ಉಡುಪಿ ಚಿಕ್ಕಮಗಳೂರು ಬಿಜೆಪಿ ಲೋಕಸಭಾ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಎ.03 ಕ್ಕೆ ನಾಮ ಪತ್ರ ಸಲ್ಲಿಕೆ ಮಾಡುದಾಗಿ ತಿಳಿಸಿದರು ಹೋಟೆಲ್ k1 ನಲ್ಲಿ ನಡೆದ ಪತ್ರಿಕಾಗೋಷ್ಠಿ ಯನ್ನು ಉದ್ದೇಶಿಸಿ ಮಾತನಾಡಿದ ಅವರು ತಾಲೂಕು ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್ ನಲ್ಲಿ ಸದಸ್ಯನಾಗಿ ಕೆಲಸಮಾಡಿದ್ದೇನೆ ಮಂತ್ರಿ ಯಾಗಿದಾಗ ನನ್ನ ಕೋರಿಕೆಯ ಮೇರೆಗೆ ಪಂಚಾಯತ್ ಸದಸ್ಯರಿಗೆ ಗೌರವದನವನ್ನು ಮಂಜೂರು ಮಾಡಿಸಿದ್ದೇನೆ ಮೀನುಗಾರಿಕೆ ಮಂತ್ರಿಯಾಗಿದಾಗ ಹೆಜಮಾಡಿ ಬಂದರಿಗೆ 181ಕೋಟಿ ರೂ ಬಿಡುಗಡೆ ಮಾಡಿಸಿ ಮಾನ್ಯ ಮುಖ್ಯಮಂತ್ರಿ ಯವರಿಂದ ಶೀಲಾನ್ಯಾಸ ಕೆಲಸ ಆಗಿದೆ 22000 ಜನ ಮಹಿಳೆಯರಿಗೆ ಸಾಲ ಮನ್ನ ಮಾಡಿಸಿದ ಸಮಾಧಾನವಿದೆ ಹಿಂದುಳಿದ ವರ್ಗದ ಮಂತ್ರಿಯಾಗಿದ್ದಾಗ 36000 ಜನ ಬಡ ಮಕ್ಕಳನ್ನು ಏಕ ಕಾಲದಲ್ಲಿ ಹಾಸ್ಟೇಲ್ ಗೆ ಸೇರಿಸಿದ್ದೇನೆ 4 ನಾರಾಯಣ ಗುರು ವಸತಿ ಶಾಲೆಯನ್ನು ಮಾಡಿಸಿದ್ದೇನೆ ಉಡುಪಿಯಲ್ಲಿ ಅಗ್ನಿ ಪಥ್ ಶಿಬಿರ ವನ್ನು ಏರ್ಪಡಿಸಿದ್ದೇನೆ ಎಂದರು ಈ ಸಂದರ್ಭದಲ್ಲಿ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾಜಿ ಶಾಸಕರು ಲಾಲಾಜಿ ಮೆಂಡನ್ ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಜೆಡಿಯಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ ಗೀತಾಂಜಲಿ ಸುವರ್ಣ ವಾಸುದೇವ ರಾವ್ ಮುಂತಾದವರು ಉಪಸ್ಥಿತರಿದ್ದರು

