ರಾಜ್ಯೋತ್ಸವದ ಅಂಗವಾಗಿ ಕರ್ನಾಟಕ ರಕ್ಷಣಾ ವೇದಿಕೆ ಯುವಸೇನೆ ಉಡುಪಿ ಜಿಲ್ಲೆ ಇದರ ವತಿಯಿಂದ ಧ್ವಜಾರೋಹಣ ಕಾರ್ಯಕ್ರಮ ವನ್ನು ಕಂಚಿನಡ್ಕ-ಪಡುಬಿದ್ರಿ ಯಲ್ಲಿ ನಡೆಸಲಾಯಿತು. ಕ.ರ.ವೇ ಯುವಸೇನೆ ಉಡುಪಿ ಜಿಲ್ಲಾಧ್ಯಕ್ಷರಾದ ರೆಹಮಾನ್ ಪಡುಬಿದ್ರಿ ರವರು ಧ್ವಜಾರೋಹಣ ಮಾಡಿದರು ಈ ಸಂದರ್ಭ ಮಾತನಾಡಿ ಕನ್ನಡ ಭಾಷೆ ಈಗ ಅವನತಿಯತ್ತ ಸಾಗುತ್ತಿದ್ದು ಅದನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮ ಮೇಲೆ ಇದೆ ಎಂದರು. ಕಾರ್ಯಕ್ರಮದಲ್ಲಿ ಸುಜಿತ್ ಪಡುಬಿದ್ರಿ ಕ.ರ.ವೇ ಯುವಸೇನೆ ಕಾಪು ತಾಲೂಕು ಅಧ್ಯಕ್ಷರು, ಯೋಗಿಶ್ ಕಂಚಿನಡ್ಕ, ಫಿರೋಜ್ ಪಡುಬಿದ್ರಿ ಗ್ರಾಮ ಪಂಚಾಯತ್ ಸದಸ್ಯ,ಅಬುಬಕ್ಕರ್ ಮಂಚಕಲ್ ಕ.ರ.ವೇ ಯುವಸೇನೆ ಉಪಾದ್ಯಕ್ಷರು, ಸುನಿಲ್ ಕೊಟ್ಯಾನ್ ಕ.ರ.ವೇ ಯುವಸೇನೆ ಜೊತೆ ಕಾರ್ಯದರ್ಶಿ, ಇಬ್ರಾಹೀಂ ಕಂಚಿನಡ್ಕ ಎಸ್.ಡಿ.ಪಿ.ಐ ಉಡುಪಿ ಜಿಲ್ಲಾಸಮಿತಿ ಸದಸ್ಯ, ವಿನೋದ್ ಕುಮಾರ್ ಪಡುಬಿದ್ರಿ, ಕೆ.ಎಮ್.ಇಸ್ಮಾಯಿಲ್ ಶ್ರಿಂಗೇರಿ, ಅಶ್ರಫ್ ಕಂಚಿನಡ್ಕ, ಸಿರಾಜ್ ಕಂಚಿನಡ್ಕ, ಅನ್ವರ್ ಬೆಂಗರೆ, ಯಾಸೀನ್ ಪಡುಬಿದ್ರಿ, ಕೆ.ಐ ನಿಝಾಮ್ ಹಾಗು ಮತ್ತಿತರರು ಉಪಸ್ಥಿತರಿದ್ದರು.


