×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಕಾಪು : ಉಚಿತ ನೇತ್ರ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರ ಉದ್ಘಾಟನೆ

ಕಾಪು, ಜೂ. ೨೪ : ದೇಸಿಕ್ರೂ ಕಾಪು ಪ್ರೈವೇಟ್ ಲಿಮಿಟೆಡ್, ಜೇಸಿಐ ಕಾಪು ಮತ್ತು ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ ಇವರ ಸಹಭಾಗಿತ್ವದಲ್ಲಿ ಉಳಿಯಾರಗೋಳಿ ದಂಡತೀರ್ಥದಲ್ಲಿರುವ ದೇಸಿಕ್ರೂ ಪ್ರೈ. ಲಿ. ಆವರಣದಲ್ಲಿ ಜೂ. ೨೪ರಂದು ಆಯೋಜಿಸಲಾಗಿದ್ದ ಉಚಿತ ನೇತ್ರ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರವನ್ನು ಲಯನ್ಸ್ ಜಿಲ್ಲಾ ಮಾಜಿ ಗವರ್ನ್ನರ್ ಶ್ರೀಧರ ಶೇಣವ ಅವರು ಉದ್ಘಾಟಿಸಿದರು. ಬಳಿಕ ಮಾನಾಡಿದ ಅವರು ಮನುಷ್ಯನ ಜೀವನದಲ್ಲಿ ಕಣ್ಣುಗಳ ಪಾತ್ರ ಮಹತ್ವದ್ದಾಗಿದ್ದು ಕಣ್ಣುಗಳ ರಕ್ಷಣೆ ಮೂಲಕ ನಮ್ಮ ಜೀವ ಮತ್ತು ಜೀವನವನ್ನೂ ಭದ್ರವಾಗಿಸಿಕೊಳ್ಳಲು ಸಾಧ್ಯವಿದೆ. ಗ್ರಾಮೀಣ ಭಾಗದ ಜನರ ಆರೋಗ್ಯ ರಕ್ಷಣೆಗಾಗಿ ದೇಸಿಕ್ರೂ ಮತ್ತು ಜೇಸಿಐ ಸಂಸ್ಥೆಗಳು ನೇತ್ರ ತಪಾಸಣೆ ಮತ್ತು ಚಿಕಿತ್ಸಾ ಶಿಬಿರವನ್ನು ಹಮ್ಮಿಕೊಂಡಿರುವುದು ಶ್ಲಾಘನೀಯವಾಗಿದೆ. ಇಂತಹ ಕಾರ್ಯಕ್ರಮಗಳ ಮೂಲಕ ಜನರಲ್ಲಿ ಧೈರ್ಯ ತುಂಬಲು ಸಾಧ್ಯವಿದೆ ಎಂದರು. ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ನೇತ್ರ ಚಿಕತ್ಸಕರಾದ ಡಾ| ನಿಷ್ಕರ್ಷ್, ಡಾ| ಅಂಜನಾ, ಡಾ| ನಿತಿನ್, ಕಾಪು ಜೇಸಿಐ ಅಧ್ಯಕ್ಷೆ ದೀಕ್ಷಾ ರವಿನಂದನ್, ಕಾರ್ಯದರ್ಶಿ ಪ್ರಸಾದ್ ಆಚಾರ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಿಬಿರದಲ್ಲಿ ಸುಮಾರು ೬೦ಕ್ಕೂ ಅಽಕ ಮಂದಿ ಸಾರ್ವಜನಿಕರು ಪಾಲ್ಗೊಂಡಿದ್ದು ನಾಲ್ಕು ಮಂದಿ ಫಲಾನುಭವಿಗಳನ್ನು ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸ್ಸೆಗೆ ಆಯ್ಕೆ ಮಾಡಲಾಯಿತು. ದೇಸಿಕ್ರೂ ಕಾಪು ಪ್ರೈ ಲಿ. ನ ಮಾನವ ಸಂಪನ್ಮೂಲ ಅಽಕಾರಿ ವೀಣಾ ಎಸ್. ಶೆಟ್ಟಿ ಸ್ವಾಗತಿಸಿ, ವಂದಿಸಿದರು. ರಾಕೇಶ್ ಕುಂಜೂರು ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *