಿಸಿ ಚೆನ್ನೈ ಯ ಭಾರತೀಯ ವಿದ್ಯಾ ಕೇಂದ್ರದ ಭವನದಲ್ಲಿ ಪೀಪಲ್ ಫಾರಂ ಆಫ್ ಇಂಡಿಯಾ ಭಾರತ್ ಸಮಾಜ್ ಸೇವಾಕ್ ಸಂಘಟಿಸಿದ ಕಾರ್ಯಕ್ರಮದಲ್ಲಿ ಗ್ಲೋಬಲ್ ಹ್ಯೂಮನ್ ಪೀಸ್ ವಿಶ್ವ ವಿದ್ಯಾಲಯ ಚೆನ್ನೈ ಘಟಕದಿಂದ ಗೌರವ ಡಾಕ್ಟರೆಟ್ ಪದವಿ ಪ್ರದಾನಿಸಲಾಯಿತು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ಲೋಬಲ್ ಹ್ಯೂಮನ್ ಪೀಸ್ ವಿಶ್ವ ವಿದ್ಯಾಲಯದ ಸ್ಥಾಪಕರು ಹಾಗೂ ಕುಲಪತಿಗಳಾದ ಡಾ| ಪಿ ಮ್ಯಾನುವೆಲ್ ವಹಿಸಿದರು ಮುಖ್ಯ ಅತಿಥಿಗಳಾಗಿ ತಮಿಳುನಾಡಿನ ನಿವೃತ್ತ ನ್ಯಾಯದಿಶಾರಾದ ಡಾ|ಕೆ.ವೆಂಕಟೇಶನ್, ತಮಿಳುನಾಡಿನ ನಿವೃತ್ತ ಕಮಿಷನರ್ ಸಂಪತ್ ಕುಮಾರ್ ಸೇರಿದಂತೆ ದೇಶ ಹಾಗೂ ವಿದೇಶದ ಅನೇಕ ಗಣ್ಯತಿಗಣ್ಯರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *